IPL 2022 – 15ನೇ ಆವೃತ್ತಿಯ ಹಬ್ಬಕ್ಕೆ ಮುಹೂರ್ತ ಫಿಕ್ಸ್..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದೆ. ಗುರುವಾರ ನಡೆದ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮಾರ್ಚ್ 26ರಿಂದ ಮೇ 29ರವರೆಗೆ 2022ರ ಐಪಿಎಲ್ ಟೂರ್ನಿ ನಡೆಯಲಿದೆ. ಶೇ.40ರಷ್ಟು ಪ್ರೇಕ್ಷಕರಿಗೆ ಐಪಿಎಲ್ ಪಂದ್ಯವನ್ನು ನೋಡಲು ಅವಕಾಶ ನೀಡಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಒಟ್ಟು ಹತ್ತು ತಂಡಗಳು ಈ ಬಾರಿಯ ಐಪಿಎಲ್‍ನಲ್ಲಿ ಆಡಲಿವೆ. ಒಟ್ಟು 74 ಪಂದ್ಯಗಳು ನಡೆಯಲಿದ್ದು, 70 ಪಂದ್ಯಗಳು ಮುಂಬೈನ ಮೂರು ಮೈದಾನ ಹಾಗೂ ಪುಣೆಯ ಒಂದು ಮೈದಾನದಲ್ಲಿ ನಡೆಯಲಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣ, ಬ್ರಬೊರ್ನ್ ಅಂಗಣ, ಡಿ.ವೈ. ಪಾಟೀಲ್ ಕ್ರೀಡಾಂಗಣ ಮತ್ತು ಪುಣೆಯ ಗಹುಂಜೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದ್ರೆ ಫ್ಲೇ ಆಫ್ ನ ಪಂದ್ಯಗಳ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಆದ್ರೆ ಫೈನಲ್ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ. IPL 2022-IPL starts March 26; Mumbai, Pune to host matches

ಇನ್ನು ಮುಂಬೈನ ವಾಂಖೇಡೆ ಮತ್ತು ಡಿ.ವೈ. ಪಾಟೀಲ್ ಅಂಗಣದಲ್ಲಿ ತಲಾ 20 ಪಂದ್ಯಗಳು ಹಾಗೂ ಬ್ರಬೊರ್ನ್ ಮತ್ತು ಗಹುಂಜೆ ಮೈದಾನದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಒಟ್ಟು 55 ಪಂದ್ಯಗಳು ಮುಂಬೈ ನಲ್ಲಿ ನಡೆದ್ರೆ, 15 ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
ಮಹಾರಾಷ್ಟ್ರ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಪಂದ್ಯಗಳು ನಡೆಯಲಿವೆ. ಆರಂಭದಲ್ಲಿ ಶೇ.40ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗುತ್ತದೆ. ಕೋವಿಡ್ ಕೇಸ್ ಗಳು ಕಡಿಮೆಯಾದ್ರೆ ಕ್ರೀಡಾಂಗಣಗಳು ಕೂಡ ಭರ್ತಿಯಾಗಲಿವೆ.
ಸಿಎಸ್ ಕೆ, ಆರ್ ಸಿಬಿ, ಎಸ್ ಆರ್ ಚ್, ಕೆಕೆಆರ್, ರಾಜಸ್ತಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಈ ಬಾರಿಯ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.