IPL 2022- Gujarat titans – ಗುಜರಾತ್ ಟೈಟಾನ್ಸ್ ತಂಡದ ಸ್ಟ್ರೇಂತ್ ಮತ್ತು ವೀಕ್ ನೆಸ್ .. ತಂಡದ ಕಾಂಬಿನೇಷನ್ ಹೇಗಿದೆ..?

ಗುಜರಾತ್ ಟೈಟಾನ್ಸ್. ಈ ಬಾರಿಯ ಐಪಿಎಲ್ ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ತಂಡಗಳಲ್ಲಿ ಒಂದಾಗಿದೆ.
ಅಹಮದಾಬಾದ್ ನಗರವನ್ನು ಪ್ರತಿನಿಧಿಸುವ ಗುಜರಾತ್ ಟೈಟಾನ್ಸ್ ತಂಡದ ಮಾಲೀಕತ್ವ ಸಿವಿಸಿ ಗ್ರೂಪ್ ನದ್ದು. 5625 ಕೋಟಿ ರೂಪಾಯಿ ನೀಡಿ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ.
ಹಾರ್ದಿಕ್ ಪಾಂಡ್ಯ ಅವರು ತಂಡದ ನಾಯಕನಾಗಿದ್ದಾರೆ. ಆಶೀಷ್ ನೆಹ್ರಾ ಅವರು ತಂಡದ ಹೆಡ್ ಕೋಚ್ ಆಗಿದ್ರೆ, ವಿಕ್ರಮ್ ಸೋಲಂಕಿ ಅವರು ಕ್ರಿಕೆಟ್ ಡೈರೆಕ್ಟರ್. ಹಾಗೇ ಗ್ಯಾರಿ ಕಸ್ಟರ್ನ್ ತಂಡದ ಮೆಂಟರ್ ಆಗಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಗುಜರಾತ್ ತಂಡಕ್ಕೆ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶವಿತ್ತು. ಇದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಅವರನ್ನು ತಲಾ 15 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ರೆ, ಶುಬ್ಮನ್ ಗಿಲ್ ಅವರಿಗೆ ಎಂಟು ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.

ಹರಾಜಿಗೆ ಮುನ್ನ ಮಾಡಿದ ಖರ್ಚು- 38 ಕೋಟಿ ರೂ.
ಹರಾಜಿನಲ್ಲಿ ಮಾಡಿದ ಖರ್ಚು – 51.85 ಕೋಟಿ ರೂ.
ಜೇಬಿನಲ್ಲಿ ಉಳಿಸಿಕೊಂಡ ಹಣ – 15 ಲಕ್ಷ ರೂ.
ತಂಡದಲ್ಲಿರುವ ಆಟಗಾರರು – 23
ಭಾರತದ ಆಟಗಾರರು – 15 ಮಂದಿ
ವಿದೇಶಿ ಆಟಗಾರರು – 8 ಮಂದಿ
ಹೀಗೆ ಹರಾಜಿಗೆ ಮುನ್ನ ಗುಜರಾತ್ ತಂಡ 38 ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನುಳಿದ 52 ಕೋಟಿ ರೂಪಾಯಿಗಳಲ್ಲಿ 51.85 ಕೋಟಿ ರೂಪಾಯಿ ಖರ್ಚು ಮಾಡಿ 20 ಆಟಗಾರರನ್ನು ಖರೀದಿ ಮಾಡಿದೆ. ಜೇಬಿನಲ್ಲಿ 15 ಲಕ್ಷ ರೂಪಾಯಿ ಉಳಿಸಿಕೊಂಡಿದೆ. ಒಟ್ಟು 89.85 ಲಕ್ಷ ರೂಪಾಯಿ ಖರ್ಚು ಮಾಡಿದೆ. ಇನ್ನು ಇಬ್ಬರು ಆಟಗಾರರನ್ನು ಖರೀದಿ ಮಾಡಬಹುದು.
