IPL 2022- RCB vs Punjab KIngs – ಅಂಕಿ ಅಂಶಗಳ ಲೆಕ್ಕಪತ್ರದಲ್ಲಿ ಆರ್ ಸಿಬಿಗಂತ ಪಂಜಾಬ್ ಕಿಂಗ್ಸ್ ಬೆಸ್ಟ್ ಟೀಮ್..!

2022ರ ಐಪಿಎಲ್ ಟೂರ್ನಿಯ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.
ಮುಂಬೈನ ಡಿ ವೈ ಪಾಟೀಲ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ರೋಚಕತೆಯನ್ನು ಪಡೆದುಕೊಂಡಿದೆ. ಆರ್ ಸಿಬಿ ನಮ್ಮ ಬೆಂಗಳೂರು ನಗರವನ್ನು ಪ್ರತಿನಿಧಿಸುವ ತಂಡ. ಆದ್ರೆ ನಮ್ಮ ಬೆಂಗಳೂರಿನ ಹುಡುಗ ಮಯಾಂಕ್ ಅಗರ್ ವಾಲ್ ಅವರು ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಕನ್ನಡಿಗರ ನಡುವಿನ ಫೈಟ್ ಅಂತನೇ ಹೇಳಬಹುದು.
ಅದೇನೇ ಇರಲಿ, ಈಗಾಗಲೇ ಉಭಯ ತಂಡಗಳು ಈಗಾಗಲೇ ಭರ್ಜರಿ ತಯಾರಿಯನ್ನೇ ನಡೆಸಿವೆ. ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಬೇಕು ಎಂಬ ಲೆಕ್ಕಚಾರದಲ್ಲಿವೆ. ತಂಡಗಳ ಬಲಾಬಲದ ಬಗ್ಗೆ ಹೇಳುವುದಾದ್ರೆ ಆರ್ ಸಿಬಿಗಿಂತ ಪಂಜಾಬ್ ಕಿಂಗ್ಸ್ ತಂಡ ಬಲಿಷ್ಠವಾಗಿಯೇ ಕಾಣುತ್ತಿದೆ. ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ಹೀಗಾಗಿ ಪಂಜಾಬ್ ತಂಡದ ವಿರುದ್ದ ಆರ್ ಸಿಬಿ ಸಂಘಟಿತ ಆಟವನ್ನೇ ಆಡಬೇಕಿದೆ. ಮುಖ್ಯವಾಗಿ ವಿರಾಟ್, ಫಾಫ್ ಡುಪ್ಲೆಸಸ್ ಮತ್ತು ದಿನೇಶ್ ಕಾರ್ತಿಕ್ ಅವರ ಬ್ಯಾಟ್ ನಿಂದ ರನ್ ಗಳು ಹರಿದುಬರಲೇಬೇಕು. ಹರ್ಷೆಲ್ ಪಟೇಲ್ ಮತ್ತು ಮಹಮ್ಮದ್ ಸೀರಾಜ್, ಹಸರಂಗ ಬೌಲಿಂಗ್ ವಿಭಾಗದಲ್ಲಿ ಪರಿಣಾಮಕಾರಿಯಾಗಲೇಬೇಕಿದೆ.

ಇನ್ನು ಅಂಕಿ ಅಂಶಗಳ ಪ್ರಕಾರವೂ ಆರ್ ಸಿಬಿಗಿಂತ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದೆ.
ಕಳೆದ 14 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್ ಸಿಬಿ 28 ಪಂದ್ಯಗಳನ್ನು ಆಡಿದೆ. ಇದರಲ್ಲಿ 15 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದುಕೊಂಡ್ರೆ, 13 ಪಂದ್ಯಗಳಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿದೆ.
ಹಾಗೇ ಕಳೆದ ಐದು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಮೂರು ಪಂದ್ಯ ಹಾಗೂ ಆರ್ ಸಿಬಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನೊಂದೆಡೆ ಕಳೆದ ಬಾರಿಯ ಟೂರ್ನಿಯ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ಆರು ಪಂದ್ಯಗಳಲ್ಲಿ ಪಂಜಾಬ್ ಜಯ ಸಾಧಿಸಿದ್ರೆ, ಆರ್ ಸಿಬಿ ಏಳು ಪಂದ್ಯಗಳಲ್ಲಿ ಗೆಲುವು ಕಂಡಿದೆ.
ಸವಾಲನ್ನು ಬೆನ್ನಟ್ಟುವಾಗ ಪಂಜಾಬ್ ಕಿಂಗ್ಸ್ 9 ಬಾರಿ ಜಯ ಸಾಧಿಸಿದ್ರೆ, ಆರ್ ಸಿಬಿ ಆರು ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಹೀಗಾಗಿ ಆರ್ ಸಿಬಿ ಟಾಸ್ ಗೆದ್ರೆ ಮೊದಲು ಬ್ಯಾಟಿಂಗ್ ಮಾಡುವುದು ತುಸು ಒಳ್ಳೆಯದ್ದು ಅಂತ ಅನ್ಸುತ್ತೆ. IPL 2022- Punjab Kings’ Head-to-Head Record Against Royal Challengers Bangalore
ಒಟ್ಟಿನಲ್ಲಿ ಹಳೆಯ ದಾಖಲೆಗಳು, ಅಂಕಿ ಅಂಶಗಳು ಏನೇ ಇರಲಿ, ಅದು ಲೆಕ್ಕಕ್ಕೆ ಮಾತ್ರ ಅಂತ ಹೇಳಬಹುದು. ಅದೇ ರೀತಿ ಅಂಕಿ ಅಂಶಗಳು ತಂಡದ ದಾಖಲೆಗಳಿಗೆ ಬಲತುಂಬಬಹುದು ಎಂದು ಹೇಳಿದ್ರೂ, ಕೆಲವೊಂದು ಬಾರಿ ಅಂಕಿ ಅಂಶಗಳು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯುವ ಹಾಗಿಲ್ಲ. ಏನೇ ಆದ್ರೂ ಆದ್ರೂ ಆಯಾ ದಿನ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದು ಮುಖ್ಯವಾಗಿರುತ್ತದೆ.