IPL 2022 – ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಯಾವುದು ಮತ್ತು ಯಾಕೆ ?

ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಯಾವುದು ಅಂತ ಕೇಳಿದಾಗ ಮೊದಲು ಕೇಳಿ ಬರುವ ಹೆಸರು ಚೆನ್ನೈ ಸೂಪರ್ ಕಿಂಗ್ಸ್.
ಆದ್ರೆ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಪ್ರಶಸ್ತಿ ಗೆದ್ದಿದೆ. ಸಿಎಸ್ ಕೆ ನಾಲ್ಕು ಬಾರಿ ಗೆದ್ದಿರುವುದು. ಹೀಗಾಗಿ ಸಿಎಸ್ ಕೆ ಹೇಗೆ ಯಶಸ್ವಿ ತಂಡ ಅಂತ ಕೇಳಬಹುದು.
ಆದ್ರೆ ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲ. ನೆನಪಿಡಿ, ಸಿಎಸ್ ಕೆ ಕಳೆದ 14 ಆವೃತ್ತಿಗಳಲ್ಲಿ ಆಡಿರುವುದು 12 ಬಾರಿ ಮಾತ್ರ. ಎರಡು ಬಾರಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ನಿಷೇಧ ಅನುಭವಿಸಿತ್ತು. ಹೀಗಾಗಿ 12 ಟೂರ್ನಿಗಳಲ್ಲಿ 9 ಬಾರಿ ಫೈನಲ್ ಪ್ರವೇಶಿಸಿದೆ. ಮೂರು ಬಾರಿ ಲೀಗ್ ಹಂತಕ್ಕೆ ಸೀಮಿತವಾಗಿದೆ. ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಐದು ಬಾರಿ ರನ್ನರ್ ಅಪ್ ಆಗಿದೆ. ಹೀಗಾಗಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಎಸ್ ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಇನ್ನು ಎರಡನೇ ತಂಡ ಮುಂಬೈ ಇಂಡಿಯನ್ಸ್.. ಎಲ್ಲರಿಗೂ ಗೊತ್ತಿರುವ ಹಾಗೇ ಮುಂಬೈ ಇಂಡಿಯನ್ಸ್ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬೈ ತಂಡದ ಇನ್ನೊಂದು ವಿಶೇಷತೆ ಅಂದ್ರೆ ಆರು ಬಾರಿ ಫೈನಲ್ ಪ್ರವೇಶಿಸಿದೆ. ಇದರಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿದೆ.
ಇನ್ನುಳಿದಂತೆ ಕೆಕೆಆರ್ ತಂಡ ಮೂರು ಸಲ ಫೈನಲ್ ಪ್ರವೇಶಿಸಿ ಎರಡು ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಸನ್ ರೈಸರ್ಸ್ ಹೈದ್ರಬಾದ್ ತಂಡ ಎರಡು ಬಾರಿ ಫೈನಲ್ ತಲುಪಿದ್ದು, ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ರಾಜಸ್ತಾನ ರಾಯಲ್ಸ್ ತಂಡ ಚೊಚ್ಚಲ ಐಪಿಎಲ್ ನಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆದ್ದಿರುವುದನ್ನು ಬಿಟ್ರೆ ಇನ್ನುಳಿದ 13 ಟೂರ್ನಿಗಳಲ್ಲಿ ನೀರಸ ಪ್ರದರ್ಶನ ನೀಡಿದೆ. IPL 2022- IPL Championships and number of times each of them has played a final match

ಈ ನಡುವೆ ನಮ್ಮ ಆರ್ ಸಿಬಿ ತಂಡ ಐಪಿಎಲ್ ನ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ ತಂಡ. ಮೂರು ಬಾರಿ ಫೈನಲ್ ಪ್ರವೇಶಿಸಿದ್ರೂ ಕಪ್ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕಾಗಿಯೇ ಅಭಿಮಾನಿಗಳು ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಅಂತ ಹೇಳಿ ತಂಡವನ್ನು ಹುರಿದುಂಬಿಸಿದ್ರೂ ಆರ್ ಸಿಬಿಗೆ ಪ್ರಶಸ್ತಿ ದಕ್ಕಿಲ್ಲ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಗೂ ಐಪಿಎಲ್ ಪ್ರಶಸ್ತಿ ಮರೀಚಿಕೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ತಲುಪಿದ್ದು ಒಂದು ಬಾರಿ ಮಾತ್ರ. ಹಾಗೇ ಪಂಜಾಬ್ ಕಿಂಗ್ಸ್ ಕೂಡ. ಪ್ರೀತಿ ಝಿಂಟಾ ಅವರ ಪ್ರೀತಿಯ ತಂಡವಾಗಿರುವ ಪಂಜಾಬ್ ಕಿಂಗ್ಸ್ ಒಂದು ಬಾರಿ ಫೈನಲ್ ತಲುಪಿದ್ರೂ ಪ್ರಶಸ್ತಿ ಮಾತ್ರ ಒಲಿದು ಬಂದಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ – ಚಾಂಪಿಯನ್ ಆಗಿದ್ದು – 4 ಬಾರಿ- 2010, 2011, 2018, 2021
ರನ್ನರ್ ಅಪ್ ಆಗಿದ್ದು – 5 ಬಾರಿ- 2008, 2012, 2013, 2015, 2019
ಮುಂಬೈ ಇಂಡಿಯನ್ಸ್ – ಚಾಂಪಿಯನ್ ಆಗಿದ್ದು -5 ಬಾರಿ- 2013, 2015, 2017, 2019, 2020
ರನ್ನರ್ ಅಪ್ ಅಗಿದ್ದು – 1 ಬಾರಿ 2010
ಕೊಲ್ಕತ್ತಾ ನೈಟ್ ರೈಡರ್ಸ್
ಚಾಂಪಿಯನ್ ಆಗಿದ್ದು -2 ಬಾರಿ- 2012, 2014
ರನ್ನರ್ ಆಗಿದ್ದು -1 ಬಾರಿ- 2021
ಸನ್ ರೈಸರ್ಸ್ ಹೈದ್ರಾಬಾದ್
ಚಾಂಪಿಯನ್ ಆಗಿದ್ದು -1 ಬಾರಿ -2016
ರನ್ನರ್ ಅಪ್ ಆಗಿದ್ದು -1 ಬಾರಿ- 2018
ರಾಜಸ್ತಾನ ರಾಯಲ್ಸ್
ಚಾಂಪಿಯನ್ ಆಗಿದ್ದು -1 ಬಾರಿ 2008
ರನ್ನರ್ ಅಪ್ ಆಗಿದ್ದು – 0
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚಾಂಪಿಯನ್ ಆಗಿದ್ದು – 0
ರನ್ನರ್ ಅಪ್ ಆಗಿದ್ದು – 3 ಬಾರಿ – 2009, 2011, 2016
ಡೆಲ್ಲಿ ಕ್ಯಾಪಿಟಲ್ಸ್
ಚಾಂಪಿಯನ್ ಆಗಿದ್ದು -0
ರನ್ನರ್ ಅಪ್ ಆಗಿದ್ದು – 1ಬಾರಿ- 2020
ಪಂಜಾಬ್ ಕಿಂಗ್ಸ್
ಚಾಂಪಿಯನ್ ಆಗಿದ್ದು -0
ರನ್ನರ್ ಅಪ್ ಆಗಿದ್ದು -1 ಬಾರಿ – 2014