IPL 2022- RCB – ಬೂಮ್ರಾ -ವುಮ್ರಾ ಯಾರು ಬೇಡ..! ಅಹಂಕಾರಿ ವಿರಾಟ್ ಕೊಹ್ಲಿ ಹೇಳಿದ್ದೇಕೆ..?

ವಿರಾಟ್ ಕೊಹ್ಲಿ 2008ರಿಂದ 2012ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಬ್ಬ ಸಾಮಾನ್ಯ, ಪ್ರತಿಭಾನ್ವಿತ ಆಟಗಾರ.
2013ರಿಂದ 2021ರವರೆಗೆ ಆರ್ ಸಿಬಿ ತಂಡದ ನಾಯಕ.. ಆರ್ ಸಿಬಿಯ ಗ್ರೇಟ್ ಪ್ಲೇಯರ್. ಐಪಿಎಲ್ ನ ಸೂಪರ್ ಸ್ಟಾರ್. 2022ರಲ್ಲಿ ಆರ್ ಸಿಬಿಯ ಹಿರಿಯ ಆಟಗಾರ ಮತ್ತು ಲೀಡರ್.
ಅಂದ ಹಾಗೇ ಪ್ರತಿ ಐಪಿಎಲ್ ನಲ್ಲೂ ಆರ್ ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತ ಹೇಳ್ತಾನೆ ಬಂದಿದ್ದಾರೆ. ಆದ್ರೆ ಆರ್ ಸಿಬಿ ಕಪ್ ಗೆದ್ದಿಲ್ಲ. ಮೂರು ಬಾರಿ ರನ್ನರ್ ಅಪ್ ಆಗಿರೋದೇ ದೊಡ್ಡ ಸಾಧನೆ.
ಇದೀಗ ಪಾರ್ಥಿವ್ ಪಾಟೀಲ್ ಅವರ ಒಂದು ಹೇಳಿಕೆಯನ್ನು ಗಮನಿಸಿದಾಗ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವ ಯೋಚನೆಯನ್ನು ಸರಿಯಾಗಿ ಮಾಡೇ ಇಲ್ಲ ಅನ್ಸುತ್ತೆ. ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ಸಂಸ್ಕøತಿಯನ್ನು ಆರ್ ಸಿಬಿ ಬೆಳೆಸಿಕೊಂಡಿಲ್ಲ. ಏನಿದ್ರೂ ತಂಡಕ್ಕೆ ಸ್ಟಾರ್ ಆಟಗಾರರು ಬೇಕು ಅಷ್ಟೇ. ಅವರಿಂದ ಮಾತ್ರ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯ. ಯುವ ಪ್ರತಿಭೆಗಳು ಚಿಲ್ರೆಗಳು ಎಂಬ ಧಾಟಿಯಲ್ಲಿದೆ ಆರ್ ಸಿಬಿ ಮ್ಯಾನೇಜ್ ಮೆಂಟ್.
ಹಾಗೇ ಇದಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹೊರತಲ್ಲ ಎಂಬುದು ಪಾರ್ಥಿವ್ ಪಟೇಲ್ ಹೇಳಿಕೆಯಿಂದ ಗೊತ್ತಾಗುತ್ತದೆ.
ಹೌದು, 2014ರಲ್ಲಿ ಪಾರ್ಥಿವ್ ಪಟೇಲ್ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು. ಆಗ ವಿರಾಟ್ ಕೊಹ್ಲಿ ತಂಡದ ನಾಯಕನಾಗಿದ್ದರು. ವಿರಾಟ್‍ಗಿಂತ ಹಿರಿಯ ಆಟಗಾರನಾಗಿರುವ ಪಾರ್ಥಿವ್ ಪಟೇಲ್ ಆರ್ ಸಿಬಿ ತಂಡವನ್ನು ಕಟ್ಟಲು ಕೆಲವೊಂದು ಸಲಹೆಗಳನ್ನು ನೀಡಿದ್ದರು.
ಹೀಗಾಗಿಯೇ ವಿರಾಟ್ ಕೊಹ್ಲಿ ಬಳಿ ಜಸ್ಪ್ರಿತ್ ಬೂಮ್ರಾ ಅವರನ್ನು ಆರ್ ಸಿಬಿಗೆ ಕರೆತರುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದ್ರೆ ವಿರಾಟ್ ಕೊಹ್ಲಿ ಪಾರ್ಥಿವ್ ಪಟೇಲ್ ಸಲಹೆಯನ್ನು ತಿರಸ್ಕರಿಸಿದ್ದರು.
ಬೂಮ್ರಾ – ವುಮ್ರಾ ಏನು ಮಾಡ್ತಾರೆ. ಬಿಟ್ಟು ಬಿಡು ಎಂದು ವಿರಾಟ್ ಕೊಹ್ಲಿ ಅವರು ಪಾರ್ಥಿವ್ ಪಟೇಲ್ ಗೆ ಹೇಳ್ತಾರೆ.

