IPL 2022 – Mumbai Indians Vs Lucknow Super Giants Possible Playing 11 – ಮುಂಬೈ ತಂಡಕ್ಕೆ ಅರ್ಜುನ ಬಲ..!
ಏಪ್ರಿಲ್ 16. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 26. ಸಮಯ ಮಧ್ಯಾಹ್ನ 3.30. ಮುಂಬೈನ ಬ್ರಬೋರ್ನ್ ಅಂಗಣ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೋರಾಟ
ಹೌದು, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಹೋರಾಟ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ಕಡೆ ಮುಂಬೈ ಇಂಡಿಯನ್ಸ್ ಸಾಲು ಸಾಲು ಸೋಲುಗಳ ಸರಮಾಲೆಯಿಂದ ಹೊರಬರಲು ಪ್ರಯತ್ನ ನಡೆಸಿದ್ರೆ, ಲಕ್ನೋ ಸೂಪರ್ ಜೈಂಟ್ಸ್ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳುವ ಹಂಬಲದಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಡೆಯುವ ಸಾಧ್ಯತೆ ಇದೆ.
ಹಾಗೇ ನೋಡಿದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ 11ರ ಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಕೆ.ಎಲ್. ರಾಹುಲ್ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ್ರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಪಾಯ ತಪ್ಪಿದ್ದಲ್ಲ. ಡಿ ಕಾಕ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಇನ್ನು ಆಯೂಷ್ ಬಡೋನಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇನ್ನುಳಿದಂತೆ ಆಲ್ ರೌಂಡರ್ ಗಳು ತಂಡಕ್ಕೆ ಆಧಾರವಾಗುತ್ತಿದ್ದಾರೆ. ಮ್ಯಾಚ್ ವಿನ್ನರ್ ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ಕೆ. ಗೌತಮ್ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್ ನಲ್ಲಿ ದುಶ್ಮಂತ್ ಚಾಮೀರಾ, ಅವೇಶ್ ಖಾನ್ ತಂಡದ ಪ್ರಮುಖ ವೇಗದ ಅಸ್ತ್ರಗಳು. ರವಿ ಬಿಷ್ಣೋಯ್ ಸ್ಪಿನ್ ಜಾದು ಎದುರಾಳಿ ತಂಡದ ರನ್ ದಾಹಕ್ಕೆ ಬ್ರೇಕ್ ಹಾಕಲಿದೆ.IPL 2022 – Mumbai Indians Vs Lucknow Super Giants Possible Playing 11 ಆದ್ರೆ ಮುಂಬೈ ತಂಡದಲ್ಲಿ ಹಾಗಿಲ್ಲ. ಮುಖ್ಯವಾಗಿ ಬ್ಯಾಟ್ಸ್ ಮೆನ್ ಗಳನ್ನು ನಂಬಿಕೊಂಡಿದೆ. ರೋಹಿತ್ ಮತ್ತು ಇಶಾನ್ ಕಿಶಾನ್ ರನ್ ಗಳಿಸಲು ಒದ್ದಾಟ ನಡೆಸುತ್ತಿದ್ದಾರೆ. ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್
ಹಾಗೂ ಬ್ರೇವಿಸ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಲ್ ರೌಂಡರ್ ಗಳ ಕೊರತೆ ಕಾಡುತ್ತಿದೆ. ಕಿರಾನ್ ಪೊಲಾರ್ಡ್ ಬ್ಯಾಟಿಂಗ್ ನಲ್ಲಿ ಗಮನ ಸೆಳೆದ್ರೂ ಬೌಲಿಂಗ್ ನಲ್ಲಿ ಶೈನ್ ಆಗುತ್ತಿಲ್ಲ. ಹಾಗೇ ಈ ಪಂದ್ಯದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಗಳಿವೆ. ಆಲ್ ರೌಂಡರ್ ಗಳಾದ ಅರ್ಜುನ್ ತೆಂಡುಲ್ಕರ್ ಮತ್ತು ಫ್ಯಾಬಿಯನ್ ಆಲೆನ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇನ್ನುಳಿದಂತೆ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬೂಮ್ರಾ ಮತ್ತು ಜಯದೇವ್ ಉನಾದ್ಕಟ್ ಹಾಗೂ ಬಾಸೀಲ್ ಥಂಪಿ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್
ಕೆ.ಎಲ್. ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
ಮಾರ್ಕಸ್ ಸ್ಟೋನಿಸ್
ದೀಪಕ್ ಹೂಡಾ
ಆಯೂಷ್ ಬಡೋನಿ
ಕೃನಾಲ್ ಪಾಂಡ್ಯ
ಜೇಸನ್ ಹೋಲ್ಡರ್
ಕೆ.ಗೌತಮ್
ದುಶ್ಮಂತಾ ಚಾಮೀರಾ
ಆವೇಶ್ ಖಾನ್
ರವಿ ಬಿಷ್ಣೋಯ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ)
ಇಶಾನ್ ಕಿಶಾನ್ (ವಿಕೆಟ್ ಕೀಪರ್)
ಡೆವಾಲ್ಡ್ ಬ್ರೇವಿಸ್
ಸೂರ್ಯ ಕುಮಾರ್ ಯಾದವ್
ತಿಲಕ್ ವರ್ಮಾ
ಕಿರಾನ್ ಪೊಲಾರ್ಡ್
ಅರ್ಜುನ್ ತೆಂಡುಲ್ಕರ್
ಫಾಬಿಯನ್ ಆಲೆನ್
ಜಯದೇವ್ ಉನಾದ್ಕಟ್
ಜಸ್ಪ್ರಿತ್ ಬೂಮ್ರಾ
ಬಾಸೀಲ್ ಥಂಪಿ