IPL 2022- PBKS Vs DC – ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಓಟ ಮುಂದುವರಿಸುತ್ತಾ ? Delhi Capitals Vs Punjab Kings Head-to-Head Records
ಏಪ್ರಿಲ್ 20. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 32. ಸಮಯ ರಾತ್ರಿ 7.30. ಮುಂಬೈನ ಬ್ರಬೋರ್ನ್ ಅಂಗಣ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಕಾದಾಟ.
ಹೌದು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್.. ಎರಡು ತಂಡಗಳ ಶಕ್ತಿ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್. ಆದ್ರೆ ದುರ್ಬಲ ಬೌಲಿಂಗ್ ವಿಭಾಗ. ಹೀಗಾಗಿ ಈ ಪಂದ್ಯದಲ್ಲಿ ಎರಡು ತಂಡಗಳ ಬ್ಯಾಟರ್ ಗಳು ಬೌಲರ್ ಗಳ ಮೇಲೆ ಸವಾರಿ ಮಾಡೋದು ಖಚಿತ. IPL 2022- Delhi Capitals Vs Punjab Kings Head-to-Head Records
ಈ ಹಿಂದಿನ ಪಂದ್ಯವನ್ನು ಸೋತಿರುವ ಉಭಯ ತಂಡಗಳು ಈ ಪಂದ್ಯದಲ್ಲಿ ಗೆಲುವನ್ನೇ ಎದುರು ನೋಡುತ್ತಿದೆ. ಗಾಯಗೊಂಡಿದ್ದ ಮಯಾಂಕ್ ಅಗರ್ ವಾಲ್ ಮತ್ತೆ ಪಂಜಾಬ್ ತಂಡದ ಸಾರಥಿಯಾಗಲಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಏನು ಇರಲ್ಲ.
ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಕೋವಿಡ್ ನಿಂದ ಬಳಲುತ್ತಿರುವ ಮಿಟ್ಚೆಲ್ ಮಾರ್ಷ್ ಹಾಗೂ ಲಯ ಕಳೆದುಕೊಂಡಿರುವ ಆನ್ರಿಕ್ ನೊಕಿಯಾ ಅವರು 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಹೀಗೆ ಲುಂಗಿ ಎನ್ ಗಿಡಿ ಇವರ ಸ್ಥಾನವನ್ನು ಪಡೆದುಕೊಳ್ಳಬಹುದು. ಅದೇ ರೀತಿ ನೀರಸ ಪ್ರದರ್ಶನ ನೀಡಿರುವ ರೊವ್ಮನ್ ಪೊವೆಲ್ ಬದಲು ಟಿಮ್ ಸೆಫರ್ಟ್ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಸಫ್ರಝಾ ಖಾನ್ ಬದಲು ಯುವ ಬ್ಯಾಟ್ಸ್ ಮೆನ್ ಯಶ್ ಧೂಲ್ ಗೆ ಅವಕಾಶ ನೀಡಬಹುದು. ಹೀಗೆ ಕೆಲವೊಂದು ಬದಲಾವಣೆ ಮಾಡಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ಮೇಲೆ ಸವಾರಿ ಮಾಡುವ ಸಾಧ್ಯತೆಗಳಿವೆ.
ಇನ್ನು ಉಭಯ ತಂಡಗಳ ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದೆ. ಇಲ್ಲಿಯರೆಗೆ ಆಡಿರುವ 28 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ 13 ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಆದ್ರೆ ಕಳೆದ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳನ್ನು ಗೆದ್ರೆ, ಪಂಜಾಬ್ ಕಿಂಗ್ಸ್ ಏಕೈಕ ಪಂದ್ಯವನ್ನು ಮಾತ್ರ ಜಯಿಸಿದೆ.
ಅಷ್ಟೇ ಅಲ್ಲ, 2021ರ ಐಪಿಎಲ್ ನ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ನಗೆ ಬೀರಿದೆ.
ಸದ್ಯ ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರು ಸೋಲು ಮತ್ತು ಗೆಲುವುಗಳನ್ನು ಕಂಡಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳನ್ನು ಸೋತಿದೆ.
ಒಟ್ಟಿನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಕಿಂಗ್ಸ್ ವಿರುದ್ಧ ಗೆಲುವಿನ ಸವಾರಿ ಮುಂದುವರಿಸುತ್ತಾ ಅನ್ನೋ ಕುತೂಹಲವಿದೆ