IPL 2022-RCB Vs LSG ಯಾರಿಗೆ ಬೆಂಬಲ..? ಆರ್ ಸಿಬಿ ವಿರುದ್ಧ ಆಡಲಿರುವ ಇಬ್ಬರು ಕನ್ನಡಿಗರು..! ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್
ಏಪ್ರಿಲ್ 19. 15ನೇ ಆವೃತ್ತಿಯ ಐಪಿಎಲ್ ಟೂರ್ನಿ.ಮ್ಯಾಚ್ ನಂಬರ್ 31. ಸಮಯ ರಾತ್ರಿ 7.30. ಮುಂಬೈನ ಡಿ.ವೈ. ಪಾಟೀಲ್ ಅಂಗಣ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿ.
ಈ ಬಾರಿಯ ಟೂರ್ನಿಯ ಬಲಿಷ್ಠ ತಂಡಗಳ ನಡುವಿನ ಹೋರಾಟ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರಿನ ಹುಡುಗ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸವಾಲು ಹಾಕಲಿದೆ.
ಹಾಗೇ ನೋಡಿದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿಗಿಂತಲೂ ಬಲಿಷ್ಠವಾಗಿದೆ. ಆರ್ ಸಿಬಿ ತಂಡದಲ್ಲಿ ಹೊಡಿಬಡಿ ಆಟಗಾರರು ಇದ್ದಾರೆ. ಮ್ಯಾಚ್ ಫಿನಿಶರ್ ಇದ್ದಾರೆ. ಅತ್ಯುತ್ತಮ ಬೌಲಿಂಗ್ ದಾಳಿಯೂ ಇದೆ. ಆದ್ರೆ ಆಲ್ ರೌಂಡರ್ ಗಳ ಕೊರತೆ ಕಾಣುತ್ತಿದೆ.
ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಹಾಗಲ್ಲ. ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಮನಮೋಹಕ ಆಟದ ಜೊತೆ ಆಲ್ ರೌಂಡರ್ ಗಳ ಆಲ್ ರೌಂಡ್ ಆಟವೇ ತಂಡದ ಬಲವನ್ನು ಹೆಚ್ಚಿಸಿದೆ. ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ಮನೀಷ್ ಪಾಂಡೆ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೇ ಇದ್ರೂ ಫೀಲ್ಡಿಂಗ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಹಾಗೇ ಆಯುಷ್ ಬಡೋನಿ ಅಮೋಘ ಆಟ ಕೂಡ ತಂಡಕ್ಕೆ ನೆರವಾಗಲಿದೆ. ಇನ್ನು ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಅವರ ಆಲ್ ರೌಂಡ್ ಆಟ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಬೌಲಿಂಗ್ ನಲ್ಲಿ ಆವೇಶ್ ಖಾನ್, ದುಶ್ಮಂತ್ ಚಾಮೀರಾ ಪ್ರಮುಖ ವೇಗದ ಅಸ್ತ್ರಗಳಾದ್ರೆ, ರವಿ ಬಿಷ್ಣೋಯ್ ಅವರ ಸ್ಪಿನ್ ಮ್ಯಾಜಿಕ್ ಆರ್ ಸಿಬಿ ಬ್ಯಾಟ್ಸ್ ಮೆನ್ ಗಳಿಗೆ ಸವಾಲು ಆಗಲಿದೆ.
ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಲ್ಲದೆ ರನ್ ಸರಾಸರಿಯಲ್ಲಿ ಆರ್ ಸಿಬಿಗಿಂತ ಒಂದು ಹೆಜ್ಜೆ ಮುಂದಿದೆ. ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಮೂರನೇ ಸ್ಥಾನದಲ್ಲಿದೆ. ಆರ್ ಸಿಬಿ ನಾಲ್ಕನೇ ಸ್ಥಾನದಲ್ಲಿದೆ.
ಒಟ್ಟಿನಲ್ಲಿ ಇವತ್ತಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಇಬ್ಬರು ಕನ್ನಡಿಗರು ನಮ್ಮ ಆರ್ ಸಿಬಿ ವಿರುದ್ಧವೇ ಆಡುತ್ತಿದ್ದಾರೆ. ವಿಪರ್ಯಾಸ ಅಂದ್ರೆ ನಮ್ಮ ಆರ್ ಸಿಬಿ ತಂಡದ 11ರ ಬಳಗದಲ್ಲಿ ಕನ್ನಡಿಗರೇ ಇಲ್ಲ. ಹೀಗಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಯಾರಿಗೆ ಸಪೋರ್ಟ್ ಮಾಡ್ತಾರೆ ಅನ್ನೋದು ಅವರವರಿಗೆ ಬಿಟ್ಟ ವಿಚಾರ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್
ಕೆ.ಎಲ್. ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
ಮನೀಷ್ ಪಾಂಡೆ
ದೀಪಕ್ ಹೂಡಾ
ಆಯುಷ್ ಬಡೋನಿ
ಮಾರ್ಕಸ್ ಸ್ಟೋನಿಸ್
ಕೃನಾಲ್ ಪಾಂಡ್ಯ
ಜೇಸನ್ ಹೋಲ್ಡರ್
ಆವೇಶ್ ಖಾನ್
ದುಶ್ಮಂತ್ ಚಾಮೀರಾ
ರವಿ ಬಿಷ್ಣೋಯ್