15ನೇ ಆವೃತ್ತಿಯ ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕದ ಮೇಲೆ ಶತಕ ಸಿಡಿಸುತ್ತಾ ಅಬ್ಬರಿಸುತ್ತಿರುವ ಜಾಸ್ ಬಟ್ಲರ್, ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
2022ರ ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದ ಧೂಳೆಬ್ಬಿಸಿರುವ ಜಾಸ್ ಬಟ್ಲರ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ತಮ್ಮ ಮೂರನೇ ಸೆಂಚುರಿ ಬಾರಿಸಿದ ಬಟ್ಲರ್, ಐಪಿಎಲ್ ಆವೃತ್ತಿಯೊಂದರಲ್ಲಿ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಈ ಹಿಂದೆ 2011ರಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಶತಕ ಬಾರಿಸಿದ್ದ ಕ್ರಿಸ್ ಗೇಯ್ಲ್, ಸೀಸನ್ವೊಂದರಲ್ಲಿ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎನಿಸಿದ್ದರು. ಆದರೆ ಪ್ರಸಕ್ತ ಐಪಿಎಲ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ ತಮ್ಮ ಮೂರನೇ ಸೆಂಚುರಿ ಸಿಡಿಸುವ ಮೂಲಕ ಜಾಸ್ ಬಟ್ಲರ್, ನಂ.1 ಸ್ಥಾನದಲ್ಲಿದ್ದರೆ. ನಂತರದಲ್ಲಿ ಕ್ರಿಸ್ ಗೇಯ್ಲ್(2011) 2 ಶತಕ, ಹಶೀಮ್ ಆಮ್ಲಾ(2017) 2 ಶತಕ ಹಾಗೂ ಶೇನ್ ವಾಟ್ಸನ್(2018) 2 ಶತಕ ಸಿಡಿಸಿ ಮಿಂಚಿದ್ದರು.
IPLನಲ್ಲಿ ಹೆಚ್ಚು ಶತಕಗಳು:
2022ರ ಐಪಿಎಲ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಜಾಸ್ ಬಟ್ಲರ್, ಐಪಿಎಲ್ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಐಪಿಎಲ್ನಲ್ಲಿ ಈವರೆಗೂ ಆರು ಸೆಂಚುರಿ ಹೊಡೆದಿರುವ ಕ್ರಿಸ್ ಗೇಯ್ಲ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಜಾಸ್ ಬಟ್ಲರ್ ಪಾತ್ರರಾಗಿದ್ದಾರೆ. ಶಿಖರ್ ಧವನ್, ಸತತ ಎರಡು ಪಂದ್ಯಗಳಲ್ಲಿ ಎರಡು ಸೆಂಚುರಿ ಗಳಿಸಿದ ಮೊದಲ ಆಟಗಾರ ಆಗಿದ್ದಾರೆ.
ಐಪಿಎಲ್ನಲ್ಲಿ ಹೆಚ್ಚು ಶತಕಗಳಿಸಿದ ಆಟಗಾರರು:
ಕ್ರಿಸ್ ಗೇಯ್ಲ್ – 6
ವಿರಾಟ್ ಕೊಹ್ಲಿ – 5
ಶೇನ್ ವಾಟ್ಸನ್ – 4
ಡೇವಿಡ್ ವಾರ್ನರ್ – 4
ಜಾಸ್ ಬಟ್ಲರ್ – 4