IPL 2022- Match No-3 – RCB vs punjab kings- ಆರ್ ಸಿಬಿಗೆ ಕಾಡಲಿದೆ ಇಬ್ಬರು ಆಟಗಾರರ ಅಲಭ್ಯತೆ… ಫಾಫ್ ಡುಪ್ಲೆಸಸ್ ಜೊತೆ ಇನಿಂಗ್ಸ್ ಆರಂಭಿಸೋದು ಯಾರು ?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೂರನೇ ಪಂದ್ಯ. ಸೂಪರ್ ಸಂಡೇ ಸೂಪರ್ ಮ್ಯಾಚ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಲಿದೆ.
ಹೊಸ ನಾಯಕತ್ವ, ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿರುವ ಆರ್ ಸಿಬಿ ತಂಡ ಈ ಬಾರಿ ಕಪ್ ನಮ್ದೆ.. ಮಿಸ್ ಆಗೋದೇ ಇಲ್ಲ ಎಂಬ ರೀತಿಯಲ್ಲೇ ತಯಾರಿಯನ್ನು ಕೂಡ ಮಾಡಿಕೊಂಡಿದೆ.
ಆದ್ರೆ ಆರ್ ಸಿಬಿಯ ಮೊದಲ ಪಂದ್ಯಕ್ಕೆ ಇಬ್ಬರು ಪ್ರಮುಖ ಆಟಗಾರರು ಗೈರು ಆಗಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವೇಗಿ ಜೋಶ್ ಹ್ಯಾಝಲ್ ವುಡ್ ಅವರ ಅನುಪಸ್ಥಿತಿ ಆರ್ ಸಿಬಿ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಬಂದ ವಿರುವ ಕಾರಣ ಏಪ್ರಿಲ್ 5ರವರೆಗೆ ಇಬ್ಬರು ಆಟಗಾರರ ಸೇವೆ ಆರ್ ಸಿಬಿ ಸಿಗುವುದಿಲ್ಲ.

ಹೀಗಾಗಿ ಆರ್ ಸಿಬಿ ಒಬ್ಬ ಆಲ್ ರೌಂಡರ್ ಮತ್ತು ಪರಿಣಾಮಕಾರಿ ಬೌಲರ್ ನ ಕೊರತೆ ಕಾಣುತ್ತಿದೆ. ಅಷ್ಟೇ ಅಲ್ಲ, ಆರ್ ಸಿಬಿ ತಂಡಕ್ಕೆ ಮೂರನೇ ಕ್ರಮಾಂಕದ ಬ್ಯಾಟ್ಸ್ ಮೆನ್ ನ ಕೊರತೆ ಕೂಡ ಕಾಡುತ್ತಿದೆ.
ಇನ್ನು ನಾಯಕ ಫಾಫ್ ಡುಪ್ಲೆಸಸ್ ಜೊತೆ ಇನಿಂಗ್ಸ್ ಯಾರು ಆರಂಭಿಸ್ತಾರೆ ಅನ್ನೋದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸ್ತಾರೋ ಅಥವಾ ಮೂರನೇ ಕ್ರಮಾಂಕದಲ್ಲಿ ಆಡುವುದು ಸೂಕ್ತವೋ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಒಂದು ವೇಳೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ರೆ, ಮೂರನೇ ಕ್ರಮಾಂಕದಲ್ಲಿ ಮಹಿಪಾಲ್ ಲೊಮ್ರೋ ಆಡಬಹುದು. ಹಾಗೇ ವಿರಾಟ್ ಕೊಹ್ಲಿ ಮೂರನೇ ಕ್ರಮಾಂದಲ್ಲಿ ಆಡಿದ್ರೆ, ಅನುಜ್ ರಾವತ್ ಅವರು ಫಾಫ್ ಡುಪ್ಲೆಸಸ್ ಜೊತೆ ಇನಿಂಗ್ಸ್ ಆರಂಭಿಸಬಹುದು.
ಇನ್ನುಳಿದಂತೆ ತಂಡದ ಬೌಲಿಂಗ್ ವಿಭಾಗದಲ್ಲಿ ಮಹಮ್ಮದ್ ಸೀರಾಜ್, ಹರ್ಷೆಲ್ ಪಟೇಲ್, ಸಿದ್ದಾರ್ಥ್ ಮತ್ತು ಹಸರಂಗ ಅವರು ಪ್ರಮುಖ ಪಾತ್ರ ವಹಿಸಬೇಕಿದೆ. ಆಲ್ ರೌಂಡರ್ ಶಹಬಾಝ್ ಅಹಮ್ಮದ್ ಕೂಡ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಬೇಕಿದೆ. IPL -2022 – RCB VS Punjab Kings -Royal challengers bengaluru Predicted XI
ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ದಿನೇಶ್ ಕಾರ್ತಿಕ್, ರುದರ್ ಫೋರ್ಡ್ ವಹಿಸಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಫಿನ್ ಆಲೆನ್ ಜವಾಬ್ದಾರಿಯಿಂದ ಆಡಬೇಕಿದೆ. ಹೀಗಾಗಿ ಮೊದಲ ಪಂದ್ಯಕ್ಕೆ ಆರ್ ಸಿಬಿಯ ಟೀಮ್ ಕಾಂಬಿನೇಷನ್ ಗೆ ಅಷ್ಡೇನೂ ತೊಂದರೆ ಆಗಲ್ಲ. ಆದರೂ ಪಂಜಾಬ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಅನ್ನೋದು ಮುಖ್ಯವಾಗಿರುತ್ತದೆ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡುಪ್ಲೆಸಸ್ (ನಾಯಕ), ವಿರಾಟ್ ಕೊಹ್ಲಿ , ಅನುಜ್ ರಾವತ್ ಅಥವಾ ಮಹಿಪಾಲ್ ಲೊಮ್ರೊರ್, ಫಿನ್ ಆಲೆನ್, ದಿನೇಶ್ ಕಾರ್ತಿಕ್, ದಿನೇಶ್ ಕಾರ್ತಿಕ್, ಶೆರ್ಫಾನ್ ರುಥರ್ ಫೋರ್ಡ್, ವನಿಂದು ಹಸರಂಗ, ಶಹಬಾಝ್ ಅಹಮ್ಮದ್, ಹರ್ಷೆಲ್ ಪಟೇಲ್, ಮಹಮ್ಮದ್ ಸೀರಾಜ್, ಸಿದ್ದಾರ್ಥ್ ಕೌಲ್.