IPL 2022- GT Vs SRH – ಗುಜರಾತ್ ಟೈಟಾನ್ಸ್ ಗೆ ಸೈಲೆಂಟಾಗಿ ಠಕ್ಕರ್ ಕೊಡುತ್ತಾ ಎಸ್ ಆರ್ ಎಚ್..? Match 40 – Match Prediction
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಮುಂಬೈನ ವಾಂಖೇಡೆ ಅಂಗಣದಲ್ಲಿ ಕಾದಾಟ ನಡೆಸಲಿವೆ.
ಸದ್ಯಕ್ಕೆ ಟೂರ್ನಿಯ ಬಲಿಷ್ಠ ತಂಡಗಳ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳನ್ನು ಸಾಕಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ಗುಜರಾತ್ ಟೈಟಾನ್ಸ್ ಅಬ್ಬರಿಸುತ್ತ ಗೆಲುವು ದಾಖಲಿಸುತ್ತಿದೆ. ಇನ್ನೊಂದೆಡೆ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಸೈಲೆಂಟ್ ಆಗಿ ಎದುರಾಳಿ ತಂಡಗಳನ್ನು ಸದೆ ಬಡಿಯುತ್ತಿದೆ. IPL 2022- GT Vs SRH -Match 40 – Match Prediction
ಇನ್ನು ಗುಜರಾತ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆದ್ರೆ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಯುವ ಆಟಗಾರರನ್ನು ಸ್ಟಾರ್ ಆಟಗಾರರನ್ನಾಗಿ ಮಾಡುತ್ತಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಮಾತ್ರ ಸೋತಿದೆ. ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಹಾಗೇ ಸನ್ ರೈಸರ್ಸ್ ಹೈದ್ರಬಾದ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ನಡುವೆ ಸನ್ ರೈಸರ್ಸ್ ತಂಡದ ರನ್ ರೇಟ್ ಗುಜರಾತ್ ತಂಡಕ್ಕಿಂತ ಹೆಚ್ಚಿದೆ.
ಚೊಚ್ಚಲ ಬಾರಿ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಜೊತೆಗೆ ನಾಯಕನ ಆಟವನ್ನು ಆಡುತ್ತಿದ್ದಾರೆ. ಹಾಗೇ ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ವೃದ್ದಿಮಾನ್ ಸಾಹಾ ಸ್ಥಿರ ಪ್ರದರ್ಶನ ನೀಡಬೇಕಿದೆ. ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗುತ್ತಿದೆ. ಹಾಗೇ ರಾಹುಲ್ ಟೆವಾಟಿಯಾ ಅವರ ಆಲ್ ರೌಂಡ್ ಆಟ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್ ಬಗ್ಗೆ ಹೇಳುವುದೇ ಬೇಡ. ಇನ್ನುಳಿದಂತೆ ಮಹಮ್ಮದ್ ಶಮಿ, ಅಲ್ಝಾರಿ ಜೋಸೆಫ್, ಯಶ್ ದಯಾಲ್, ಲೂಕಿ ಫರ್ಗುಸನ್ ಅವರು ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ಸಫಲರಾಗುತ್ತಿದ್ದಾರೆ.
ಇನ್ನು ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸ್ ಪ್ರಮುಖ ಆಧಾರ ಸ್ತಂಭ. ಅಭಿಷೇಕ್ ವರ್ಮಾ, ರಾಹುಲ್ ತ್ರಿಪಾಠಿ, ಆಡೆನ್ ಮಾಕ್ರ್ರಮ್ ನಿಕೊಲಾಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್ ಸಮಯೋಚಿತವಾಗಿ ಆಡುತ್ತಿದ್ದಾರೆ.
ಈ ನಡುವೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್ ಮತ್ತು ಟಿ. ನಟರಾಜನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬೌಲರ್ ಗಳು. ಈ ನಾಲ್ವರ ದಾಳಿಗೆ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟ್ಸ್ ಮೆನ್ ಗಳು ಯಾವ ರೀತಿ ಉತ್ತರ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.