IPL 2022- GT Vs SRH – ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್ -Match 40 GT Probable XIs
ಏಪ್ರಿಲ್ 27. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 40. ಸಮಯ ರಾತ್ರಿ 7.30. ಮುಂಬೈನ ವಾಂಖೇಡೆ ಮೈದಾನ. ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ಮುಖಾಮುಖಿ.
ಹೌದು, ಬಲಿಷ್ಠ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆಯುವುದಂತೂ ಪಕ್ಕಾ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲೂ ಇದೆ. ಯಾಕಂದ್ರೆ ಈ ಬಾರಿಯ ಐಪಿಎಲ್ ನಲ್ಲಿ ಗುಜರಾತ್ ತಂಡ ಸೋತಿರುವುದು ಸನ್ ರೈಸರ್ಸ್ ಹೈದ್ರಬಾದ್ ವಿರುದ್ಧ ಮಾತ್ರ. ಆಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಎಸ್ ಆರ್ ಎಚ್ ವಿರುದ್ಧ ಗೆಲ್ಲಲೇಬೇಕು ಎಂಬ ಹಠ ಹಾರ್ದಿಕ್ ಪಾಂಡ್ಯ ಬಳಗಕ್ಕಿದೆ.
ಟೂರ್ನಿಯ 21ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎಂಟು ವಿಕೆಟ್ ಗಳಿಂದ ಎಸ್ ಆರ್ ಎಚ್ ತಂಡದ ವಿರುದ್ಧ ಸೋಲು ಅನುಭವಿಸಿತ್ತು. IPL 2022- GT Vs SRH -Match 40 GT Probable XIs
ಇದೀಗ ಎರಡನೇ ಬಾರಿ ಎಸ್ ಆರ್ ಎಚ್ ಮತ್ತು ಗುಜರಾತ್ ತಂಡಗಳು ಹೋರಾಟ ನಡೆಸುತ್ತಿವೆ. ಎರಡು ತಂಡಗಳು ಕೂಡ ಗೆಲುವಿನ ಉನ್ಮಾದದಲ್ಲಿ ತೇಲಾಡುತ್ತಿವೆ.
ಹಾಗೇ ನೋಡಿದ್ರೆ ಗುಜರಾತ್ ಟೈಟಾನ್ಸ್ ತಂಡ ಹೆಚ್ಚು ನಂಬಿಕೆಯನ್ನಿಟ್ಟುಕೊಂಡಿರುವುದು ಬೌಲಿಂಗ್ ವಿಭಾಗದಲ್ಲಿ. ಮಹಮ್ಮದ್ ಶಮಿ, ಅಲ್ಝಾರಿ ಜೋಸೆಫ್, ಲೂಕಿ ಫರ್ಗುಸನ್ ಜೊತೆಗೆ ಯಶ್ ದಯಾಲ್ನಂತಹ ಘಾತಕ ವೇಗಿಗಳಿದ್ದಾರೆ. ಇನ್ನೊಂದೆಡೆ ಸ್ಪಿನ್ ಮೋಡಿಗಾರ ರಶೀದ್ ಖಾನ್ ಜೊತೆಗೆ ರಾಹುಲ್ ಟೆವಾಟಿಯಾ ಕೂಡ ಇದ್ದಾರೆ. ಹಾಗೇ ಸಂದರ್ಭಕ್ಕೆ ತಕ್ಕಂತೆ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲೂ ಎದುರಾಳಿ ತಂಡಕ್ಕೆ ಮಾರಕವಾಗಬಹುದು.
ಆದ್ರೆ ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಹೆಚ್ಚು ನಂಬಿಕೊಂಡಿದೆ. ಅಪಾಯಕಾರಿ ಮ್ಯಾಥ್ಯೂ ವಾಡೆ 11ರ ಬಳಗದಲ್ಲಿ ಕಾಣಿಸಿಕೊಂಡ್ರೆ, ಡೆವಿಡ್ ಮಿಲ್ಲರ್ ಅಥವಾ ಅಲ್ಝಾರಿ ಜೋಸೆಫ್ ಹೊರಗುಳಿಯಬೇಕಾಗುತ್ತದೆ. ಇನ್ನುಳಿದಂತೆ ಶುಬ್ಮನ್ ಗಿಲ್, ಅಭಿನವ್ ಮನೋಹರ್ ನೈಜ ಆಟವನ್ನು ಆಡಿದ್ರೆ ಗುಜರಾತ್ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ.
ಮುಖ್ಯವಾಗಿ ಗುಜರಾತ್ ಬ್ಯಾಟ್ಸ್ ಮೆನ್ ಗಳಿಗೆ ಸವಾಲಾಗಿರುವುದು ಎಸ್ ಎರ್ ಎಚ್ ತಂಡದ ಘಾತಕ ವೇಗಿಗಳು.
ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಸೇಡು ತೀರಿಸಿಕೊಂಡು ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಶುಬ್ಮನ್ ಗಿಲ್
ವೃದ್ದಿಮಾನ್ ಸಾಹ (ವಿಕೆಟ್ ಕೀಪರ್)
ಹಾರ್ದಿಕ್ ಪಾಂಡ್ಯ (ನಾಯಕ)
ಡೇವಿಡ್ ಮಿಲ್ಲರ್
ಅಭಿನವ್ ಮನೋಹರ್
ರಾಹುಲ್ ಟೆವಾಟಿಯಾ
ರಶೀದ್ ಖಾನ್
ಮಹಮ್ಮದ್ ಶಮಿ
ಅಲ್ಝಾರಿ ಜೋಸೆಫ್
ಯಶ್ ದಯಾಲ್
ಲೂಕಿ ಫಗ್ರ್ಯೂಸನ್