ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ಗಳ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಪಂಜಾಬ್ ಕಿಂಗ್ಸ್ 115 ರನ್ಗಳ ಅಲ್ಪಮೊತ್ತಕ್ಕೆ ಕುಸಿದಿದೆ.
ಬ್ರಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಪರಿಣಾಮ 20 ಓವರ್ಗಳಲ್ಲಿ 115 ರನ್ಗಳಿಸಿ ಸರ್ವಪತನ ಕಂಡಿತು. ಪಂಜಾಬ್ ಪರ ಜಿತೇಶ್ ಶರ್ಮ(32) ಹಾಗೂ ಮಯಂಕ್ ಅಗರ್ವಾಲ್(24) ತಂಡಕ್ಕೆ ಆಸರೆಯಾದರು.
ಪಂಜಾಬ್ ಬ್ಯಾಟಿಂಗ್ ವೈಫಲ್ಯ:
ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದ ಶಿಖರ್ ಧವನ್(9), ಜಾನಿ ಬೈರ್ಸ್ಟೋವ್(9) ಹಾಗೂ ಲಿವಿಂಗ್ಸ್ಟೋನ್(2) ಡೆಲ್ಲಿ ಬೌಲರ್ಗಳಿಗೆ ಶರಣಾದರು. ಆದರೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮಯಂಕ್ ಅಗರ್ವಾಲ್ 24 ರನ್(15 ಬಾಲ್, 4 ಬೌಂಡರಿ) ಉಪಯುಕ್ತ ರನ್ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಜಿತೇಶ್ ಶರ್ಮ 32 ರನ್(23 ಬಾಲ್, 5 ಬೌಂಡರಿ) ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಆದರೆ ನಂತರ ಬಂದ ಶಾರೂಕ್ ಖಾನ್(12), ಕಗೀಸೋ ರಬಾಡ(2), ನಾಥನ್ ಎಲ್ಲಿಸ್(0) ಬಹುಬೇಗನೆ ನಿರ್ಗಮಿಸಿದರೆ. ರಾಹುಲ್ ಚಹರ್(12), ಅರ್ಶದೀಪ್ ಸಿಂಗ್(9) ಹಾಗೂ ವೈಭವ್ ಅರೋರ(2*) ಸಹ ಉಪಯುಕ್ತ ರನ್ಗಳಿಸಿ ತಂಡದ ಮೊತ್ತವನ್ನ 100ರ ಗಡಿದಾಟಿಸಿದರು.
ಡೆಲ್ಲಿ ಆಕ್ರಮಣಕಾರಿ ದಾಳಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು, ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಸಂಪೂರ್ಣ ಕಡಿವಾಣ ಹಾಕಿದರು. ಸಾಂಘಿಕ ಬೌಲಿಂಗ್ ದಾಳಿ ನಡೆಸಿದ ಡೆಲ್ಲಿ ತಂಡದ ಪರ ಕುಲ್ದೀಪ್ ಯಾದವ್ (2/24), ಅಕ್ಸರ್ ಪಟೇಲ್(2/10), ಕಲೀಲ್ ಅಹ್ಮದ್(2/19), ಲಲಿತ್ ಯಾದವ್(2/11) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರೆ. ಮುಸ್ತಫಿಜು಼ರ್ 1 ವಿಕೆಟ್ ಪಡೆದು ಮಿಂಚಿದರು.