ಈ ನಡುವೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭದಲ್ಲೇ ಜೇಸನ್ ರಾಯ್ ಅವರು ಆಘಾತ ನೀಡಿದ್ದಾರೆ. ಜೇಸನ್ ರಾಯ್ ಅವರನ್ನು ಜಿಟಿ ತಂಡ 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಬಳಿಕ ವೈಯಕ್ತಿಕ ಕಾರಣ ನೀಡಿ ಜೇಸನ್ ರಾಯ್ ಅವರು ತಂಡದಿಂದ ಹೊರಗುಳಿದಿದ್ದಾರೆ. ಬದಲಿ ಆಟಗಾರನನ್ನು ಇನ್ನೂ ಕೂಡ ಗುಜರಾತ್ ತಂಡ ಆಯ್ಕೆ ಮಾಡಿಕೊಂಡಿಲ್ಲ. ಹೀಗಾಗಿ ಸದ್ಯ ತಂಡದಲ್ಲಿ 22 ಮಂದಿ ಆಟಗಾರರು ಇದ್ದಾರೆ. ಇದರಲ್ಲಿ ಏಳು ಮಂದಿ ವಿದೇಶಿ ಆಟಗಾರರಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡ
ಹರಾಜಿಗೂ ಮುನ್ನ ಖರೀದಿಸಿದ ಆಟಗಾರರು
ಹಾರ್ದಿಕ್ ಪಾಂಡ್ಯ -ನಾಯಕ- 15 ಕೋಟಿ ರೂ.
ರಶೀದ್ ಖಾನ್ – 15 ಕೋಟಿ ರೂ.
ಶುಬ್ಮನ್ ಗಿಲ್ – 8 ಕೋಟಿ ರೂ.
ಹÀರಾಜಿನಲ್ಲಿ ಖರೀದಿಸಿದ ಬ್ಯಾಟ್ಸ್ ಮೆನ್ ಗಳು
ಡೆವಿಡ್ ಮಿಲ್ಲರ್ – 3 ಕೋಟಿ ರೂ.
ಮ್ಯಾಥ್ಯೂ ವಾಡೆ – 2.40 ಕೋಟಿ ರೂ.
ವೃದ್ದಿಮಾನ್ ಸಾಹಾ – 1.90 ಕೋಟಿ ರೂ.
ಅಭಿನವ್ ಸದಂಗಾನಿ – 2.60 ಕೋಟಿ ರೂ.
ಸಾಯಿ ಸುದರ್ಶನ್ – 20 ಲಕ್ಷ ರೂ.
ಹರಾಜಿನಲ್ಲಿ ಖರೀದಿಸಿದ ಬೌಲರ್ ಗಳು
ವರುಣ್ ಆರೋನ್ – 50 ಲಕ್ಷ ರೂ.
ದರ್ಶನ್ ನಲ್ಕಾಂಡೆ – 20 ಲಕ್ಷ ರೂ.
ಯಶ್ ದಯಾಲ್ – 3.20 ಕೋಟಿ ರೂ.
ಪ್ರದೀಪ್ ಸಂಗ್ವಾನ್ – 20 ಲಕ್ಷ ರೂ.
ಅಲ್ಝಾರಿ ಜೊಸೇಫ್ – 2.40 ಕೋಟಿ ರೂ.
ಆರ್. ಸಾಯಿ ಕಿಶೋರ್ – 3 ಕೋಟಿ ರೂ.
ನೂರ್ ಅಹಮ್ಮದ್ – 30 ಲಕ್ಷ ರೂ.
ಲೂಕಿ ಫರ್ಗುಸನ್ – 10 ಕೋಟಿ ರೂ.
ಮಹಮ್ಮದ್ ಶಮಿ – 6.25 ಕೋಟಿ ರೂ.
ಹರಾಜಿನಲ್ಲಿ ಖರೀದಿಸಿ ಆಲ್ ರೌಂಡರ್ಸ್
ಡಾಮ್ನಿಕ್ ಡ್ರಾಕೆಸ್ – 1.10 ಕೋಟಿ ರೂ.
ವಿಜಯ್ ಶಂಕರ್ – 1.40 ಕೋಟಿ ರೂ.
ಜಯಂತ್ ಯಾದವ್ – 1.70 ಕೋಟಿ ರೂ.
ಗುರ್ ಕೀರತ್ ಸಿಂಗ್ – 50 ಲಕ್ಷ ರೂ
ರಾಹುಲ್ ಟೆವಾಟಿಯಾ – 9 ಕೋಟಿ ರೂ.