IPL 2022- RR Vs RCB ರಾಜಸ್ತಾನ ರಾಯಲ್ಸ್ಗೆ ಆರ್ ಸಿಬಿ ಚಾಲೆಂಜ್..? ಆರ್ ಸಿಬಿ ತಂಡದಲ್ಲಿ ಮೇಜರ್ ಸರ್ಜರಿ..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪುಣೆಯ ಎಮ್.ಸಿ.ಎ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವಿನ ಆಲೆಯಲ್ಲಿ ತೇಲಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡಕ್ಕೆ ಆರ್ ಸಿಬಿ ಠಕ್ಕರ್ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಶೋಚನೀಯ ಸೋಲನ್ನು ಅನುಭವಿಸಿರುವ ಆರ್ ಸಿಬಿ ತಂಡ ಎಚ್ಚೆತ್ತುಕೊಳ್ಳಬೇಕಿದೆ. ಮಾಡಿರುವ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕಿದೆ. ಮುಖ್ಯವಾಗಿ ಬ್ಯಾಟ್ಸ್ ಮೆನ್ ಗಳು ನೈಜ ಆಟವನ್ನು ಆಡದಿದ್ರೆ ರಾಜಸ್ತಾನ ರಾಯಲ್ಸ್ ವಿರುದ್ಧ ಗೆಲ್ಲುವುದು ಕಷ್ಟ. ಹಾಗೇ, ಆರ್ ಸಿಬಿ ಬೌಲರ್ ಗಳು ಕೂಡ ಬಲಿಷ್ಠ ರಾಜಸ್ತಾನ ರಾಯಲ್ಸ್ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ಪ್ಲಾನ್ ಮಾಡಿಕೊಳ್ಳಬೇಕು. ಇಲ್ಲದಿದ್ರೆ ರನ್ ಮಳೆಯೇ ಹರಿದು ಬರುವುದು ಖಚಿತ. IPL 2022- RR Vs RCB – Match 39- Royals challengers bengaluru Probable XIs
ಇನ್ನೊಂದೆಡೆ ಆರ್ ಸಿಬಿ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆರಂಭಿಕ ಅನುಜ್ ರಾವತ್ ಬದಲು ಮಹಿಪಾಲ್ ಲೊಮ್ರೊರ್ ಸ್ಥಾನ ಪಡೆದುಕೊಳ್ಳಬಹುದು. ಹಾಗೇ ಸುಯಾಶ್ ಪ್ರಭುದೇಸಾಯಿ ಜಾಗದಲ್ಲಿ ಆಲ್ ರೌಂಡರ್ ಗೌತಮ್ ಅನೀಶ್ವರ್ ಗೆ ಚಾನ್ಸ್ ನೀಡಿದ್ರೂ ನೀಡಬಹುದು.
ಇನ್ನುಳಿದಂತೆ ತಂಡದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡುವಂತಿಲ್ಲ.
ಮತ್ತೊಂದೆಡೆ ಆರ್ ಸಿಬಿ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ವಿರಾಟ್ ಕೊಹ್ಲಿಯವರ ಕೆಟ್ಟ ಫಾರ್ಮ್. ಟೂರ್ನಿಯಲ್ಲಿ ಎರಡು ಬಾರಿ ಡಕೌಟ್ ಆಗಿರುವ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ರೆ ಒಳ್ಳೆಯದ್ದು ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ವಿರಾಟ್ ಕೊಹ್ಲಿ ಫಾಫ್ ಜೊತೆ ಇನಿಂಗ್ಸ್ ಆರಂಭಿಸಿದ್ರೆ ಮಹಿಪಾಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್, ಶಹಬಾಝ್ ಅಹಮ್ಮದ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಲೇಬೇಕಿದೆ.
ಆರ್ ಸಿಬಿ ಈಗಾಗಲೇ ಎಂಟು ಪಂದ್ಯಗಳನ್ನು ಆಡಿದೆ. ಇದರಲ್ಲಿ ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಸದ್ಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್ ಗೆ ಎಂಟ್ರಿ ಪಡೆಯಲು ಇನ್ನೂ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕು.
ಈ ನಿಟ್ಟಿನಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಆರ್ ಸಿಬಿ ಪಕ್ಕಾ ಪ್ಲಾನ್ ಮಾಡಿಕೊಂಡು, ಸಂಘಟಿತವಾದ ಆಟವನ್ನು ಆಡಬೇಕು. ಫಾಫ್ ಡುಪ್ಲೆಸಸ್ ಬಳಗ ರಾಜಸ್ತಾನ ರಾಯಲ್ಸ್ ತಂಡಕ್ಕೆ ಯಾವ ರೀತಿ ಸವಾಲು ಹಾಕುತ್ತದೆ ಎಂಬ ಕುತೂಹಲ ಒಂದು ಕಡೆಯಾದ್ರೆ, ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳುತ್ತಾರಾ ಅನ್ನೋದು ಪ್ರಶ್ನೆ ಹಾಗೂ ಆತಂಕ ಆರ್ ಸಿಬಿ ಅಭಿಮಾನಿಗಳಲ್ಲಿ ಇದೆ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್
ವಿರಾಟ್ ಕೊಹ್ಲಿ
ಅನುಜ್ ರಾವತ್ / ಮಹಿಪಾಲ್ ಲೊಮ್ರೋರ್
ಗ್ಲೇನ್ ಮ್ಯಾಕ್ಸ್ ವೆಲ್
ಸುಯಾಶ್ ಪ್ರಭು ದೇಸಾಯಿ/ ಗೌತಮ್ ಅನೀಶ್ವರ್
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ಶಹಬಾಝ್ ಅಹಮ್ಮದ್
ವನಿಂದು ಹಸರಂಗ
ಹರ್ಷೆಲ್ ಪಟೇಲ್,
ಜೋಶ್ ಹ್ಯಾಝೆಲ್ ವುಡ್
ಮಹಮ್ಮದ್ ಸೀರಾಜ್