IPL 2022-Harshal Patel – RCB – ಹರ್ಷೆಲ್ ಪಟೇಲ್ ಗೆ ಮೋಸ ಮಾಡಿದ್ದು ಯಾರು ? ಆರ್ ಸಿಬಿ ವೇಗಿ ಹೀಗೆ ಹೇಳಿದ್ದು ಯಾಕೆ ?
ಹರ್ಷೆಲ್ ಪಟೇಲ್… ಹರಿಯಾಣ ರಣಜಿ ತಂಡದ ನಾಯಕ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರಂಪ್ ಕಾರ್ಡ್ ಬೌಲರ್.
2021ರಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದ ಹರ್ಷೆಲ್ ಪಟೇಲ್ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಅಲ್ಲದೆ ಟೂರ್ನಿಯಲ್ಲಿ 32 ವಿಕೆಟ್ ಕೂಡ ಕಬಳಿಸಿ ಗಮನ ಸೆಳೆದಿದ್ದರು. ಈ ಮೂಲಕ ಹರ್ಷೆಲ್ ಪಟೇಲ್ ಡ್ವೇನ್ ಬ್ರೇವೋ ಅವರ ದಾಖಲೆಯನ್ನು ಸಮಗೊಳಿಸಿದ್ದರು. ಇನ್ನೊಂದೆಡೆ ಹರ್ಷೆಲ್ ಪಟೇಲ್ ಅವರಿಗೆ ಟೀಮ್ ಇಂಡಿಯಾದಲ್ಲೂ ಸ್ಥಾನ ಸಿಕ್ಕಿತ್ತು.
ಆದ್ರೂ ಈ ಬಾರಿಯ ಐಪಿಎಲ್ ಗೆ ಆರ್ ಸಿಬಿ ತಂಡ ಹರ್ಷೆಲ್ ಪಟೇಲ್ ಅವರನ್ನು ರಿಟೇನ್ ಮಾಡಿಕೊಂಡಿರಲಿಲ್ಲ. ಆದ್ರೆ ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಆರ್ ಸಿಬಿಗೆ ತೀವ್ರ ಪ್ರತಿಸ್ಪರ್ಧೆಯನ್ನು ಒಡ್ಡಿದ್ದವು. ಆದ್ರೆ ಆರ್ ಸಿಬಿ ಮಾತ್ರ ಹರ್ಷೆಲ್ ಪಟೇಲ್ ಅವರನ್ನು ಬಿಟ್ಟುಕೊಡಲಿಲ್ಲ.
ಇದೀಗ ಹರ್ಷೆಲ್ ಪಟೇಲ್ ಐಪಿಎಲ್ ನಲ್ಲಿ ಆಗಿರುವ ಕೆಲವೊಂದು ಮೋಸದ ವಿಚಾರಗಳನ್ನು ಹೇಳಿಕೊಂಡಿದ್ದಾರೆ. IPL 2022-Harshal Patel – RCB – Dhokha hua mere saath: Harshal Patel
ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹರ್ಷೆಲ್ ಪಟೇಲ್ ಜೊತೆ ಕೆಲವೊಂದು ಫ್ರಾಂಚೈಸಿಗಳು ಐಪಿಎಲ್ ಬಿಡ್ಡಿಂಗ್ ಮುನ್ನವೇ ಮಾತುಕತೆ ನಡೆಸಿದ್ದವು. ಅಲ್ಲದೆ ಬಿಡ್ಡಿಂಗ್ ಖರೀದಿ ಮಾಡುವುದಾಗಿಯೂ ಹರ್ಷೆಲ್ ಪಟೇಲ್ ಅವರಿಗೆ ಭರವಸೆ ನೀಡಿದ್ದವು. ಆದ್ರೆ 2018ರ ಮೆಗಾ ಹರಾಜಿನಲ್ಲಿ ಹರ್ಷೆಲ್ ಪಟೇಲ್ ಕೇವಲ 20 ಲಕ್ಷ ರೂಪಾಯಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮೂರು ವರ್ಷ ಆಡಿದ್ದರು. ಅಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು ಕೇವಲ 12 ಪಂದ್ಯಗಳನ್ನು ಮಾತ್ರ.
ಮೂರು ನಾಲ್ಕು ಫ್ರಾಂಚೈಸಿಗಳು ನನ್ನ ಜೊತೆ ಮಾತನಾಡಿದ್ದರು. ಅಲ್ಲದೆ ಬಿಡ್ಡಿಂಗ್ ನಲ್ಲಿ ಖರೀದಿ ಮಾಡುವುದಾಗಿ ಹೇಳಿದ್ದರು. ಆದ್ರೆ ಹರಾಜಿನಲ್ಲಿ ಯಾರು ಕೂಡ ಬಿಡ್ ಮಾಡಿರಲಿಲ್ಲ.
ನನಗೆ ಮೋಸ ಮಾಡಿದ್ರು. ನಾನು ಮೋಸ ಹೋಗಿದ್ದೆ ಎಂದು ಹರ್ಷೆಲ್ ಪಟೇಲ್ ಅವರು ನಾಲ್ಕು ವರ್ಷಗಳ ಹಿಂದಿನ ಕಹಿ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. \
ಆದ್ರೆ ನಂತರದ ದಿನಗಳಲ್ಲಿ ಈ ಯೋಚನೆಯಿಂದ ಹೊರಬಂದೆ. ಈ ಕರಾಳ ದಿನಗಳನ್ನು ಯೋಚಿಸುವ ಬದಲು ನನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದೆ. ನನ್ನತನವನ್ನು ನಾನು ಮೈಗೂಡಿಸಿಕೊಂಡೆ ಎಂದು ಕೂಡ ಹರ್ಷೆಲ್ ಪಟೇಲ್ ಹೇಳಿದ್ದಾರೆ.
ಹರ್ಷೆಲ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ನಂತರ ಅವರ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡರು. ಅಲ್ಲದೆ ಆಗಿನ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆ, ಮಾರ್ಗದರ್ಶನ ಮತ್ತು ಬೆಂಬಲ ಕೂಡ ಹರ್ಷೆಲ್ ಅವರ ಕ್ರಿಕೆಟ್ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಹೀಗಾಗಿಯೇ ಹರ್ಷೆಲ್ ಪಟೇಲ್ ಅವರು ಪ್ರಮುಖ ಬೌಲರ್ ಆಗಿಯೂ ರೂಪುಗೊಂಡಿದ್ದಾರೆ.