IPL-2022 – ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಹೀಗಿದೆ..!

ಕೊಲ್ಕತ್ತಾ ನೈಟ್ ರೈಡರ್ಸ್.. ಐಪಿಎಲ್ ನ ಮತ್ತೊಂದು ಜನಪ್ರಿಯತೆ ಪಡೆದುಕೊಂಡಿರುವ ತಂಡ. ಕಿಂಗ್ ಖಾನ್ ಶಾರೂಕ್ ಖಾನ್ ಮತ್ತು ಜೂಹ್ಲಿ ಚಾವ್ಲಾ ಒಡೆತನ ಕೆಕೆಆರ್ ತಂಡ ಎರಡು ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಅಲ್ಲದೆ 2021ರಲ್ಲಿ ರನ್ನರ್ ಅಪ್ ಆಗಿದೆ. ಉಳಿದಂತೆ ನಾಲ್ಕು ಬಾರಿ ಪ್ಲೇ ಆಫ್ ಗೆ ಎಂಟ್ರಿಯಾದ್ರೆ, ಏಳು ಬಾರಿ ಲೀಗ್ ಹಂತಕ್ಕೆ ಸೀಮಿತವಾಗಿದೆ.
ಕೆಕೆಆರ್ ತಂಡದ ಸಾರಥಿ – ಶ್ರೇಯಸ್ ಅಯ್ಯರ್
ಕೆಕೆಆರ್ ತಂಡದ ದುಬಾರಿ ಬೆಲೆಯ ಆಟಗಾರ – ಶ್ರೇಯಸ್ ಅಯ್ಯರ್ (12.25 ಕೋಟಿ ರೂ.
ರಿಟೇನ್ ಮಾಡಿಕೊಂಡಿರುವ ಆಟಗಾರರ ಖರ್ಚು – 34 ಕೋಟಿ ರೂ.
ರಿಟೇನ್ ಮಾಡಿಕೊಂಡಿರುವ ಆಟಗಾರರು
ಆಂಡ್ರೆ ರಸೆಲ್ (12 ಕೋಟಿ ರೂ)
ವರುಣ್ ಚಕ್ರವರ್ತಿ – 8 ಕೋಟಿ ರೂ.
ವೆಂಕಟೇಶ್ ಅಯ್ಯರ್ – 8 ಕೋಟಿ ರೂ.
ಸುನೀಲ್ ನರೇನ್ – 6 ಕೋಟಿ ರೂ.

ಅಂದ ಹಾಗೇ ಈ ಬಾರಿ ಕೆಕೆಆರ್ ತಂಡದ ಸಾರಥಿ ಶ್ರೇಯಸ್ ಅಯ್ಯರ್. ಐಪಿಎಲ್ ಮೆಗಾ ಬಿಡ್ಡಿಂಗ್ ನಲ್ಲಿ ಕೆಕೆಆರ್ ತಂಡ 12.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ನಾಲ್ಕು ಮಂದಿ ಆಟಗಾರರಿಗೆ 34 ಕೋಟಿ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿದೆ. ಆಂಡ್ರೆ ರಸೆಲ್ 12 ಕೋಟಿ, ವರುಣ್ ಚಕ್ರವರ್ತಿ 8 ಕೋಟಿ ರೂ ಹಾಗೂ ವೆಂಕಟೇಶ್ ಅಯ್ಯರ್ 8 ಕೋಟಿ ಹಾಗೂ ಸುನೀಲ್ ನರೇನ್ ಅವರಿಗೆ 6 ಕೋಟಿ ರೂಪಾಯಿ ನೀಡಿದೆ. IPL-2022 -Kolkata Knight Riders 2022 Players List
ಹರಾಜಿನಲ್ಲಿ 21 ಆಟಗಾರರಿಗೆ ಮಾಡಿರುವ ಖರ್ಚು – 55.55 ಕೋಟಿ ರೂ.
ಜೇಬಿನಲ್ಲಿ ಉಳಿಸಿಕೊಂಡಿರುವ ದುಡ್ಡು – 45 ಲಕ್ಷ ರೂ.
