IPL 2022-MSDhoni – ಧೋನಿಯ ಮ್ಯಾಚ್ ವಿನ್ನಿಂಗ್ ಅಟಕ್ಕೆ ಸೆಹ್ವಾಗ್ – ರೈನಾ ಹೇಳಿದ್ದೇನು..?
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 33ನೇ ಪಂದ್ಯದಲ್ಲಿ ಸಿಎಸ್ ಕೆ ತಂಡ ಮುಂಬೈ ವಿರುದ್ಧ ಮೂರು ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಸಿಡಿಸಿದ್ದ ಸಿಎಸ್ ಕೆ ತಂಡದ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ,ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಆಸೆಯನ್ನೇ ಭಗ್ನಗೊಳಿಸಿದ್ರು.
ಹಾಗೇ ನೋಡಿದ್ರೆ ಧೋನಿ ಕ್ರೀಸ್ ಗೆ ಬರುವಾಗ ಪಂದ್ಯದ ಮೇಲೆ ಮುಂಬೈ ಇಂಡಿಯನ್ಸ್ ಪ್ರಾಬಲ್ಯ ಸಾಧಿಸಿತ್ತು. ಆದ್ರೆ ಪಂದ್ಯದ ಗತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ತನ್ನ ಸಹ ಆಟಗಾರನನ್ನು ಆಡಿಸಿಕೊಂಡು, ಕೊನೆಗೆ ಪಂದ್ಯವನ್ನೇ ಗೆಲ್ಲಿಸಿಕೊಟ್ಟ ಧೋನಿಯ ಬ್ಯಾಟಿಂಗ್ ವೈಖರಿಗೆ ಇಡೀ ಕ್ರಿಕೆಟ್ ಜಗತ್ತು ಸಲಾಂ ಅನ್ನುತ್ತಿದೆ.
41ರ ಹರೆಯದಲ್ಲೂ ಹಳೆಯ ಖದರ್ ಅನ್ನು ತೋರಿಸಿದ್ದ ಧೋನಿ ತನ್ನನ್ನು ಯಾಕೆ ಗ್ರೇಟ್ ಮ್ಯಾಚ್ ಫಿನಿಶರ್ ಎಂದು ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಹಾಗೇ ನೋಡಿದ್ರೆ ಕೊನೆಯ ಓವರ್, ಕೊನೆಯ ಎಸೆತದಲ್ಲಿ ಪಂದ್ಯವನ್ನು ಧೋನಿ ಇದೇನೂ ಮೊದಲ ಬಾರಿ ಗೆಲ್ಲಿಸಿಕೊಡುತ್ತಿಲ್ಲ. ಈ ಹಿಂದೆ ಅನೇಕ ಬಾರಿ ಇದೇ ರೀತಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಧೋನಿಯವರಿಗಿದೆ. IPL 2022-MSDhoni Sehwag, Raina react after Dhoni wins last-over thriller for CSK
ಸಮಯ.. ಸಂದರ್ಭ.. ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಆಟವನ್ನಾಡಿದ ಧೋನಿ ಪಂದ್ಯವನ್ನು ಯಾವ ರೀತಿ ಮಕ್ತಾಯಗೊಳಿಸಬೇಕು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ರು. ಧೋನಿ ಗಳಿಸಿದ್ದು 13 ಎಸೆತಗಳಲ್ಲಿ ಅಜೇಯ 28 ರನ್. ಇಲ್ಲಿ ಗೆಲ್ಲುವುದಕ್ಕಿಂತ ಮುಖ್ಯವಾಗಿ ಗೆಲ್ಲಲು ಯಾವ ರೀತಿಯ ಸೂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಮುಖ್ಯವಾಗಿರುತ್ತದೆ.
ಹೌದು, ಧೋನಿಯ ಮ್ಯಾಚ್ ಫಿನಿಶಿಂಗ್ ಆಟಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲ ತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಸದಾ ಡಿಫರೆಂಟ್ ಆಗಿ ಕಮೆಂಟ್ ಮಾಡುವ ಸೆಹ್ವಾಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ಹೀಗೆ… ಓಂ ಫಿನಿಶಾಯಾ ನಮಃ ಎಂಥಾ ಗೆಲುವು.. ರೊಂಬ ನಲ್ಲಾ.. ಅಂತ ಕಮೆಂಟ್ ಮಾಡಿದ್ದಾರೆ.
ಇದು ಮಹೀ ಹಾದಿ… ಎಂದು ಹರ್ಭಜನ್ ಸಿಂಗ್ ಬರೆದುಕೊಂಡ್ರೆ, ಐಕಾನ್.. ಈ ವ್ಯಕ್ತಿ ಅಸಾಧ್ಯವಾಗಿರುವುದನ್ನು ಮಾಡಿದ್ದಾನೆ. ದಿ ಮಹೀ ಮೈಕ್ರೋ ಪ್ರೊಸೆಸರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಬಗ್ಗೆ ಚಿಂತಿಸಬೇಡಿ ಎಂದು ಮುರಳಿ ಕಾರ್ತಿಕ್ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಇನ್ನು ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈತನ ಹೆಸರು ಎಮ್ಎಸ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಧೋನಿಯ ಆಪ್ತ ಸ್ನೇಹಿತ ಸುರೇಶ್ ರೈನಾ ಕೂಡ ಗೆಳೆಯನ ಆಟಕ್ಕೆ ಫಿದಾ ಆಗಿದ್ದಾರೆ. ಉತ್ತಮ ಆಟ.. ಕ್ಯಾಪ್ಟನ್ ಎಂದು ಸುರೇಶ್ ರೈನಾ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ನಾಲ್ಕು ಎಸೆತಗಳಲ್ಲಿ ದಾಖಲಿಸಿದ್ದ 16 ರನ್ ಗಳು ಮಹೇಂದ್ರ ಸಿಂಗ್ ಧೋನಿಯವರನ್ನು ಗತಕಾಲದ ಆಟವನ್ನು ನೆನಪು ಮಾಡುವಂತೆ ಮಾಡಿದೆ.