Suresh Raina – ಗುಜರಾತ್ ಗೂ ರೈನಾ ಬೇಡ್ವಂತೆ..! ಮಿಸ್ಟರ್ ಐಪಿಎಲ್ ಗೆ ಇದೆಂಥ ಅವಮಾನ..!

ಬಹುಶಃ ಸುರೇಶ್ ರೈನಾ ನಂತಹ ಆಟಗಾರನಿಗೆ ಈ ರೀತಿಯಾಗಬಾರದಿತ್ತು. ಛೇ.. ಪಾಪ ಅನ್ಸುತ್ತೆ. ಆಪ್ತ ಗೆಳೆಯನಿಗೋಸ್ಕರ ತನ್ನ ಕ್ರಿಕೆಟ್ ಬದುಕನ್ನೇ ತ್ಯಾಗ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಹೇಳಿದ ತಕ್ಷಣವೇ ತಾನು ಕೂಡ ನಿವೃತ್ತಿ ಹೇಳಿದ್ದರು. ತನಗೆ ಆಡುವ ವಯಸ್ಸು ಇದ್ರೂ ಕೂಡ ಸುರೇಶ್ ರೈನಾ ಸಡನ್ ನಿರ್ಧಾರ ತೆಗೆದುಕೊಂಡಿದ್ದರು. 32ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಐಪಿಎಲ್ ನಲ್ಲಿ ಆಡುವ ಇರಾದೆಯನ್ನು ಹೊಂದಿದ್ದರು.
ಆದ್ರೆ 2022ರ ಐಪಿಎಲ್ ನಲ್ಲಿ ಸುರೇಶ್ ರೈನಾ ಯಾವ ಫ್ರಾಂಚೈಸಿಗೂ ಬೇಡವಾದ್ರು. 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಭಾಗಿಯಾಗಿದ್ದ ಸುರೇಶ್ ರೈನಾ ಅವರನ್ನು ಐಪಿಎಲ್ ನ ಧೋನಿ ಟೀಮ್ ಕಡೆಗಣಿಸಿತ್ತು.

ಮಿಸ್ಟರ್ ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆದಾಗ ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಆದ್ರೂ ಕೊನೆ ಗಳಿಗೆಯಲ್ಲಿ ಸುರೇಶ್ ರೈನಾ ಯಾವ ತಂಡದಲ್ಲಾದ್ರೂ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಅವಕಾಶವೂ ಸಿಕ್ಕಿತ್ತು. ಗುಜರಾತ್ ಟೈಟಾನ್ಸ್ ತಂಡಕ್ಕೆ ಜೇಸನ್ ರಾಯ್ ಕೈಕೊಟ್ರು. ಆಗ ರೈನಾ ಅಭಿಮಾನಿಗಳು ಸುರೇಶ್ ರೈನಾ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಳ್ಳುತ್ತಾರೆ ಅಂತ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಮಾಡಿದ್ದರು. IPL 2022- Suresh Raina not even in consideration for Gujarat Titans ?
ಆದ್ರೆ ಅದು ಕೂಡ ಬಾಗಿಲು ಮುಚ್ಚಿದೆಯಂತೆ. ಗುಜರಾತ್ ಟೈಟಾನ್ಸ್ ತಂಡದ ಮೂಲದ ಪ್ರಕಾರ ಸುರೇಶ್ ರೈನಾ ಅವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲವಂತೆ. .
ಸುರೇಶ್ ರೈನಾ ಅವರು ಗುಜರಾತ್ ತಂಡವನ್ನು ಸೇರಿಕೊಳ್ಳುವುದಿಲ್ಲ. ಅಲ್ಲದೆ ಅವರನ್ನು ನಾವು ಪರಿಗಣನೆಗೆ ಕೂಡ ತೆಗೆದುಕೊಂಡಿಲ್ಲ ಎಂದು ಗುಜರಾತ್ ಟೈಟಾನ್ಸ್ ತಂಡದ ಟೀಮ್ ಮ್ಯಾನೇಜ್ ಮೆಂಟ್ ನ ಮೂಲಗಳಿಂದ ತಿಳಿದು ಬಂದಿದೆ.
ಐಪಿಎಲ್ ನಲ್ಲಿ ಸುರೇಶ್ ರೈನಾ ಗರಿಷ್ಠ ರನ್ ದಾಖಲಿಸಿದವರ ಪಟ್ಟಿಯಲ್ಲಿ ನಾಲ್ಕನೇಯರಾಗಿದ್ದಾರೆ. ವಿರಾಟ್ ಕೊಹ್ಲಿ (6283 ರನ್ ), ರೋಹಿತ್ ಶರ್ಮಾ (5784 ರನ್ ) ಮತ್ತು ಶಿಖರ್ ಧವನ್ (5611 ರನ್) ನಂತರ ಸುರೇಶ್ ರೈನಾ(5528 ರನ್) ಇದ್ದಾರೆ.