IPL 2022- ಕ್ಯಾಪಿಟಲ್ಸ್ ಮೇಲೆ ಕಿಂಗ್ಸ್ ಸವಾರಿ..! Punjab Kings Probable Playing XI
2022ರ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಏಪ್ರಿಲ್ 20ರಂದು ಮುಖಾಮುಖಿಯಾಗಲಿವೆ.
ಟೂರ್ನಿಯ 32ನೇ ಪಂದ್ಯ ಮುಂಬೈನ ಬ್ರೆಬೋರ್ನ್ ಅಂಗಣದಲ್ಲಿ ನಡೆಯಲಿದೆ.
ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಏಳನೇ ಪಂದ್ಯವನ್ನು ಆಡಲಿದೆ. ಈಗಾಗಲೇ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರು ಪಂದ್ಯಗಳಲ್ಲಿ ಸೋಲು ಮತ್ತು ಗೆಲುವುಗಳನ್ನು ಕಂಡಿದೆ.
ಗಾಯದಿಂದ ಬಳಲುತ್ತಿದ್ದ ನಾಯಕ ಮಯಾಂಕ್ ಅಗರ್ ವಾಲ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಗೆಲುವು – ಸೋಲು, ಗೆಲುವು – ಸೋಲು, ಗೆಲುವು – ಸೋಲುಗಳನ್ನು ಕಂಡಿರುವ ಪಂಜಾಬ್ ಕಿಂಗ್ಸ್ ಡೆಲ್ಲಿ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಹೊಡಿಬಡಿ ಆಟಗಾರರು ಇದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ಕೊರತೆ ಕಾಡುತ್ತಿದೆ. ಮುಖ್ಯವಾಗಿ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಟ್ ನಿಂದಲೂ ಸರಾಗವಾಗಿ ರನ್ ಗಳು ಹರಿದುಬರುತ್ತಿಲ್ಲ. ಶಿಖರ್ ಧವನ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಇನ್ನು ಜಾನಿ ಬೇರ್ ಸ್ಟೋವ್ ಮತ್ತು ಲಿಯಾನ್ ಲಿವಿಂಗ್ ಸ್ಟೋನ್ ತಂಡದ ಪ್ರಮುಖ ಪಿಲ್ಲರ್ ಗಳು. ಇನ್ನುಳಿದಂತೆ ಶಾರೂಕ್ ಖಾನ್ ಕೂಡ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಒಡಿಯನ್ ಸ್ಮಿತ್ ಕೂಡ ಪರಿಣಾಮಕಾರಿಯಾಗುತ್ತಿಲ್ಲ. ಈ ಸಮಸ್ಯೆ ನಿವಾರಣೆಯಾದ್ರೆ ಪಂಜಾಬ್ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. IPL 2022- delhi capitals Vs punjab kings – Punjab Kings Probable Playing XI
ಇನ್ನೊಂದೆಡೆ ಬೌಲಿಂಗ್ ನಲ್ಲಿ ರಾಹುಲ್ ಚಾಹರ್, ಆರ್ಶಾದೀಪ್ ಸಿಂಗ್ ಪರವಾಗಿಲ್ಲ. ಕಾಗಿಸೊ ರಬಾಡ ಇನ್ನಷ್ಟು ಮಾರಕವಾಗಿ ಪರಿಣಮಿಸಬೇಕಿದೆ. ಹಾಗೇ ವೈಭವ್ ಆರೋರಾ ಜಾಗದಲ್ಲಿ ಸಂದೀಪ್ ಶರ್ಮಾ ಆಡಿದ್ರೂ ಆಡಬಹುದು.
ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಆಡಬೇಕಿದೆ. ಉಭಯ ತಂಡಗಳಲ್ಲಿ ಬಿರುಸಿನ ಬ್ಯಾಟ್ಸ್ ಮೆನ್ ಗಳು ಇರುವುದರಿಂದ ಬೌಲರ್ ಗಳು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕಾಗುತ್ತದೆ. ಮುಖ್ಯವಾಗಿ ಡೆಲ್ಲಿ ತಂಡದ ಡೇವಿಡ್ ವಾರ್ನರ್, ಪೃಥ್ವಿ ಶಾ ಮತ್ತು ರಿಷಬ್ ಪಂತ್ ಅವರನ್ನು ಕಟ್ಟಿಹಾಕಲು ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಗಳು ಪ್ಲಾನ್ ಮಾಡಿಕೊಳ್ಳಬೇಕಿದೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ)
ಶಿಖರ್ ಧವನ್
ಜಾನಿ ಬೇರ್ ಸ್ಟೋವ್
ಲಿಯಾನ್ ಲಿವಿಂಗ್ ಸ್ಟೋನ್
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ಒಡಿಯನ್ ಸ್ಮಿತ್
ಶಾರೂಕ್ ಖಾನ್
ಕಾಗಿಸೊ ರಬಾಡ
ರಾಹುಲ್ ಚಾಹರ್
ವೈಭವ್ ಆರೋರಾ/ ಸಂದೀಪ್ ಶರ್ಮಾ
ಆರ್ಶಾದೀಪ್ ಸಿಂಗ್