ಪಂಜಾಬ್ ಕಿಂಗ್ಸ್ ವಿರುದ್ಧ ಸೈಲೆಂಟಾಗಿ ಸವಾರಿ ಮಾಡುತ್ತಾ ಎಸ್ ಆರ್ ಎಚ್..! PBKS vs SRH Probable XIs
ಏಪ್ರಿಲ್ 17. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 28. ಸಮಯ -ಮಧ್ಯಾಹ್ನ 3.30. ಡಿ.ವೈ. ಪಾಟೀಲ್ ಅಂಗಣ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ಮುಖಾಮುಖಿ
ಹೌದು, ಸತತ ಎರಡು ಪಂದ್ಯಗಳನ್ನು ಸೋತ ಬಳಿಕ ಸನ್ ರೈಸರ್ಸ್ ಹೈದ್ರಬಾದ್ ತಂಡ ಈಗ ಗೆಲುವಿನ ಲಯಕ್ಕೆ ಮರಳಿದೆ. ಹ್ಯಾಟ್ರಿಕ್ ಗೆಲುವಿನ ಉನ್ಮಾದದಲ್ಲಿರುವ ಎಸ್ ಆರ್ ಎಚ್ ತಂಡ ಇದೀಗ ಆರನೇ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಆರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ನಾಲ್ಕನೇ ಗೆಲುವನ್ನು ಎದುರು ನೋಡುತ್ತಿದೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಕೂಡ ಗೆಲುವಿನ ಆತ್ಮ ವಿಶ್ವಾಸದಲ್ಲಿದೆ. ಗೆಲುವು, ಸೋಲಿನೊಂದಿಗೆ ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಎರಡು ಪಂದ್ಯಗಳಲ್ಲಿ ಸೋತಿರುವ ಮಯಾಂಕ್ ಬಳಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅಲ್ಲದೆ ಪಂಜಾಬ್ ಕಿಂಗ್ಸ್ ತಂಡ ಕೂಡ ನಾಲ್ಕನೇ ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಉಭಯ ತಂಡಗಳು ಹಿಂದಿನ ಪಂದ್ಯಗಳನ್ನು ಗೆದ್ದಿರುವ ಕಾರಣ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ವಿನ್ನಿಂಗ್ ಕಾಂಬಿನೇಷನ್ ಅನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳೇ ಹೆಚ್ಚು. IPL 2022 – Punjab Kings vs Sunrisers Hyderabad Probable XIs
ಮುಖ್ಯವಾಗಿ ಎಸ್ ಆರ್ ಎಚ್ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಆದ್ರೆ ಪರಿಣಾಮಕಾರಿಯಾಗುವಂತಹ ಆಟಗಾರರು ಇದ್ದಾರೆ. ಇದುವೇ ಎಸ್ ಆರ್ ಎಚ್ ತಂಡ ಪ್ಲಸ್ ಪಾಯಿಂಟ್ ಕೂಡ ಹೌದು. ಸೈಲೆಂಟ್ ಆಗಿಯೇ ಎದುರಾಳಿಯನ್ನು ಬಗ್ಗುಬಡಿಯುವ ಎಸ್ ಆರ್ ಎಚ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಅವರೇ ಪ್ರೇರಣೆ. ವಿಲಿಯಮ್ಸನ್ ಅವರ ಅನುಭವ ತಂಡಕ್ಕೆ ವರದಾನವಾಗುತ್ತಿದೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರು ಇದ್ದಾರೆ. ಆದ್ರೆ ಸ್ಥಿರ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಹೊಂದಾಣಿಕೆಯ ಆಟವನ್ನಾಡಿದ್ರೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ಸಾಧಿಸುವುದು ಕಷ್ಟವೇನೂ ಆಗಲ್ಲ.
ಒಟ್ಟಿನಲ್ಲಿ ಡಿ.ವೈ. ಪಾಟೀಲ್ ಅಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ)
ಶಿಖರ್ ಧವನ್
ಜಾನಿ ಬೇರ್ ಸ್ಟೋವ್
ಲಿಯಾಮ್ ಲಿವಿಂಗ್ ಸ್ಟೋನ್
ಶಾರೂಕ್ ಖಾನ್
ಜಿತೇಶ್ ಶರ್ಮಾ
ಒಡಿಯನ್ ಸ್ಮಿತ್
ಕಾಗಿಸೊ ರಬಾಡ
ರಾಹುಲ್ ಚಾಹರ್
ಆರ್ಶದೀಪ್ ಸಿಂಗ್
ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೇನ್ ಮಾಕ್ರ್ರಮ್
ನಿಕೊಲಾಸ್ ಪೂರನ್
ಶಶಾಂಕ್ ಸಿಂಗ್
ಸುಚೀತ್
ಭುವನೇಶ್ವರ್ ಕುಮಾರ್
ಮಾಕ್ರೊ ಜಾನ್ಸೆನ್
ಉಮ್ರಾನ್ ಮಲ್ಲಿಕ್
ಟಿ. ನಟರಾಜನ್
#PunjabKings #ipl2022 #KaneWilliamson #sportskarnataka #mayank agarwal #SunrisersHyderabad