IPL 2022- RCB – ಕಪ್ ಗೆದ್ದಿಲ್ಲ.. ಆದ್ರೂ ಸಿಕ್ಸರ್ ಗಳ ಸಂಖ್ಯೆಯಲ್ಲಿ ಆರ್ ಸಿಬಿಗೆ 2ನೇ ಸ್ಥಾನ..!

ಟಿ-20 ಕ್ರಿಕೆಟ್ ಅಂದ್ರೆ ಹೊಡಿ ಬಡಿ ಆಟ. ಇಲ್ಲಿ ಎಷ್ಟು ಹೊತ್ತು ಕ್ರಿಸ್ ನಲ್ಲಿರುತ್ತಾರೆ…ಬ್ಯಾಟಿಂಗ್ ಕೌಶಲ್ಯ ಹೇಗಿರುತ್ತೆ ಎಂಬುದು ಮುಖ್ಯವಲ್ಲ. ಬದಲಾಗಿ ರನ್ ಹೊಡಿ.. ಬೌಂಡರಿ – ಸಿಕ್ಸರ್ ಗಳನ್ನು ಬಾರಿಸಬೇಕು.. ಪಂದ್ಯ ಗೆಲ್ಲಬೇಕು.. ಹೇಗೆ ಬೇಕಾದ್ರೂ ಆಡಬಹುದು.. ಹಾಗಂತ ನಿಯಮಗಳನ್ನು ಮೀರಬಾರದು. ಬೌಲರ್ ಗಳ ಮೇಲೆ ದಯೆ ಕರುಣೆ ತೋರಬಾರದು.. ಬೌಲರ್ ಗಳು ಕಷ್ಟಪಟ್ಟು ವಿಕೆಟ್ ಪಡೆದ್ರೂ ಲೆಕ್ಕಕ್ಕೆ ಬರುವುದಿಲ್ಲ. ಬ್ಯಾಟ್ಸ್ ಮೆನ್ ಗಳ ಅಬ್ಬರ ಜೋರಾಗಿರಬೇಕು ಅಷ್ಟೇ. ಯಾಕಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಬೇಕು. ಮೈದಾನದಲ್ಲಿ ಹುಚ್ಚೆದ್ದು ಕುಣಿಯುತ್ತಾ ಪ್ರೇಕ್ಷಕರ ಭರಾಟೆ ಮುಗಿಲುಮುಟ್ಟಬೇಕು.. ಇದು ಟಿ-20 ಕ್ರಿಕೆಟ್ ನ ಸ್ಪೇಷಾಲಿಟಿ.
ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಸುಮ್ಮನೆನಾ.. ಹೌದು, ಐಪಿಎಲ್ ನ ಮ್ಯಾಜಿಕ್ ಕೂಡ ಅಂತಹುದ್ದೇ. ಪ್ರತಿ ಪಂದ್ಯಗಳು ಕೂಡ ರೋಚಕತೆಯಿಂದ ಕೂಡಿರುತ್ತದೆ. ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳು ತಮ್ಮ ಕೌಶಲ್ಯಗಳು ಈ ದೇಶಿ ಟೂರ್ನಿಯಲ್ಲಿ ಅನಾವರಣಗೊಳ್ಳುತ್ತವೆ.
ಈ ಋತುವಿನಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, 70 ಲೀಗ್ ಪಂದ್ಯಗಳನ್ನು ಹಾಗೂ ಫೈನಲ್ ಜೊತೆಗೆ ಮೂರು ಪ್ಲೇಆಫ್ ಪಂದ್ಯಗಳನ್ನು ಆಡಲಾಗುತ್ತದೆ. ನಿಸ್ಸಂಶಯವಾಗಿ, ಈ ಬಾರಿ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದ್ದರಿಂದ ಪ್ರೇಕ್ಷಕರಿಗೆ ಕ್ರಿಕೆಟ್ನ ಡೋಸ್ ಮೊದಲಿಗಿಂತ ಹೆಚ್ಚು. ಪಂದ್ಯಗಳು ಹೆಚ್ಚಾದಾಗ ಬೌಂಡರಿ ಮತ್ತು ಸಿಕ್ಸರ್ಗಳು ಹೆಚ್ಚು ದಾಖಲಾಗುತ್ತವೆ.

