IPL 2022: ಹಾರ್ದಿಕ್ ಪಾಂಡ್ಯ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್!: ಕಾರಣ ಏನು ಗೊತ್ತಾ?
ಐಪಿಎಲ್ ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿರುವ ಗುಜರಾತ್ ಟೈಟನ್ಸ್ ಅದ್ಭುತ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. 2022ರ ಯಶಸ್ವಿ ತಂಡ ಎನಿಸಿರುವ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಪ್ರಸಕ್ತ ಸೀಸನ್ನ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ.
ಐಪಿಎಲ್ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಜವಾಬ್ದಾರಿ ಹೊತ್ತಿರುವ ಹಾರ್ದಿಕ್ ಪಾಂಡ್ಯ, ಮೊದಲ ಪ್ರಯತ್ನದಲ್ಲೇ ನಾಯಕತ್ವದಲ್ಲಿ ತಮ್ಮ ತಂಡಕ್ಕೆ ದೊಡ್ಡಮಟ್ಟದ ಸಕ್ಸಸ್ ಒದಗಿಸಿಕೊಟ್ಟಿದ್ದಾರೆ. ಸದ್ಯ ಆಡಿರುವ 5 ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಒಟ್ಟು 4 ಪಂದ್ಯವನ್ನು ಗೆದ್ದು, ಏಕೈಕ ಪಂದ್ಯದಲ್ಲಿ ಸೋಲು ಕಂಡಿದೆ. ಅಲ್ಲದೇ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿರುವ ಗುಜರಾತ್ ಟೈಟನ್ಸ್, ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದೆ.
ಒಂದೆಡೆ ಗುಜರಾತ್ ಟೈಟನ್ಸ್ ಸಾಂಘಿಕ ಪ್ರದರ್ಶನದಿಂದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಸಹ ಭರ್ಜರಿ ಪ್ರದರ್ಶನದಿಂದ ಮಿಂಚುತ್ತಿದ್ದಾರೆ. ಐಪಿಎಲ್ನ ಅನುಭವಿ ಕ್ಯಾಪ್ಟನ್ಗಳಾದ ರೋಹಿತ್ ಶರ್ಮ, ಕೇನ್ ವಿಲಿಯಮ್ಸ್ ಅವರಂತಹ ನಾಯಕರ ನಡುವೆಯೂ ಹಾರ್ದಿಕ್ ಪಾಂಡ್ಯ, ತಾನೊಬ್ಬ ಚಾಣಾಕ್ಷ ನಾಯಕ ಎಂಬುದನ್ನ ಆಡಿರುವ ಐದು ಪಂದ್ಯಗಳಲ್ಲಿ ಸಾಬೀತುಪಡಿಸಿದ್ದಾರೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್, ಬೌಲಿಂಗ್ನಲ್ಲೂ ಸಹ ಹಾರ್ದಿಕ್ ಪಾಂಡ್ಯ, ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. IPL 2022: Hardik Pandya has the qualities to become a successful captain
ಐಪಿಎಲ್ ನಲ್ಲಿ 10 ತಂಡಗಳನ್ನು ಮುನ್ನಡೆಸುತ್ತಿರುವ ಕ್ಯಾಪ್ಟನ್ಗಳ ಪ್ರದರ್ಶನಕ್ಕೆ ಹೋಲಿಸಿದರೆ, ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. 15ನೇ ಸೀಸನ್ನಲ್ಲಿ ಈವರೆಗೂ ಆಡಿರುವ 5 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ, 76ರ ಸರಾಸರಿಯಲ್ಲಿ ಒಟ್ಟು 228 ರನ್ ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕ ಒಳಗೊಂಡಿದೆ. ಇನ್ನೂ ಬೌಲಿಂಗ್ನಲ್ಲೂ ಮಿಂಚು ಹರಿಸಿರುವ ಪಾಂಡ್ಯ, 4 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ ಪರಿಪೂರ್ಣ ಕ್ಯಾಪ್ಟನ್ ಆಗಿ ಛಾಪು ಮೂಡಿಸಿದ್ದಾರೆ.
2022ರ ಐಪಿಎಲ್ನಲ್ಲಿ ಹೆಚ್ಚು ರನ್ಗಳಿಸಿರುವ ಕ್ಯಾಪ್ಟನ್ಸ್
ಹಾರ್ದಿಕ್ ಪಾಂಡ್ಯ – 228 ರನ್ಗಳು
ಫಾಫ್ ಡುಪ್ಲೆಸ್ಸಿ – 146 ರನ್ಗಳು
ಕೆ.ಎಲ್.ರಾಹುಲ್ – 132 ರನ್ಗಳು
ಶ್ರೇಯಸ್ ಅಯ್ಯರ್ – 123 ರನ್ಗಳು
ರಿಷಬ್ ಪಂತ್ – 110 ರನ್ಗಳು
ರೋಹಿತ್ ಶರ್ಮ – 108 ರನ್ಗಳು
ಕೇನ್ ವಿಲಿಯಂಸನ್ – 107 ರನ್ಗಳು
ಸಂಜೂ ಸ್ಯಾಮ್ಸನ್ – 106 ರನ್ಗಳು
ಮಯಂಕ್ ಅಗರ್ವಾಲ್ – 94 ರನ್ಗಳು
ರವೀಂದ್ರ ಜಡೇಜಾ – 66 ರನ್ಗಳು