ಅಂಬಟಿ ರಾಯುಡು 78(39) ಬಿರುಸಿನ ಬ್ಯಾಟಿಂಗ್ ನಡುವೆಯೂ ನಿರ್ಣಾಯಕ ಹಂತದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಪಂಜಾಬ್ ಕಿಂಗ್ಸ್, 11 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮಣಿಸಿದೆ.
ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 4 ವಿಕೆಟ್ಗೆ 187 ರನ್ಗಳಿಸಿತು. ಈ ಟಾರ್ಗೆಟ್ ಎದುರಿಸಿದ ಚೆನ್ನೈ ಸೂಪರ್ ಕಿಂಗ್ಸ್, ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 176 ರನ್ಗಳಿಸಿತು. ಆ ಮೂಲಕ ಸಿಎಸ್ಕೆ ಟೂರ್ನಿಯಲ್ಲಿ 6ನೇ ಸೋಲು ಕಂಡರೆ, 4ನೇ ಗೆಲುವು ಸಾಧಿಸಿದ ಪಂಜಾಬ್, 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೇರಿತು.
ರಾಯುಡು ಏಕಾಂಗಿ ಹೋರಾಟ:
ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಅಂಬಟಿ ರಾಯುಡು 78 ರನ್(39 ಬಾಲ್, 7 ಬೌಂಡರಿ, 6 ಸಿಕ್ಸ್) ಆಸರೆಯಾದರು. ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರಾಯುಡು, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಿರುಸಿನ ಬ್ಯಾಟಿಂಗ್ ಮೂಲಕ 78 ರನ್ಗಳ ಅದ್ಭುತ ರನ್ ಕಲೆಹಾಕಿದ್ದ ರಾಯುಡು ತಂಡವನ್ನ ಗೆಲುವಿನ ದಡಸೇರಿಸಲು ಎಡವಿದರು. ಅಂಬಟಿ ರಾಯುಡು ಅವರಿಗೆ ಉತ್ತಮ ಸಾಥ್ ನೀಡಿದ ಋತುರಾಜ್ ಗಾಯಕ್ವಾಡ್(30) ರನ್ಗಳಿಸಿದರು. ಈ ಇವರಿಬ್ಬರು 2ನೇ ವಿಕೆಟ್ಗೆ 49 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಸಿಎಸ್ಕೆ ಬ್ಯಾಟಿಂಗ್ ವೈಫಲ್ಯ:
ಪಂಜಾಬ್ ನೀಡಿದ 188 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ, ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(1) ಬಹುಬೇಗನೆ ವಿಕೆಟ್ ಒಪ್ಪಿಸಿದರೆ. ನಂತರ ಬಂದ ಮಿಚೆಲ್ ಸ್ಯಾಂಟ್ನರ್(9), ಶಿವಂ ದುಬೆ(8) ತಂಡಕ್ಕೆ ಆಸರೆಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರವೀಂದ್ರ ಜಡೇಜಾ(21*), ಎಂಎಸ್ ಧೋನಿ(12) ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪಂಜಾಬ್ ಕಿಂಗ್ಸ್ ಪರ ಕಗೀಸೋ ರಬಾಡ(2/23), ರಿಷಿ ಧವನ್(2/39), ಅರ್ಷದೀಪ್ ಸಿಂಗ್(1/23) ಹಾಗೂ ಸಂದೀಪ್ ಶರ್ಮ(1/40) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಧವನ್ ಅದ್ಭುತ ಬ್ಯಾಟಿಂಗ್:
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88* ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಪ್ರಸಕ್ತ ಐಪಿಎಲ್ನ ಎರಡನೇ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್ಕೆ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 2ನೇ ವಿಕೆಟ್ಗೆ 110(71) ರನ್ಗಳ ಜೊತೆಯಾಟದ ಮೂಲಕ ತಂಡದ ಬೆನ್ನೆಲುಬಾಗಿ ಮಿಂಚಿದರು. ನಂತರ ಬಂದ ಲಿವಿಂಗ್ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯಲ್ಲಿ ಬಂದ ಜಾನಿ ಬೈರ್ಸ್ಟೋವ್(6) ರನ್ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.