IPL 2022 – MI vs DC – ಕೂಲ್ ಕ್ಯಾಪ್ಟನ್ ಗಳ ನಡುವಿನ ಜಿದ್ದಾಜಿದ್ದಿನ ಸಂಘರ್ಷ..! ಗೆಲ್ಲೋದು ಯಾರು ?
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹೋರಾಟ ನಡೆಸಲಿವೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಬಾರಿ ಕೆಲವೊಂದು ಬದಲಾವಣೆಗಳಾಗಿವೆ. ಅಲ್ಲದೆ ವೇಗಿ ಜೋಫ್ರಾ ಆರ್ಚೆರ್ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್, ಮಿಟ್ಚೆಲ್ ಮಾರ್ಶ್, ಆನ್ರಿಚ್ ನೊರ್ಟೆಜೆ, ಲುಂಗಿ ಎನ್ ಗಿಡಿ, ಅವರು ಅಲಭ್ಯರಾಗಲಿದ್ದಾರೆ.
ಆದ್ರೂ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬಲಿಷ್ಠವಾಗಿಯೇ ಕಾಣುತ್ತಿದೆ. ಜಿದ್ದಾಜಿದ್ದಿನ ಹೋರಾಟ ನಡೆಯುವುದರಲ್ಲಿ ಅನುಮಾನವೇ ಇಲ್ಲ.
ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶಾನ್ ಅವರು ಇನಿಂಗ್ಸ್ ಆರಂಭಿಸಿದ್ರೆ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟೀಮ್ ಡೇವಿಡ್, ಕಿರಾನ್ ಪೊಲಾರ್ಡ್ ಅವರು ಬ್ಯಾಟಿಂಗ್ ನಲ್ಲಿ ಬಲ ತುಂಬಲಿದ್ದಾರೆ. ಬೌಲಿಂಗ್ ನಲ್ಲಿ ಜಸ್ಪ್ರಿತ್ ಬೂಮ್ರಾ ಅವರನ್ನು ಹೆಚ್ಚು ನಂಬಿಕೊಂಡಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪೃಥ್ವಿ ಶಾ ಮತ್ತು ಟಿಮ್ ಸೆಫರ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ರಿಷಬ್ ಪಂತ್, ಸಫ್ರರಾಜ್ ಖಾನ್, ರವ್ಮೊನ್ ಪಾವೆಲ್, ಮನ್ ದೀಪ್ ಸಿಂಗ್ ಅವರ ಬ್ಯಾಟಿಂಗ್ ಬಲವಿದೆ. ಹಾಗೇ ಬೌಲಿಂಗ್ ನಲ್ಲಿ ಶಾರ್ದೂಲ್ ಥಾಕೂರ್, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್ ವೇಗದ ಬೌಲರ್ ಗಳು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಂಡದ ಸ್ಪಿನ್ ಮಾಂತ್ರಿಕರು. IPL 2022: Mumbai Indians vs Delhi Capitals Predicted Playing 11
ಇನ್ನು ಅಂಕಿ ಅಂಶಗಳ ಪ್ರಕಾರ ಕಳೆದ 14 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 16 ಬಾರಿ ಗೆದ್ರೆ, ಡೆಲ್ಲಿ ಕ್ಯಾಪಿಟಲ್ಸ್ 14 ಸಲ ಗೆಲುವಿನ ನಗೆ ಬೀರಿದೆ.
ಕಳೆದ ಐದು ಪಂದ್ಯಗಳನ್ನು ತೆಗೆದುಕೊಂಡಾಗ ಡೆಲ್ಲಿ ಕ್ಯಾಪಿಟಲ್ಸ್ ಎರಡು ಮತ್ತು ಮುಂಬೈ ಇಂಡಿಯನ್ಸ್ ಮೂರು ಬಾರಿ ಗೆದ್ದಿದೆ. ಆದ್ರೆ 14ನೇ ಆವೃತ್ತಿಯ 2 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದುಕೊಂಡಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ 11 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಗೆದ್ರೆ, ಐದು ಪಂದ್ಯಗಳಲ್ಲಿ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿದೆ. ಹಾಗೇ ಸವಾಲನ್ನು ಬೆನ್ನಟ್ಟುವಾಗ ಡೆಲ್ಲಿ ಕ್ಯಾಪಿಟಲ್ಸ್ 9 ಬಾರಿ ಗೆಲುವಿನ ನಗೆ ಬೀರಿದ್ರೆ, ಮುಂಬೈ ಇಂಡಿಯನ್ಸ್ 5 ಬಾರಿ ಜಯ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟೀಮ್ ಡೇವಿಡ್, ಕಿರಾನ್ ಪೊಲಾರ್ಡ್, ಫಾಬಿಯನ್ ಆಲೆನ್, ಮುರುಗನ್ ಅಶ್ವಿನ್, ಜಯದೇವ್ ಉನಾದ್ಕಟ್, ಟೈಮಲ್ ಮಿಲ್ಸ್, ಜಸ್ಪ್ರಿತ್ ಬೂಮ್ರಾ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಟೀಮ್ ಸೆಫರ್ಟ್, ಪೃಥ್ವಿ ಶಾ, ರಿಷಬ್ ಪಂತ್ (ನಾಯಕ), ಸಫ್ರರಾಜ್ ಖಾನ್, ಮನ್ ದೀಪ್ ಸಿಂಗ್, ರೊವ್ಮನ್ ಪಾವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್, ಕುಲದೀಪ್ ಯಾದವ್