IPL- 2022 – KKR vs PBKS Dream11 Prediction ಕೆಕೆಆರ್ – ಪಂಜಾಬ್ ಕಿಂಗ್ಸ್ – ಪ್ಲೇಯಿಂಗ್ ಇಲೆವೆನ್..!

15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ -8. ಏಪ್ರಿಲ್ 1- ಸಂಜೆ 7.30. ವಾಂಖೇಡೆ ಅಂಗಣ. ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹಣಾಹಣಿ
ಹೌದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂರನೇ ಪಂದ್ಯ. ಹಾಗೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಎರಡನೇ ಪಂದ್ಯ. ಈಗಾಗಲೇ ಕೆಕೆಆರ್ ತಂಡ ಅಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಸೋಲಿನ ರುಚಿ ಕಂಡಿದೆ. ಕೆಕೆಆರ್ ಸಿಎಸ್ ಕೆ ವಿರುದ್ಧ ಜಯ ಸಾಧಿಸಿದ್ರೆ, ಆರ್ ಸಿಬಿ ವಿರುದ್ಧ ಸೋಲು ಅನುಭವಿಸಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಆರ್ ಸಿಬಿ ವಿರುದ್ಧ ರೋಚಕ ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿದೆ. ಉತ್ತಮ ರನ್ ರೇಟ್ ಅನ್ನು ಕೂಡ ಹೊಂದಿದೆ.

ಕೆಕೆಆರ್ ತಂಡ ಆರ್ ಸಿಬಿ ವಿರುದ್ಧ ಮಾಡಿದ್ದ ತಪ್ಪನ್ನು ತಿದ್ದಿಕೊಳ್ಳಬೇಕಿದೆ. ತಂಡದಲ್ಲಿ ಹೊಡಿಬಡಿ ಆಟಗಾರರೂ ಇದ್ರೂ ಸಮಯೋಚಿತವಾಗಿ ಆಡಿದ್ರೆ ಸಮಸ್ಯೆ ಇಲ್ಲ. ನಾಯಕ ಶ್ರೇಯಸ್ ಅಯ್ಯರ್ ಬ್ಯಾಟ್ ನಿಂದ ರನ್ ಹರಿದು ಬಂದ್ರೆ ತೊಂದರೆ ಇಲ್ಲ. ಇನ್ನು ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಅತ್ಯುತ್ತಮ ಲಯದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿದೆ. IPL 2022 – KKR vs PBKS Dream11 Prediction
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ಬಗ್ಗೆ ಹೇಳುವುದೇ ಬೇಡ. ಬೌಲಿಂಗ್ ನಲ್ಲಿ ಕಾಗಿಸೊ ರಬಾಡ ಇಂದಿನ ಪಂದ್ಯವನ್ನು ಆಡಿದ್ರೆ ತಂಡದ ಇನ್ನಷ್ಟು ಬಲಿಷ್ಠವಾಗಿರುತ್ತದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್
ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ನಿತಿಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ , ಆಂಡ್ರೆ ರಸೆಲ್, ಸುನೀಲ್ ನರೇನ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಉಮೇಶ್ ಯಾದವ್, ಟೀಮ್ ಸೌಥಿ, ವರುಣ್ ಚಕ್ರವರ್ತಿ
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಷೆ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್ ಸ್ಟೋನ್, ಒಡಿಯನ್ ಸ್ಮಿತ್, ಶಾರೂಕ್ ಖಾನ್, ರಾಜ್ ಬಾವಾ, ಕಾಗಿಸೊ ರಬಾಡ, ಆರ್ಶದೀಪ್ ಸಿಂಗ್, ಹಪ್ರಿತ್ ಬ್ರಾರ್, ರಾಹುಲ್ ಚಾಹರ್.