IPL 2022- RCB -ಮೊದಲ ಪಂದ್ಯ ದೇವ್ರಿಗೆ ಅರ್ಪಣೆ ಮಾಡಿದ ಆರ್ ಸಿಬಿ..!

ನಾಯಕ ಬದಲಾದ್ರೂ ಆರ್ ಸಿಬಿ ಹಣೆಬರೆಹ ಬದಲಾಗಲಿಲ್ಲ. ಗೆಲ್ಲಲು 206 ರನ್ ಗಳ ಸವಾಲು ನೀಡಿದ್ರೂ ಆರ್ ಸಿಬಿಗೆ ಗೆಲ್ಲುವ ಅದೃಷ್ಟವಿರಲಿಲ್ಲ. ಬ್ಯಾಟ್ಸ್ ಮೆನ್ ಗಳು ಅದ್ಭುತ ಪ್ರದರ್ಶನ ನೀಡಿದ್ರೂ ಪ್ರಯೋಜನವೇನೂ ಆಗಲಿಲ್ಲ. ಅತ್ಯುತ್ತಮ ಫಾರ್ಮ್ ನಲ್ಲಿರುವ ಬೌಲರ್ ಗಳಿಗೆ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿಹಾಕಲಿಲ್ಲ. ಒತ್ತಡಕ್ಕೆ ಸಿಲುಕಿ ಕ್ಯಾಚ್ ಹಿಡಿಯಲು ಕೂಡ ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲೇ ಆರ್ ಸಿಬಿ ತಂಡ ಸಾಂಘಿಕ ಆಟವನ್ನು ಆಡಲಿಲ್ಲ. ಆರ್ ಸಿಬಿಯು ಮೊದಲ ಪಂದ್ಯವನ್ನು ಸೋತು ದೇವರಿಗೆ ಅರ್ಪಣೆ ಮಾಡಿದೆ. ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಹಾಗೇ ನೋಡಿದ್ರೆ ಆರ್ ಸಿಬಿ ಚೆನ್ನಾಗಿಯೇ ಆಡಿದೆ. ನಾಯಕ ಫಾಫ್ ಡುಪ್ಲೆಸಸ್ ನಾಯಕ ಆಟವನ್ನಾಡಿದ್ರೆ, ವಿರಾಟ್ ಕೊಹ್ಲಿ ಲೀಡರ್ ರೀತಿಯಲ್ಲೇ ಆಡಿದ್ರು. ದಿನೇಶ್ ಕಾರ್ತಿಕ್ ಕೂಡ ಮ್ಯಾಚ್ ಫಿನಿಶರ್ ರೀತಿಯಲ್ಲೇ ಬ್ಯಾಟ್ ಬೀಸಿದ್ರು. ಆರಂಭಿಕ ಅನುಜ್ ರಾವತ್ ಕೂಡ ಭರವಸೆ ಮೂಡಿಸುವಂತಹ ಆಟವನ್ನಾಡಿದ್ರು.

ಆದ್ರೆ ಆರ್ ಸಿಬಿ ಬೌಲರ್ ಗಳು ನಿರಾಸೆ ಮೂಡಿಸಿದ್ರು. ಮೊದಲ ಹತ್ತು ಓವರ್ ಗಳಲ್ಲಿ ದುಬಾರಿಯಾದ್ರು. ಆದ್ರೂ 15ನೇ ಓವರ್ ನಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳುವ ಸೂಚನೆಯನ್ನು ಆರ್ ಸಿಬಿ ಬೌಲರ್ ಗಳು ನೀಡಿದ್ದರು. IPL 2022- RCB -Turning Point: Smith’s Dropped Catch
ಈ ಹಂತದಲ್ಲಿ ಆರ್ ಸಿಬಿ ಬೌಲರ್ ಗಳನ್ನು ದುಃಸ್ವಪ್ನವಾಗಿ ಕಾಡಿದ್ದು ಒಡಿಯನ್ ಸ್ಮಿತ್ ಮತ್ತು ಶಾರೂಖ್ ಖಾನ್. ಇವರಿಬ್ಬರು ಆರನೇ ವಿಕೆಟ್ ಗೆ 59 ರನ್ ದಾಖಲಿಸಿ ಆರ್ ಸಿಬಿ ಕೈಯಿಂದ ಗೆಲುವನ್ನು ಕಸಿದುಕೊಂಡ್ರು. ಕೇವಲ 25 ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.
ಮಹಮ್ಮದ್ ಸೀರಾಜ್, ಹರ್ಷೆಲ್ ಪಟೇಲ್ ಬೌಲಿಂಗ್ ದಾಳಿ ಇವರಿಬ್ಬರಿಗೆ ಲೆಕ್ಕಕ್ಕೇ ಇರಲಿಲ್ಲ. ಆ ರೀತಿಯಲ್ಲೇ ಬ್ಯಾಟ್ ಬೀಸಿದ್ರು. ಈ ನಡುವೆ, ಒಡಿಯನ್ ಸ್ಮಿತ್ ಅವರ ಕ್ಯಾಚ್ ಅನ್ನು ಅನುಜ್ ರಾವತ್ ಕೈ ಚೆಲ್ಲಿದ್ರು. ಇದು ಪಂಜಾಬ್ ಕಿಂಗ್ಸ್ ತಂಡಕ್ಕೆ ವರದಾನವಾಯ್ತು.
ಒಟ್ಟಿನಲ್ಲಿ ಆರ್ ಸಿಬಿ ತಂಡ ಮೊದಲ ಪಂದ್ಯ ಸೋಲುತ್ತಿರುವುದು ಇದೇನೂ ಹೊಸತಲ್ಲ. ಈ ಹಿಂದಿನ ಟೂರ್ನಿಗಳಲ್ಲೂ ಆರ್ ಸಿಬಿ ಮೊದಲ ಪಂದ್ಯವನ್ನು ಸೋತಿದ್ದೇ ಹೆಚ್ಚು. ಹೀಗಾಗಿ ಆರ್ಸಿಬಿ ಮೊದಲ ಪಂದ್ಯವನ್ನು ದೇವರಿಗೆ ಅರ್ಪಣೆ ಎಂದು ಟ್ರೋಲ್ ಕೂಡ ಮಾಡಲಾಗುತ್ತಿದೆ.
ಏನೇ ಆಗ್ಲಿ, ಹೊಸ ನಾಯಕ ಫಾಫ್ ಡುಪ್ಲೆಸಸ್ ಸಾರಥ್ಯದಲ್ಲಿ ಆರ್ ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಭರವಸೆಯನ್ನು ಮೂಡಿಸಿದೆ. ಮುಂದಿನ ಪಂದ್ಯದಲ್ಲಿ ಏನು ಆಗುತ್ತೋ ಕಾದು ನೋಡೋಣ.