ಕ್ರಿಕೆಟ್ ಅಂಗಳದ “ಗಬ್ಬರ್” ಎನಿಸಿರೋ ಶಿಖರ್ ಧವನ್, ಐಪಿಎಲ್ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದು, ಐಪಿಎಲ್ನಲ್ಲಿ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಐಪಿಎಲ್ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಿಖರ್ ಧವನ್, ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ನಲ್ಲಿ ತಮ್ಮ 200ನೇ ಪಂದ್ಯವಾಡಿದ ಅವರು, 6 ಸಾವಿರ ರನ್ಗಳನ್ನು ಪೂರೈಸುವ ಮೂಲಕ ಐಪಿಎಲ್ನಲ್ಲಿ ಹೆಚ್ಚು ರನ್ಗಳಿಸಿದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಶಿಖರ್ ಧವನ್ ಅವರಿಗಿಂತ ಮೊದಲು ಈ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ, ಮೊದಲ ಸ್ಥಾನದಲ್ಲಿದ್ದರೆ. ರೋಹಿತ್ ಶರ್ಮ 3ನೇ ಸ್ಥಾನದಲ್ಲಿದ್ದಾರೆ.
ಪ್ರಸಕ್ತ 2022ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಶಿಖರ್ ಧವನ್, ಈ ಹಿಂದೆ ಹಲವು ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಐಪಿಎಲ್ನಲ್ಲಿ ಈವರೆಗೂ ಡೆಕ್ಕನ್ ಚಾರ್ಜರ್ಸ್, ಸನ್ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.
ಅಲ್ಲದೇ ಇದೇ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ ಶಿಖರ್ ಧವನ್, ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತದ 3ನೇ ಬ್ಯಾಟ್ಸ್ಮನ್ ಎನಿಸಿದರು. ಇನ್ನಿಂಗ್ಸ್ನ 5.2ನೇ ಓವರ್ನಲ್ಲಿ ಮಹೀಶ್ ತೀಕ್ಷಣ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ 9 ಸಾವಿರ ರನ್ಗಳ ಗಡಿದಾಟಿದರು.
IPLನಲ್ಲಿ ಹೆಚ್ಚು ರನ್ಗಳು:
ವಿರಾಟ್ ಕೊಹ್ಲಿ – 6402
ಶಿಖರ್ ಧವನ್ – 6085
ರೋಹಿತ್ ಶರ್ಮ – 5764
ಡೇವಿಡ್ ವಾರ್ನರ್ – 5663
ಸುರೇಶ್ ರೈನಾ – 5528