IPl 2022 – ಗುಜರಾತ್ ಟೈಟಾನ್ಸ್ ಗೆ ಕೈಕೊಟ್ಟ ಜೇಸನ್ ರಾಯ್..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮುನ್ನವೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಆಘಾತವಾಗಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ 2 ಕೋಟಿ ರೂಪಾಯಿ ಬಿಡ್ ಮಾಡಿ ಇಂಗ್ಲೆಂಡ್ ನ ಜೇಸನ್ ರಾಯ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿ ಮಾಡಿತ್ತು.
ಆದ್ರೆ ಜೇಸನ್ ರಾಯ್ ಅವರು ಗುಜರಾತ್ ಟೈಟಾನ್ಸ್ ತಂಡಕ್ಕೆ ಕೈಕೊಟ್ಟಿದ್ದಾರೆ. ಪಂದ್ಯ ಶುರುವಾಗುವ ಕೆಲವೇ ದಿನಗಳು ಬಾಕಿ ಇದ್ದಾಗಲೇ ಜೇಸನ್ ರಾಯ್ ಅವರು ತಾನು ಐಪಿಎಲ್ ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.
ಬಯೋಬಬಲ್ ನಲ್ಲಿ ಹೆಚ್ಚು ಸಮಯ ಕಾಲ ಕಳೆಯಲು ಸಾಧ್ಯವಿಲ್ಲ. ಹೀಗಾಗಿ 2022ರ ಐಪಿಎಲ್ ನಿಂದ ಹಿಂದೆ ಸರಿಯುವುದಾಗಿ ಜೇಸನ್ ರಾಯ್ ಅವರು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗೆ ತಿಳಿಸಿದ್ದಾರೆ. IPl 2022 – Jason Roy opts out of tournament citing bio bubble fatigue
ಹಾಗಂತ ಜೇಸನ್ ರಾಯ್ ಅವರು ಈ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವುದು ಇದೇನೂ ಮೊದಲ ಸಲವಲ್ಲ. ಈ ಹಿಂದೆ 2013ರಲ್ಲಿ ಡೆಲ್ಲಿ ತಂಡಕ್ಕೂ ಜೇಸನ್ ರಾಯ್ ಅವರು ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದರು. ಆಗ ಡೆಲ್ಲಿ ತಂಡ ಜೇಸನ್ ರಾಯ್ ಅವರನ್ನು 1.5 ಕೋಟಿರೂಪಾಯಿಗೆ ಖರೀದಿ ಮಾಡಿತ್ತು.
ಈ ನಡುವೆ ಜೇಸನ್ ರಾಯ್ ಅವರು ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಿದ್ದರು. ಆಡಿರುವ ಆರು ಪಂದ್ಯಗಳಲ್ಲಿ ಜೇಸನ್ ರಾಯ್ 303 ರನ್ ದಾಖಲಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳಿದ್ದವು.
ಇನ್ನು ಐಪಿಎಲ್ ನಲ್ಲಿ ಜೇಸನ್ ರಾಯ್ ಒಟ್ಟು 13 ಪಂದ್ಯಗಳನ್ನು ಆಡಿದ್ದು, 329 ರನ್ ಗಳಿಸಿದ್ದರು. ಎರಡು ಅರ್ಧಶತಕಗಳಿವೆ.
ಇದೀಗ ಜೇಸನ್ ರಾಯ್ ಕೈಕೊಟ್ಟ ಕಾರಣ ಗುಜರಾತ್ ಟೈಟಾನ್ಸ್ ತಂಡ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಮಾರ್ಚ್ 26ರಿಂದ ಮೇ 29ರವರೆಗೆ 2022ರ ಸಾಲಿನ ಐಪಿಎಲ್ ಟೂರ್ನಿ ನಡೆಯಲಿದೆ.