IPL 2022 – ಗುಜರಾತ್ ಟೈಟಾನ್ಸ್ ಸೇರಿಕೊಳ್ಳುತ್ತಾರಾ ಸುರೇಶ್ ರೈನಾ..?

ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ಮತ್ತೆ ಅದೃಷ್ಟ ಒಲಿಯುತ್ತಾ ?2022ರ ಐಪಿಎಲ್ ಬಿಡ್ಡಿಂಗ್ ನಲ್ಲಿ ಯಾರಿಗೂ ಬೇಡವಾದ ಸುರೇಶ್ ರೈನಾ 15ನೇ ಆವೃತ್ತಿಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಾರಾ ? ನಿರಾಸೆಗೊಂಡಿದ್ದ ಸುರೇಶ್ ರೈನಾ ಅಭಿಮಾನಿಗಳ ಮುಖದಲ್ಲಿ ಮತ್ತೆ ಮಂದಹಾಸ ಬೀರುತ್ತಾ ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅನ್ನೋ ಸಣ್ಣ ಆಶಾವಾದ ಇದೆ. ಯಾಕಂದ್ರೆ ಸುರೇಶ್ ರೈನಾ ಐಪಿಎಲ್ ಬಿಡ್ಡಿಂಗ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿ ಮಾಡದಿದ್ದಾಗ ತುಂಬಾನೇ ಬೇಸರಗೊಂಡಿದ್ದರು. ಈ ಬಗ್ಗೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಕೂಡ ನೀಡಿಲ್ಲ. ಆಪ್ತ ಸ್ನೇಹಿತ ಮಹೇಂದ್ರ ಸಿಂಗ್ ಧೋನಿಯ ತಂಡಕ್ಕೂ ಬೇಡವಾಗಿದ್ದ ಸುರೇಶ್ ರೈನಾ ಮನಸ್ಸಿಗೆ ತುಂಬಾನೇ ಘಾಸಿಯಾಗಿರಬಹುದು. ಸಿಎಸ್ ಕೆ ತಂಡವನ್ನು ಯಶಸ್ಸಿನ ಎತ್ತರಕ್ಕೇರಿಸುವುದರಲ್ಲಿ ಸುರೇಶ್ ರೈನಾ ಅವರ ಪಾತ್ರ ಕೂಡ ಬಹಳಷ್ಟಿದೆ. ಹೀಗಾಗಿ ಫಿಟ್ ನೆಸ್ ಇಲ್ಲ, ಯಾವುದೇ ದೇಸಿ ಪಂದ್ಯಗಳನ್ನು ಆಡಿಲ್ಲ ಎಂಬ ಕಾರಣಕ್ಕೆ ರೈನಾ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ಸುರೇಶ್ ರೈನಾ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಳ್ಳುವ ಅವಕಾಶವಿದೆ. ಅದಕ್ಕೆ ಗುಜರಾತ್ ಟೈಟಾನ್ಸ್ ತಂಡದ ಮ್ಯಾನೇಜ್ ಮೆಂಟ್ ಮನಸ್ಸು ಮಾಡಬೇಕಿದೆ. ಈಗಾಗಲೇ ಇಂಗ್ಲೆಂಡ್ ನ ಜೇಸನ್ ರಾಯ್ ಅವರು ಗುಜರಾತ್ ಟೈಟಾನ್ಸ್ ತಂಡಕ್ಕೆ ಕೈಕೊಟ್ಟಿದ್ದಾರೆ. ಬಯೋಬಬಲ್ ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಜೇಸನ್ ರಾಯ್ ಹೊರಗುಳಿದಿದ್ದಾರೆ. IPL 2022 -Suresh raina replacement options for Jason Roy in IPL 2022
ಹೀಗಾಗಿ ಜೇಸನ್ ರಾಯ್ ಜಾಗಕ್ಕೆ ಸುರೇಶ್ ರೈನಾ ಆಯ್ಕೆಯಾಗಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿದೆ. ಈ ನಡುವೆ, ಗುಜರಾತ್ ಟೈಟಾನ್ಸ್ ತಂಡಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಸಾಕಷ್ಟು ಹೆಸರುಗಳಿವೆ. ಆದ್ರೂ ರೈನಾಗೆ ಅವಕಾಶ ನೀಡಿದ್ರೂ ನೀಡಬಹುದು. ಇದಕ್ಕೆ ಇನ್ನೊಂದು ಕಾರಣವೂ ಇದೆ. ಈ ಹಿಂದೆ ಸುರೇಶ್ ರೈನಾ ಅವರು ಗುಜರಾತ್ ಲಯನ್ಸ್ ತಂಡದ ನಾಯಕನಾಗಿದ್ದರು. 2016 ಮತ್ತು 2017ರಲ್ಲಿ ಸಿಎಸ್ ಕೆ ತಂಡಕ್ಕೆ ನಿಷೇಧ ಹೇರಿದ್ದಾಗ ಸುರೇಶ್ ರೈನಾ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದರು. ಹೀಗಾಗಿ ಗುಜರಾತ್ ಎಂಬ ಹೆಸರಿನ ಜೊತೆಗೆ ನಂಟು ಇರುವುದರಿಂದ ಸುರೇಶ್ ರೈನಾಗೆ ಚಾನ್ಸ್ ಸಿಕ್ಕಿದ್ರೂ ಸಿಗಬಹುದು. ಯಾವುದಕ್ಕೂ ಕಾದು ನೋಡೋಣ.