ತಂಡದಲ್ಲಿರುವ ಒಟ್ಟು ಆಟಗಾರರು – 25
17 ಭಾರತದ ಮತ್ತು ಎಂಟು ಮಂದಿ ವಿದೇಶಿ ಆಟಗಾರರು
ಇನ್ನು ಐಪಿಎಲ್ ಮೆಗಾ ಬಿಡ್ಡಿಂಗ್ ನಲ್ಲಿ 56 ಕೋಟಿ ರೂಪಾಯಿ ಪರ್ಸ್‍ನಲ್ಲಿಟ್ಟುಕೊಂಡಿತ್ತು. ಇದರಲ್ಲಿ 55.55 ಕೋಟಿ ರೂಪಾಯಿ ಖರ್ಚು ಮಾಡಿ 21 ಆಟಗಾರರನ್ನು ಖರೀದಿ ಮಾಡಿಕೊಂಡಿತ್ತು. 45 ಲಕ್ಷ ರೂಪಾಯಿ ಜೇಬಿನಲ್ಲಿಟ್ಟುಕೊಂಡಿದೆ. ಒಟ್ಟು 17 ಮಂದಿ ಭಾರತದ ಮತ್ತು ಎಂಟು ಮಂದಿ ವಿದೇಶಿ ಆಟಗಾರರು ಕೆಕೆಆರ್ ತಂಡದಲ್ಲಿದ್ದಾರೆ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಕೆಆರ್ ತಂಡ ಹೀಗಿದೆ.
ಶ್ರೇಯಸ್ ಅಯ್ಯರ್ – 12.25 ಕೋಟಿ ರೂ.)
ಆಂಡ್ರೆ ರಸೆಲ್ – 12 ಕೋಟಿ ರೂ.
ವರುಣ್ ಚಕ್ರವರ್ತಿ – 8 ಕೋಟಿ ರೂ.
ವೆಂಕಟೇಶ್ ಅಯ್ಯರ್ – 8 ಕೋಟಿ ರೂ.
ಸುನೀಲ್ ನರೇನ್ – 6 ಕೋಟಿ ರೂ.
ಶೆಲ್ಡನ್ ಜಾಕ್ಸನ್ – 60 ಲಕ್ಷ ರೂ.
ಅಜಿಂಕ್ಯಾ ರಹಾನೆ – 1 ಕೋಟಿ ರೂ.
ರಿಂಕ್ ಸಿಂಗ್ – 55 ಲಕ್ಷ ರೂ.
ಬಾಬಾ ಇಂದ್ರಜಿತ್ – 20 ಲಕ್ಷ ರೂ
ಅಭಿಜಿತ್ ಥೊಮರ್ – 40 ಲಕ್ಷ ರೂ.
ಸ್ಯಾಮ್ ಬಿಲ್ಲಿಂಗ್ಸ್ – 2 ಕೋಟಿ ರೂ.
ಆಲೆಕ್ಸ್ ಹೆಲ್ಸ್ – 1.50 ಕೋಟಿ ರೂ.
ರಸಿಕ್ ದಾರ್ – 20 ಲಕ್ಷ ರೂ.
ಅಶೋಕ್ ಶರ್ಮಾ – 55 ಲಕ್ಷ ರೂ.
ಟೀಮ್ ಸೌಥಿ – 1.5 ಕೋಟಿ ರೂ.
ಉಮೇಶ್ ಯಾದವ್ – 2 ಕೋಟಿ ರೂ
ಪ್ಯಾಟ್ ಕಮಿನ್ಸ್ – 7.25 ಕೋಟಿ ರೂ.
ನಿತೇಶ್ ರಾಣಾ – 8 ಕೋಟಿ ರೂ.
ಶಿವಂ ಮಾವಿ – 7.25 ಕೋಟಿ ರೂ
ಅಂಕುಲ್ ರಾಯ್ – 20 ಲಕ್ಷ ರೂ.
ಚಾಮಿಕಾ ಕರುಣರತ್ನೆ – 50 ಲಕ್ಷ ರೂ.
ಪ್ರಥಮ್ ಸಿಂಗ್ – 20 ಲಕ್ಷ ರೂ.
ರಮೇಶ್ ಕುಮಾರ್ – 20 ಲಕ್ಷ ರೂ.
ಮಹಮ್ಮದ್ ನಬಿ – 1 ಕೋಟಿ ರೂ.
ಅಮನ್ ಖಾನ್ – 20 ಲಕ್ಷ ರೂ.