ಇಶಾನ್ ಕಿಶನ್… ತನ್ನ ಸ್ಪೋಟಕ ಬ್ಯಾಟಿಂಗ್ನಿಂದ ಐಪಿಎಲ್ನಲ್ಲಿ ಕಮಾಲ್ ಮಾಡಿದ್ದ ಎಡಗೈ ಬ್ಯಾಟ್ಸ್ಮನ್ ಇದೀಗ, ರನ್ಗಳಿಸಲು ತಿಣುಕಾಡುತ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತ ಪಡೆದು ಮುಂಬೈ ತಂಡವನ್ನ ಸೇರಿರುವ ಇಶಾನ್ ಕಿಶನ್, ಬ್ಯಾಟಿಂಗ್ ವೈಫಲ್ಯದಿಂದಾಗಿ ಅಭಿಮಾನಿಗಳು ಟೀಕೆಗೆ ಗುರಿಯಾಗಿದ್ದಾರೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರೋ ಮುಂಬೈ ಇಂಡಿಯನ್ಸ್, ಗೆಲುವಿನ ಹುಡುಕಾಟದಲ್ಲಿದೆ. ಇನ್ನೊಂದೆಡೆ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್, ನೀರಸ ಬ್ಯಾಟಿಂಗ್ ಪ್ರದರ್ಶನದಿಂದ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದ್ದಾರೆ. 2022ರ ಐಪಿಎಲ್ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಂಡಿರುವ ಯುವ ಬ್ಯಾಟ್ಸ್ಮನ್, ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ ಎಂದು ಫ್ಯಾನ್ಸ್ಗಳು ಕಿಡಿಕಾರಿದ್ದಾರೆ.
ಇಶಾನ್ ಕಿಶನ್ ಪ್ರದರ್ಶನದ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಫ್ಯಾನ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಅಸಮಾಧಾನ ಹೊರಹಾಕಿದ್ದಾರೆ. ಕಳಪೆ ಫಾರ್ಮ್ನಲ್ಲಿರುವ ಇಶಾನ್ ಕಿಶನ್, ಬ್ಯಾಟಿಂಗ್ ವೈಫಲ್ಯವೇ ಮುಂಬೈ ತಂಡದ ಸತತ ಸೋಲಿಗೆ ಹಾಗೂ ನಾಯನ ರೋಹಿತ್ ಶರ್ಮ, ಅಸ್ಥಿರ ಪ್ರದರ್ಶನಕ್ಕೆ ಮುಖ್ಯ ಕಾರಣ ಎಂದು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರನ್ಗಳಿಸಲು ತಿಣುಕಾಡುತ್ತಿರುವ ಮುಂಬೈ ತಂಡದ ಓಪನರ್ ಇಶಾನ್ ಕಿಶನ್, 2022ರ ಐಪಿಎಲ್ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ 81(48) ಹಾಗೂ 54(43) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ನಂತರದ 6 ಪಂದ್ಯಗಳಲ್ಲಿ ಇಶಾನ್ ಕಿಶನ್, ಕೇವಲ 64 ರನ್ಗಳಿಸಿದ್ದಾರೆ. ಆ ಮೂಲಕ 2022ರ ಐಪಿಎಲ್ನಲ್ಲಿ ಇಶಾನ್ ಕಿಶನ್, 8 ಇನ್ನಿಂಗ್ಸ್ನಿಂದ 199 ರನ್ಗಳಿಸಿದ್ದಾರೆ. ಹೀಗಾಗಿ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಫ್ಯಾನ್ಸ್ಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮುಂಬೈ ಸೋಲಿನ ಆಘಾತಕ್ಕೆ ಇಶಾನ್ ಕಿಶನ್ ವೈಫಲ್ಯವೇ ಕಾರಣ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಇಶಾನ್ ಕಿಶನ್ v IPL 2022
ಇನ್ನಿಂಗ್ಸ್ – 8
ರನ್ಗಳು – 199
ಸರಾಸರಿ – 28.43
ಸ್ಟ್ರೈಕ್ ರೇಟ್ – 108.15
50/100 – 2/0