IPL 2022 Match 40- SRH Vs GT- ಸೈಲೆಂಟ್ ಕಿಲ್ಲರ್ಸ್ ಸನ್ ರೈಸರ್ಸ್ ಹೈದ್ರಬಾದ್ – SRH Probable XIs
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಬಗ್ಗೆ ಬಹುತೇಕ ಮಂದಿ ಲಘುವಾಗಿ ಪರಿಗಣಿಸಿದ್ದರು.
ಆದ್ರೆ ಎಲ್ಲರ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದ ಕೇನ್ ವಿಲಿಯಮ್ಸನ್ ಬಳಗ ಅದ್ಭುತ ಆಟವನ್ನಾಡಿ ಗಮನ ಸೆಳೆಯುತ್ತಿದೆ.
ಅಲ್ಲದೆ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. IPL 2022 Match 40- SRH Vs GT- SRH Probable XIs
ಅಂದ ಹಾಗೇ ಸನ್ ರೈಸರ್ಸ್ ಹೈದ್ರಬಾದ್ ತಂಡದ ಈ ಪ್ರದರ್ಶನಕ್ಕೆ ಮುಖ್ಯ ಕಾರಣ ಕೇನ್ ವಿಲಿಯಮ್ಸನ್. ನ್ಯೂಜಿಲೆಂಡ್ ನ ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಅವರು ಸೈಲೆಂಟ್ ಆಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ.
ಇನ್ನೊಂದು ಕಾರಣ. ತಂಡದಲ್ಲಿರುವ ಘಾತಕ ವೇಗಿಗಳು. ಉಮ್ರಾನ್ ಅಕ್ಮಲ್ ಬೆಂಕಿ ಎಸೆತ, ನಟರಾಜನ್ ಅವರ ಯಾರ್ಕರ್, ಭುವನೇಶ್ವರ್ ಕುಮರ್ ಮತ್ತು ಮಾರ್ಕೊ ಜಾನ್ಸೆನ್ ಅವರ ಲಯಬದ್ಧವಾದ ಎಸೆತಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಹಾಗೇ ಬ್ಯಾಟಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಸಮಯೋಚಿತವಾಗಿ ನಾಯಕನ ಆಟವನ್ನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಆಡೆನ್ ಮಾಕ್ರ್ರಮ್, ನಿಕೊಲಾಸ್ ಪೂರನ್ ಮತ್ತು ಅಭಿನವ್ ಮನೋಹರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಜಗದೀಶ್ ಸುಚಿತ್ ಅವರು ಹನ್ನೊಂದರ ಬಳಗದಲ್ಲಿದ್ದಾರೆ. ಶಶಾಂಕ್ ಸಿಂಗ್ ಅವರು ಐದು ಪಂದ್ಯಗಳನ್ನು ಆಡಿದ್ರೂ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ.
ಒಟ್ಟಿನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಪ್ಲಾನ್ ಮಾಡಿಕೊಂಡು ಲೆಕ್ಕಚಾರದ ಆಟವನ್ನು ಆಡುತ್ತಿದೆ. ಅಲ್ಲದೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಎಸ್ ಆರ್ ಎಚ್ ತಂಡದ ಬೌಲರ್ ಗಳು ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅದೇ ರೀತಿ ಎಸ್ ಆರ್ ಎಚ್ ಬ್ಯಾಟ್ಸ್ ಮೆನ್ ಗಳಿಗೂ ಗುಜರಾತ್ ಟೈಟಾನ್ಸ್ ತಂಡದ ಬೌಲರ್ ಗಳು ದುಃಸ್ವಪ್ನವಾಗಿ ಕಾಡುವ ಸಾಧ್ಯತೆಗಳೂ ಇವೆ. ಒಟ್ಟಾರೆ, ಏಪ್ರಿಲ್ 27ರಂದು ಮುಂಬೈನ ವಾಂಖೇಡೆ ಅಂಗಣದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ 40ನೇ ಪಂದ್ಯದಲ್ಲಿ ರೋಚಕವಾಗಿ ಅಂತ್ಯಗೊಳ್ಳಲಿದೆ.
ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇನ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೇನ್ ಮಾಕ್ರ್ರಮ್
ನಿಕೊಲಾಸ್ ಪೂರನ್ (ವಿಕೆಟ್ ಕೀಪರ್ )
ಶಶಾಂಕ್ ಸಿಂಗ್
ಜಗದೀಶ್ ಸುಚಿತ್ /ವಾಷಿಂಗ್ಟನ್ ಸುಂದರ್
ಮಾರ್ಕೊ ಜಾನ್ಸೆನ್
ಭುವನೇಶ್ವರ್ ಕುಮಾರ್
ಉಮ್ರಾನ್ ಮಲ್ಲಿಕ್
ಟಿ. ನಟರಾಜನ್