IPL 2022- GT vs LSG – ದೋಸ್ತಿಗಳ ಸವಾಲು.. ಜಿಟಿ ಮತ್ತು ಎಲ್ ಎಸ್ ಜಿ ತಂಡಗಳ ಪ್ಲೇಯಿಂಗ್ ಇಲೆವೆನ್..!

ಮಾರ್ಚ್ 28. ಸಂಜೆ 7.30ಕ್ಕೆ . 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ನಾಲ್ಕನೇ ಪಂದ್ಯ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಹೋರಾಟ ನಡೆಸಲಿವೆ.
ಒಂದು ರೀತಿಯಲ್ಲಿ ಇದು ಆಪ್ತ ಸ್ನೇಹಿತರ ನಡುವಿನ ಹೋರಾಟ. ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆ.ಎಲ್. ರಾಹುಲ್ ಸಾರಥ್ಯ ವಹಿಸಲಿದ್ದಾರೆ.
ಅಂದ ಹಾಗೇ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈ ಬಾರಿಯ ಐಪಿಎಲ್ ನ ಹೊಸ ತಂಡಗಳು. ಹೀಗಾಗಿ ತಂಡಗಳ ನಡುವಿನ ಅಂಕಿ ಅಂಶಗಳು, ದಾಖಲೆಗಳು ಯಾವುದು ಇಲ್ಲ. ಆದ್ರೆ ಆಟಗಾರರ ಐಪಿಎಲ್ ದಾಖಲೆಗಳು ಐಪಿಎಲ್ ರೆಕಾರ್ಡ್ ಬುಕ್ ನಲ್ಲಿವೆ.

ಇನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಹೊಸ ಜವಾಬ್ದಾರಿ. ಇದೇ ಮೊದಲ ಬಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ 16 ವಯೋಮಿತಿಯ ತಂಡವನ್ನು ಮುನ್ನಡೆಸಿದ್ದ ಅನುಭವ ಇದೆ. ಅದನ್ನು ಬಿಟ್ರೆ, ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಹಾಗೂ ಸೌರಾಷ್ಟ್ರ ತಂಡದಲ್ಲಿ ಆಡಿರುವ ಅನುಭವ ಇದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಯಾವ ರೀತಿ ಮುನ್ನಡೆಸುತ್ತಾರೆ ಅನ್ನೋ ಕುತೂಹಲವಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥಿ ಕೆ.ಎಲ್. ರಾಹುಲ್ ಅನುಭವಿ ಆಟಗಾರ. ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಅನುಭವ ಇದೆ. ಹಾಗೇ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿದ್ರೂ ನಾಯಕನಾಗಿ ಕೆ.ಎಲ್. ರಾಹುಲ್ ಸಾಧನೆ ಕೂಡ ಅಷ್ಟಕ್ಕಷ್ಟೇ. IPL 2022- GT vs LSG – Predicting Pandya-led Gujarat’s playing XI against kl rahuls Lucknow
ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಮ್ಯಾಚ್ ವಿನ್ನಿಂಗ್ ಮಾಡುವಂತಹ ಆಟಗಾರರು ಇದ್ದಾರೆ. ತಂಡ ಬ್ಯಾಲೆನ್ಸ್ ಆಗಿದ್ದು, ಅಂತಿಮ ಹನ್ನೊಂದರ ಬಳಗದಲ್ಲಿ ಯಾರು ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲವಿದೆ.
ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಬಲಿಷ್ಠವಾಗಿಯೇ ಇದೆ. ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರು ಇದ್ದಾರೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದಾಗಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು..!
ಶುಬ್ಮನ್ ಗಿಲ್, ಮ್ಯಾಥ್ಯೂ ವಾಡೆ (ವಿಕೆಟ್ ಕೀಪರ್), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ಟೆವಾಟಿಯಾ, ರಶೀದ್ ಖಾನ್, ಆರ್. ಸಾಯಿ ಕಿಶೋರ್. ಲೂಕಿ ಫಗ್ರ್ಯುಸನ್, ಮಹಮ್ಮದ್ ಶಮಿ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು…!
ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಷ್ ಪಾಂಡೆ, ದೀಪಕ್ ಹೂಡಾ, ಎವಿನ್ ಲೂಯಿಸ್, ಕೃನಾಲ್ ಪಾಂಡ್ಯ, ದುಶ್ಮಂತ ಚಾಮೀರಾ, ಕೆ. ಗೌತಮ್, ರವಿ ಬಿಷ್ಣೋಯ್, ಆಂಡ್ರ್ಯೂ ಟೈ, ಆವೇಶ್ ಖಾನ್.