ಈ ವಿಷ್ಯವನ್ನು ಸ್ವತಃ ಪಾರ್ಥಿವ್ ಪಟೇಲ್ ಅವರೇ ಈಗ ಹೇಳಿಕೊಂಡಿದ್ದಾರೆ.
ಅಚ್ಚರಿ ಅಂದ್ರೆ ವಿರಾಟ್ ಕೊಹ್ಲಿಗೆ ಜಸ್ಪ್ರಿತ್ ಬೂಮ್ರಾ ಅವರು ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ 2013ರಲ್ಲಿ ಬೂಮ್ರಾ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿ ವಿಕೆಟ್ ಕೂಡ ಕಬಳಿಸಿದ್ದರು.
ಹೀಗಾಗಿ ಬೂಮ್ರಾ ಬಗ್ಗೆ ವಿರಾಟ್ ಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಆದ್ರೆ ವಿರಾಟ್ ಗೆ ಬೂಮ್ರಾ ಮೇಲೆ ನಂಬಿಕೆ ಇರಲಿಲ್ಲ. ಬೂಮ್ರಾ ಒಬ್ಬ ಮಾಮೂಲಿ ಬೌಲರ್ ಎಂದೇ ಪರಿಗಣಿಸಿದ್ದರು.
ಆದ್ರೆ ಪಾರ್ಥಿವ್ ಪಟೇಲ್ ಗೆ ಜಸ್ಪ್ರಿತ್ ಬೂಮ್ರಾ ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಬಗ್ಗೆ ಗೊತ್ತಿತ್ತು. ಯಾಕಂದ್ರೆ ಗುಜರಾತ್ ರಣಜಿ ತಂಡದ ನಾಯಕನಾಗಿದ್ದ ಪಾರ್ಥಿವ್ ಪಟೇಲ್, ಬೂಮ್ರಾ ಅವರನ್ನು ಬಹಳ ಹತ್ತಿರದಿಂದ ಗಮನಿಸಿದ್ರು. ಹೀಗಾಗಿ ವಿರಾಟ್ ಗೆ ಬೂಮ್ರಾ ಅವರನ್ನು ಆರ್ ಸಿಬಿ ತಂಡಕ್ಕೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಇನ್ನು ವಿಶೇಷ ಅಂದ್ರೆ ಜಸ್ಪ್ರಿತ್ ಬೂಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಡೆಬ್ಯೂ ಮಾಡಿದಾಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿದ್ದರು. Leave it, what will he do: Virat Kohli had brushed away suggestion to try Jasprit Bumrah for RCB
2014-2015ರ ರಣಜಿ ಟೂರ್ನಿಗಳಲ್ಲಿ ಬೂಮ್ರಾ ಅವರು ಅಷ್ಟೊಂದು ಶ್ರೇಷ್ಠ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ನಂತರ ತನ್ನ ಬೌಲಿಂಗ್ ನಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡ್ರು. ಪರಿಣಾಮ ಬೂಮ್ರಾ ಅವರು ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದರು. ಟೀಮ್ ಇಂಡಿಯಾದ ಉಪನಾಯಕನ ಹುದ್ದೆಯನ್ನು ಅಲಂಕರಿಸಿದ್ದರು.

ಅಚ್ಚರಿಯಂದ್ರೆ ಆರ್ ಸಿಬಿ ತಂಡಕ್ಕೆ ಬೂಮ್ರಾ ಬೇಡ ಎಂದಿದ್ದ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕಬಳಿಸಲು ಜಸ್ಪ್ರಿತ್ ಬೂಮ್ರಾ ಎಂಬ ಅಸ್ತ್ರವೇ ಬೇಕಾಗಿತ್ತು. ಬೂಮ್ರಾ – ವುಮ್ರಾ ಎಂದಿದ್ದ ವಿರಾಟ್ ಕೊಹ್ಲಿ ನಾಲ್ಕೈದು ವರ್ಷಗಳ ಬಳಿಕ ಅವರ ಬೆಲೆ ಗೊತ್ತಾಯ್ತು. ಅದಕ್ಕೆ ಅನ್ನೋದು ಯಾರನ್ನು ಲಘುವಾಗಿ, ಕೀಳಾಗಿ ಪರಿಗಣಿಸಬಾರದು ಎಂದು.
ಏನೇ ಆಗ್ಲಿ, ವಿರಾಟ್ ಕೊಹ್ಲಿ ಎಷ್ಟೇ ದೊಡ್ಡ ಕ್ರಿಕೆಟಿಗನೂ ಆಗಿರಬಹುದು.. ಶತಕಗಳ ಮೇಲೆ ಶತಕ ದಾಖಲಿಸಿರಬಹುದು.. ವಿಶ್ವ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟಿಗನೇ ಆಗಿರಬಹುದು. ಆದ್ರೆ ಮತ್ತೊಬ್ಬ ಯುವ ಪ್ರತಿಭಾನ್ವಿತ ಆಟಗಾರರನ್ನು ಕೀಳಾಗಿ ನೋಡಬಾರದು. ವಿರಾಟ್ ಕೊಹ್ಲಿಗೆ ಈಗಾಗಲೇ ಮನವರಿಕೆ ಆಗಿರುತ್ತೆ. ಅಂದು ಬೂಮ್ರಾ ಬಗ್ಗೆ ಆ ರೀತಿ ಹೇಳಬಾರದಿತ್ತು ಎಂದು. ಆದ್ರೆ ವಿರಾಟ್ ಕೊಹ್ಲಿಗೆ ಇದೆಲ್ಲಾ ನೆನಪಿದೆಯೋ ಇಲ್ವೋ ಗೊತ್ತಿಲ್ಲ.. ಜಸ್ಪ್ರಿತ್ ಬೂಮ್ರಾ ಇಂದು ವಿಶ್ವ ಕ್ರಿಕೆಟ್ ನ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 29 ಟೆಸ್ಟ್ ಪಂದ್ಯಗಳಲ್ಲಿ 123 ವಿಕೆಟ್ ಹಾಗೂ 70 ಏಕದಿನ ಪಂದ್ಯಗಳಲ್ಲಿ 113 ವಿಕೆಟ್ ಮತ್ತು 57 ಟಿ-20 ಪಂದ್ಯಗಳಲ್ಲಿ 67 ವಿಕೆಟ್ ಪಡೆದಿರೋದು ಇದಕ್ಕೆ ನಿದರ್ಶನ.