ipl 2022- RCB Vs DC – ಆರ್ ಸಿಬಿಯಿಂದ ಸಿರಾಜ್ ಔಟ್..? ಡೆಲ್ಲಿ ಕ್ಯಾಪಿಟಲ್ಸ್ ನಲ್ಲಿ ಯಶ್ ಧೂಲ್ ಇನ್..?
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹೋರಾಟ ನಡೆಸಲಿವೆ.
ಏಪ್ರಿಲ್ 16ರ ರಾತ್ರಿ 7.30ಕ್ಕೆ ನಡೆಯಲಿರುವ ಈ ಪಂದ್ಯ ಕೂಡ ಜಿದ್ದಾಜಿದ್ದಿನಿಂದ ಸಾಗಲಿದೆ. ಡೆಲ್ಲಿ ತಂಡಕ್ಕೆ ಇದು ಐದನೇ ಪಂದ್ಯವಾದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರನೇ ಪಂದ್ಯ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಪಂದ್ಯಗಳಲ್ಲಿ ಸೋಲು ಗೆಲುವಿನ ರುಚಿ ಕಂಡಿದೆ.
ಹಾಗೇ ಆರ್ ಸಿಬಿ ತಂಡ ಕೂಡ. ಮೊದಲ ಪಂದ್ಯವನ್ನು ಸೋತ ನಂತರ ಸತತ ಮೂರು ಪಂದ್ಯಗಳನ್ನು ಗೆದ್ದಿದ್ದ ಆರ್ ಸಿಬಿ ಗೆಲುವಿನ ಓಟಕ್ಕೆ ಸಿಎಸ್ ಕೆ ಬ್ರೇಕ್ ಹಾಕಿತ್ತು. ಹೀಗಾಗಿ ಆರ್ ಸಿಬಿ ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಇನ್ನು ತಂಡಗಳ ಬಲಾಬಲವನ್ನು ಗಮನಿಸಿದಾಗ ಉಭಯ ತಂಡಗಳು ಸಮಬಲದಲ್ಲಿವೆ. ಆದ್ರೆ ಪವರ್ ಪ್ಲೇ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸಿದೆ. ಕಾರಣ. ಪೃಥ್ವಿ ಶಾ ಅವರ ಬಿರುಸಿನ ಬ್ಯಾಟಿಂಗ್. ಪವರ್ ಪ್ಲೇ ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಪೃಥ್ವಿ ಶಾ ಕ್ರೀಸ್ ನಲ್ಲಿದ್ದಷ್ಟು ಸಮಯ ಆರ್ ಸಿಬಿಗೆ ಅಪಾಯ ತಪ್ಪಿದ್ದಲ್ಲ. ಇನ್ನೊಂದೆಡೆ ಡೇವಿಡ್ ವಾರ್ನರ್. ಕ್ರಿಸ್ ಅಂಟಿಕೊಂಡು ಆಡಿದ್ರೆ ಆರ್ ಸಿಬಿ ಬೌಲರ್ ಗಳು ಸುಸ್ತಾಗಬಹುದು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಬ್ ಪಂತ್ ಅವರನ್ನೇ ಹೆಚ್ಚು ನಂಬಿಕೆ ಕೊಂಡಿದೆ. ರೊವ್ಮನ್ ಪಾವೆಲ್ ಮತ್ತು ಲಲಿತ್ ಯಾದವ್ ತಂಡಕ್ಕೆ ಆಧಾರವಾಗಬೇಕಿದೆ. ಹಾಗೇ ಶಾರ್ದೂಲ್ ಥಾಕೂರ್ ಮತ್ತು ಅಕ್ಷರ್ ಪಟೇಲ್ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ತಂಡಕ್ಕೆ ನೆರವಾಗುತ್ತಿರುವುದು ಪ್ಲಸ್ ಪಾಯಿಂಟ್. ಹಾಗೇ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಮಿಟ್ವೆಲ್ ಮಾರ್ಶ್ ಇಂದಿನ ಪಂದ್ಯವನ್ನು ಆಡುವ ಸಾಧ್ಯತೆ ಇದೆ. ಮುಷ್ತಾಫಿಝುರ್ ರಹಮಾನ್ ಮತ್ತು ಖಲೀಲ್ ಅಹಮ್ಮದ್ ತಂಡದಲ್ಲಿರುವ ವೇಗದ ಅಸ್ತ್ರಗಳು. ಆರು ಮಂದಿ ಪ್ರಮುಖ ಬೌಲರ್ ಗಳು ಇರುವುದರಿಂದ ಲಲಿತ್ ಯಾದವ್ ಬದಲು ಯಶ್ ಧೂಲ್ 11ರ ಬಳಗದಲ್ಲಿ ಕಾಣಿಸಿಕೊಂಡ್ರೂ ಅಚ್ಚರಿ ಏನಿಲ್ಲ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ. ಹರ್ಷೆಲ್ ಪಟೇಲ್ ತಂಡಕ್ಕೆ ವಾಪಸ್ ಆಗಿರೋದು ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಆದ್ರೆ ಮಹಮ್ಮದ್ ಸೀರಾಜ್ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಸೀರಾಜ್ ಬದಲು ಸಿದ್ಧಾರ್ಥ್ ಕೌಲ್ ಸ್ಥಾನ ಪಡೆದ್ರೂ ಅಚ್ಚರಿ ಏನಿಲ್ಲ. ipl 2022- RCB Vs DC -team prediction, Playing XI
ಇನ್ನುಳಿದಂತೆ ಫಾಫ್ ಡು ಪ್ಲೇಸಸ್ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಮೇಲೆ ಈ ಪಂದ್ಯದ ಫಲಿತಾಂಶ ನಿಂತಿದೆ. ಅನುಜ್ ರಾವತ್, ಸುಯಾಶ್ ಪ್ರಭು ದೇಸಾಯಿ, ಶಹಬಾಝ್ ಅಹಮ್ಮದ್ ಇನ್ನೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ಜವಾಬ್ದಾರಿಯನ್ನು ಅರಿತುಕೊಂಡು ಆಡಿದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದು ಕಷ್ಟವೇನೂ ಆಗಲ್ಲ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್ (ನಾಯಕ)
ಅನುಜ್ ರಾವತ್
ವಿರಾಟ್ ಕೊಹ್ಲಿ
ಶಹಬಾಝ್ ಅಹಮ್ಮದ್
ಗ್ಲೇನ್ ಮ್ಯಾಕ್ಸ್ ವೆಲ್
ಸುಯಾಶ್ ಪ್ರಭು ದೇಸಾಯಿ
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ವನಿಂದು ಹಸರಂಗ
ಹರ್ಷೆಲ್ ಪಟೇಲ್
ಮಹಮ್ಮದ್ ಸೀರಾಜ್ / ಸಿದ್ಧಾರ್ಥ್ ಕೌಲ್
ಜೋಶ್ ಹ್ಯಾಝೆಲ್ ವುಡ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಪೃಥ್ವಿ ಶಾ
ಡೇವಿಡ್ ವಾರ್ನರ್
ರಿಷಬ್ ಪಂತ್ (ನಾಯಕ/ವಿ.ಕಿ)
ಯಶ್ ಧೂಲ್ /ಲಲಿತ್ ಯಾದವ್
ರೊವ್ಮನ್ ಪಾವೆಲ್
ಮಿಟ್ಚೆಲ್ ಮಾರ್ಶ್
ಅಕ್ಷರ್ ಪಟೇಲ್
ಶಾರ್ದೂಲ್ ಥಾಕೂರ್
ಕುಲದೀಪ್ ಯಾದವ್
ಮುಷ್ತಾಫಿಝುರ್ ರಹಮಾನ್
ಖಲೀಲ್ ಅಹಮ್ಮದ್