ಅದೇನೇ ಇರಲಿ, ಬ್ಯಾಟ್ಸ್ಮನ್ಗಳು ಬೌಂಡರಿ ಸಿಕ್ಸರ್ ಬಾರಿಸಿದಾಗ ಪಂದ್ಯವನ್ನು ಮತ್ತಷ್ಟು ರೋಮಾಂಚನಗೊಳಿಸುತ್ತದೆ. ಪ್ರತಿ ಬೌಂಡರಿ ಮತ್ತು ಪ್ರತಿ ಸಿಕ್ಸರ್ ಗಳು ಅಭಿಮಾನಿಗಳ ಮನ ತಣಿಸಿದ್ರೆ, ಪಂದ್ಯದ ಗತಿ ಕೂಡ ಬದಲಾಗುತ್ತದೆ.
ಇನ್ನು ಸಿಕ್ಸರ್ ಗಳ ಅಂಕಿ ಅಂಶಗಳ ವಿಷಯಕ್ಕೆ ಬಂದಾಗ ಐಪಿಎಲ್ನ ಕಳೆದ 14 ಸೀಸನ್ಗಳಲ್ಲಿ ಯಾವ ತಂಡ ಹೆಚ್ಚು ಸಿಕ್ಸರ್ ಬಾರಿಸಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ.
ಇದುವರೆಗೆ ಐಪಿಎಲ್ನಲ್ಲಿ ಅಂದರೆ ಕಳೆದ 14 ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ತಂಡ 1308 ಸಿಕ್ಸರ್ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದೆ. IPL 2022 – MOST SIXES IN IPL BY TEAMS FROM 2008 TO 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು 1275 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇನ್ನು ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ ಮತ್ತು ಈ ತಂಡವು ಒಟ್ಟು 1166 ಸಿಕ್ಸರ್ಗಳನ್ನು ಹೊಡೆದಿದೆ.
ಹಾಗೇ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆಯಿಂದ 1165 ಸಿಕ್ಸರ್ಗಳು ಹಾಗೂ ಎರಡು ಬಾರಿ ರನ್ನರ್ ಅಪ್ ಆಗಿರುವ ಕೋಲ್ಕತ್ತಾ ತಂಡವು 1113 ಸಿಕ್ಸರ್ಗಳನ್ನು ಹೊಡೆದಿದೆ. ಸಿಎಸ್ ಕೆ ಮತ್ತು ಕೆಕೆಆರ್ ತಂಡ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ.

ದೆಹಲಿ ಕ್ಯಾಪಿಟಲ್ಸ್ 1041 ಸಿಕ್ಸರ್ಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಮತ್ತು ಹೈದರಾಬಾದ್ ಏಳು ಮತ್ತು ಎಂಟನೇ ಸ್ಥಾನದಲ್ಲಿವೆ.
ಒಟ್ಟಿನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡ ಸಿಕ್ಸರ್ ಗಳ ವಿಚಾರದಲ್ಲಿ ಅಗ್ರ ಸ್ಥಾನದಲ್ಲಿರುವುದು ಏನು ವಿಶೇಷತೆ ಅಲ್ಲ. ಆದ್ರೆ ಒಂದು ಬಾರಿಯೂ ಕಪ್ ಗೆಲ್ಲದೇ, ಮೂರು ಬಾರಿ ರನ್ನರ್ ಅಪ್ ಆಗಿರುವ ಆರ್ ಸಿಬಿ ತಂಡ ಎರಡನೇ ಸ್ಥಾನದಲ್ಲಿರುವ ತುಸು ವಿಶೇಷವೇ. ಇದಕ್ಕೆ ಇನ್ನೊಂದು ಕಾರಣ ಆರ್ ಸಿಬಿ ದೈತ್ಯ ಬ್ಯಾಟಿಂಗ್ ಶಕ್ತಿಯಾಗಿದ್ದ ಕ್ರಿಸ್ ಗೇಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ.. ಇಬ್ಬರು ಕೂಡ ಆರ್ ಸಿಬಿ ತಂಡದ ಪರ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ್ದ ಆಟಗಾರರಾಗಿದ್ದಾರೆ.
ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ರನ್ ದಾಖಲಿಸಿದ್ದ ಹಿರಿಮೆಗೆ ಪಾತ್ರರಾದ್ರೆ, ಕ್ರಿಸ್ ಗೇಲ್ ಗರಿಷ್ಠ ಶತಕ, ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ್ದ ದಾಖಲೆಯನ್ನು ಹೊಂದಿದ್ದಾರೆ.