ಸೂಪರ್ ಸಂಡೆಯ ಬಿಗ್ ಫೈಟ್ ನಲ್ಲಿ ಗೆಲುವು ಯಾರಿಗೆ ? Gujarat Titans vs Chennai Super kings Probable XIs:
15ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಹೋರಾಟ ನಡೆಸಲಿವೆ.
ಏಪ್ರಿಲ್ 17, ರಾತ್ರಿ 7.30ರಿಂದ ಪುಣೆಯ ಎಮ್ ಸಿಎ ಅಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್Àಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೋರಾಟ ನಡೆಸಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಅಲ್ಲದೆ ಒಂದು ಪಂದ್ಯದಲ್ಲಿ ಮಾತ್ರ ಸೋಲಿನ ರುಚಿ ಕಂಡಿದೆ.
ಇನ್ನು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ ನಾಲ್ಕು ಪಂದ್ಯಗಳನ್ನು ಸೋತ ಬಳಿಕ ಐದನೇ ಪಂದ್ಯದಲ್ಲಿ ಗೆಲುವು ಕಂಡಿದೆ. ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಎಂಟ್ರಿ ಕೊಡಬೇಕಾದ್ರೆ ಸಾಲು ಸಾಲು ಗೆಲುವನ್ನು ದಾಖಲಿಸಲೇಬೇಕಿದೆ.
ಇನ್ನೊಂದೆಡೆ ಸಿಎಸ್ ಕೆ ತಂಡದ ಆಟಗಾರರು ಕೂಡ ಫಾರ್ಮ್ ಕಂಡುಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ವೈಫಲ್ಯದಿಂದ ಹೊರಬಂದ್ರೆ ಸಿಎಸ್ ಕೆ ತಂಡಕ್ಕೆ ಟೆನ್ಷನ್ ಇಲ್ಲ. ಆರ್ ಸಿಬಿ ವಿರುದ್ಧದ ಗೆಲುವು ಸಿಎಸ್ ಕೆ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅದ್ರಲ್ಲೂ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅಮೋಘ ಫಾರ್ಮ್ ನಲ್ಲಿದ್ದಾರೆ. IPL 2022- Gujarat Titans vs Chennai Super kings Probable XIs:
ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡ ಕೂಡ ಸಾಂಘಿಕ ಆಟದಿಂದ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯನ್ನು ಅರಿತುಕೊಂಡು ಆಡುತ್ತಿದ್ದಾರೆ. ಇದು ಇಡೀ ತಂಡದ ವಿಶ್ವಾಸವನ್ನು ಹೆಚ್ಚಿಸುತ್ತಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಶುಬ್ಮನ್ ಗಿಲ್
ಮ್ಯಾಥ್ಯೂ ವಾಡೆ (ವಿಕೆಟ್ ಕೀಪರ್)
ವಿಜಯ್ ಶಂಕರ್
ಹಾರ್ದಿಕ್ ಪಾಂಡ್ಯ (ನಾಯಕ)
ಡೇವಿಡ್ ಮಿಲ್ಲರ್
ಅಭಿನವ್ ಮನೋಹರ್
ರಾಹುಲ್ ಟೆವಾಟಿಯಾ
ರಶೀದ್ ಖಾನ್
ಯಶ್ ದಯಾಲ್
ಮಹಮ್ಮದ್ ಶಮಿ
ಲೂಕಿ ಫರ್ಗುಸನ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ರಾಬಿನ್ ಉತ್ತಪ್ಪ
ರುತುರಾಜ್ ಗಾಯಕ್ವಾಡ್
ಮೋಯಿನ್ ಆಲಿ
ಶಿವಮ್ ದುಬೆ
ಅಂಬಟಿ ರಾಯುಡು
ಎಮ್. ಎಸ್. ಧೋನಿ (ವಿಕೆಟ್ ಕೀಪರ್)
ರವೀಂದ್ರ ಜಡೇಜಾ (ನಾಯಕ)
ಡ್ವೇನ್ ಬ್ರೇವೋ
ಕ್ರಿಸ್ ಜೋರ್ಡಾನ್
ಮೊಹೀಶ್ ತೀಕ್ಷಣ
ಮುಕೇಶ್ ಚೌಧುರಿ