IPL 2022- LSG Vs Mumbai Indians – 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ ಅರ್ಜುನ್ ತೆಂಡುಲ್ಕರ್
ಸಾಲು ಸಾಲು ಐದು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಮರ್ಯಾದೆ ಉಳಿಸಿಕೊಳ್ಳಬೇಕಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಸೋಲಿನ ಸರಪಳಿಯಿಂದ ಹೊರಬಲು ಹರಸಾಹಸಪಡುತ್ತಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ನಡೆಸಲಿವೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೆಲವೊಂದು ಬದಲಾವಣೆ ಮಾಡುವ ಸಾದ್ಯತೆಗಳಿವೆ. ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಬ್ಯಾಟ್ಸ್ ಮೆನ್ ಗಳ ಚಿಂತೆ ಇಲ್ಲ. ಆರಂಭಿಕರಾದ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ ಯಾವುದೇ ಹಂತದಲ್ಲೂ ಫಾರ್ಮ್ ಕಂಡುಕೊಳ್ಳಬಹುದು. ಹಾಗೇ ಮಧ್ಯಮ ಕ್ರಮಾಂಕದಲ್ಲಿ ಬ್ರೇವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಆಧಾರವಾಗುತ್ತಿದ್ದಾರೆ. ಆದ್ರೆ ಆಲ್ ರೌಂಡರ್ ಗಳ ಕೊರತೆಯೂ ಕಾಡುತ್ತಿದೆ. ಕಿರಾನ್ ಪೊಲಾರ್ಡ್ ಬಿಟ್ರೆ ತಂಡದಲ್ಲಿ ಹೇಳಿಕೊಳ್ಳುವಂತಹ ಆಲ್ ರೌಂಡರ್ ಗಳು ಇಲ್ಲ. ಈ ಹಿಂದೆ ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಆಲ್ ರೌಂಡರ್ ಆಗಿದ್ದರು. ಆದ್ರೆ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬುವಂತಹ ಆಟಗಾರರು ಮುಂಬೈ ತಂಡದಲ್ಲಿಲ್ಲ.
ಹೀಗಾಗಿ ಇಂದಿನ ಪಂದ್ಯಕ್ಕೆ ಅರ್ಜುನ್ ತೆಂಡುಲ್ಕರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಲ್ ರೌಂಡರ್ ಆಗಿರುವ ಅರ್ಜುನ್ ತೆಂಡುಲ್ಕರ್ ಸೋತು ಸುಣ್ಣವಾಗಿರುವ ತಂಡಕ್ಕೆ ಸ್ವಲ್ಪ ಮಟ್ಟಿಗಾದ್ರೂ ಆಸರೆಯಾಗಬಹುದು.
ಈ ಮೂಲಕ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ಅವರು ಐಪಿಎಲ್ ಗೂ ಪದಾರ್ಪಣೆ ಮಾಡಲಿದ್ದಾರೆ.
ಈಗಾಗಲೇ ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅರ್ಜುನ್ ತೆಂಡುಲ್ಕರ್ ಗೆ ಆಡುವ ಅವಕಾಶ ಸಿಕ್ಕಿಲ್ಲ. ಹೇಗೋ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಗೆ ಎಂಟ್ರಿಕೊಡುವುದು ಅಸಾಧ್ಯವಾದದ್ದು. ಹೀಗಾಗಿ ಯುವ ಆಟಗಾರರಿಗೆ ಅವಕಾಶ ನೀಡಿ ಮುಂದಿನ ವರ್ಷಕ್ಕೆ ತಂಡವನ್ನು ಕಟ್ಟುವ ಲೆಕ್ಕಚಾರವನ್ನು ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ ಮೆಂಟ್ ಮಾಡಿಕೊಂಡಿದೆ. IPL 2022 – LSG Vs MI- Arjun Tendulkar make his IPL debut
ಕಳೆದ 15 ವರ್ಷಗಳ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಈ ರೀತಿಯ ಕೆಟ್ಟ ಸೋಲುಗಳನ್ನು ಯಾವತ್ತು ಕಂಡಿಲ್ಲ. ಅದೇ ರೀತಿ ಅತೀಯಾದ ಆತ್ಮವಿಶ್ವಾಸ ಕೆಲವೊಂದು ಬಾರಿ ಮುಳುವಾಗುತ್ತದೆ ಎಂಬುದಕ್ಕೆ ಮುಂಬೈ ಇಂಡಿಯನ್ಸ್ ತಂಡದ ಈ ಬಾರಿಯ ಪ್ರದರ್ಶನವೇ ನಿದರ್ಶನ.
ಏನೇ ಆಗ್ಲಿ, ಆಟದಲ್ಲಿ ಸೋಲು ಗೆಲುವು ಇರೋದು ಸಹಜ. ಸೋಲಿನಿಂದಲೇ ಪಾಠ ಕಲಿಯುವುದು ಎಂಬ ಮಾತು ಇದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಸೋಲುಗಳಿಂದ ಎಚ್ಚೆತ್ತುಕೊಂಡಿದೆ. ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶ ನೀಡಿದ್ರೆ ಮುಂದಿನ ವರ್ಷ ತಂಡವನ್ನು ಯಾವ ರೀತಿ ಬಲಿಷ್ಠಗೊಳಿಸಬಹುದು ಎಂಬುದು ಕೂಡ ಗೊತ್ತಾಗುತ್ತದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯಗಳಲ್ಲಿ ಪ್ರಯೋಗಕ್ಕೆ ಮುಂದಾಗುವಂತಹ ಸಾಧ್ಯತೆಗಳಿವೆ. ಅದಕ್ಕಾಗಿಯೇ ಅರ್ಜುನ್ ತೆಂಡುಲ್ಕರ್ ಗೆ 11ರ ಬಳಗದಲ್ಲಿ ಆಡುವ ಅವಕಾಶ ನೀಡಿದ್ರೂ ನೀಡಬಹುದು.