IPL 2022 -RCBಯ ಮೊದಲ ಮಿಂಚು, ಗುಡುಗು, ಸಿಡಿಲು ರಾಸ್ ಟೇಲರ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದ್ರೆ ಅದು ದೈತ್ಯ ದಾಂಡಿಗರ ಕೋಟೆ. ಕ್ರಿಸ್ ಗೇಲ್, ಎಬಿ ಡಿ’ವಿಲಿಯರ್ಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್”ವೆಲ್.. ಹೀಗೆ ಆರ್’ಸಿಬಿ ತಂಡದ ಪರ ಜಗತ್ತಿನ ಅತ್ಯಂತ ಸ್ಫೋಟಕ ಬ್ಯಾಟ್ಸ್’ಮನ್’ಗಳೇ ಆಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್’ವೆಲ್ ಈ ಬಾರಿಯ ಐಪಿಎಲ್”ನಲ್ಲೂ ರಾಯಲ್ ಚಾಲೆಂಜರ್ಸ್ ತಂಡದ ಪರ ಅಬ್ಬರಿಸಲಿದ್ದಾರೆ.
ಗೇಲ್, ಎಬಿಡಿ, ಕೊಹ್ಲಿ, ಮ್ಯಾಕ್ಸಿ… ಇವರೆಲ್ಲಾ ದೈತ್ಯ ದಾಂಡಿಗರು ನಿಜ. ಆದರೆ ಇವರೆಲ್ಲರಿಗಿಂತ ಮೊದ್ಲು ರಾಯಲ್ ಚಾಲೆಂಜರ್ಸ್ ತಂಡದಲ್ಲೊಬ್ಬ ಸಿಡಿಲ ಹೊಡೆತಗಳ ದಾಂಡಿಗನಿದ್ದ. ಆತ ಆರ್’ಸಿಬಿಯ ಮೊದಲ ಸಿಡಿಲು, ಮಿಂಚು, ಗುಡುಗು. ಆ ಬಾರಿಸಿದ ಸಿಕ್ಸರ್”ಗಳು ಚಿನ್ನಸ್ವಾಮಿ ಕ್ರೀಡಾಂಗಣದ ರೂಫ್ ಟಾಪ್’ಗಳನ್ನು ಚುಂಬಿಸುತ್ತಿದ್ವು. ಕೆಲವೊಮ್ಮೆ ಚೆಂಡು ಪಕ್ಕದ ಕಬ್ಬನ್ ಪಾರ್ಕ್”ಗೆ ಹೋಗಿ ಬಿದ್ದದ್ದೂ ಇದೆ. ಆತನ ಹೆಸರು ರಾಸ್ ಟೇಲರ್. Ross Taylor-ipl -rcb

ನ್ಯೂಜಿಲೆಂಡ್’ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ರಾಸ್ ಟೇಲರ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ್ದರು. ಆರ್’ಸಿಬಿಯ ನಂಬಿಕಸ್ಥ ದಾಂಡಿಗನಾಗಿದ್ದ ರಾಸ್ ಟೇಲರ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವಾರು ಸ್ಫೋಟಕ ಇನ್ನಿಂಗ್ಸ್’ಗಳನ್ನು ಆಡಿದ್ದಾರೆ. ರಾಸ್ ಹೊಡೆತಗಳನ್ನು ಕಂಡು ಆರ್’ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣೀತಾ ಇದ್ರು. ಕ್ರಿಸ್ ಗೇಲ್, ಎಬಿ ಡಿ’ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ತಂಡ ಸೇರುವ ಮುಂಚೆ ಆರ್’ಸಿಬಿಯ ರಿಯಲ್ ಬ್ಯಾಟಿಂಗ್ ಬಾಸ್ ಆಗಿದ್ದವರೇ ರಾಸ್ ಟೇಲರ್.
2010ರವರೆಗೆ ಒಟ್ಟು ಮೂರು ಐಪಿಎಲ್ ಟೂರ್ನಿಗಳಲ್ಲಿ ಆರ್’ಸಿಬಿ ಪರ ಆಡಿದ್ದ ರಾಸ್ ಟೇಲರ್, 2011ರಲ್ಲಿ ರಾಹುಲ್ ದ್ರಾವಿಡ್ ಜೊತೆ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡ್ರು. ಮುಂದಿನ ವರ್ಷ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ರೂ, ರಾಸ್ ಟೇಲರ್ ಅಂದ್ರೆ ನೆನಪಾಗೋದೇ ಆರ್’ಸಿಬಿ ಮತ್ತು ಆರ್’ಸಿಬಿ ಪರ ಅವರು ಆಡಿದ್ದ ಅದ್ಭುತ ಇನ್ನಿಂಗ್ಸ್’ಗಳು.
ರಾಸ್ ಟೇಲರ್ ರಾಯಲ್ ಚಾಲೆಂಜರ್ಸ್ ತೊರೆದ ವರ್ಷವೇ ಎಬಿ ಡಿ’ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಆರ್’ಸಿಬಿ ತಂಡ ಸೇರಿಕೊಂಡ್ರು. ಮುಂದಿನ ವರ್ಷಗಳಲ್ಲಿ ಈ ಭಲೇ ಜೋಡಿ ಆರ್’ಸಿಬಿ ಪರ ಅತ್ಯದ್ಭುತ ಆಟವಾಡಿ ಅಭಿಮಾನಿಗಳ ಮನ ಗೆದ್ರೆ, ಅದಕ್ಕೆಲ್ಲಾ ಬುನಾದಿ ಹಾಕಿ ಶ್ರೇಯ ಸಲ್ಲುವುದು ನಿಸ್ಸಂದೇಹವಾಗಿ ರಾಸ್ ಟೇಲರ್”ಗೆ.