IPL 2022- DC Vs PBKS – ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ ಅನಿವಾರ್ಯ ..! Delhi Capitals Probable Playing XI
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.
ಏಪ್ರಿಲ್ 20ರಂದು ಮುಂಬೈನ ಬ್ರಬೋರ್ನ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಸಹಜವಾಗಿಯೇ ಗೆಲುವನ್ನು ಎದುರು ನೋಡುತ್ತಿವೆ.
ಈ ಹಿಂದಿನ ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ಗೆಲುವಿನ ಲಯ ಕಂಡುಕೊಳ್ಳಲು ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಬಾರಿಯ ಪ್ರದರ್ಶನ ತುಂಬಾನೇ ನೀರಸವಗಿದೆ. ಉತ್ತಮ ಆರಂಭ ಸಿಕ್ಕಿದ್ರೂ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಗೆಲ್ಲಿಸಿಕೊಡುವಂತಹ ಬ್ಯಾಟ್ಸ್ ಮೆನ್ ಗಳ ಕೊರತೆ ಕಾಣುತ್ತಿದೆ.
ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದಿರುವುದು ಬರೀ ಎರಡು ಪಂದ್ಯಗಳನ್ನು ಮಾತ್ರ. ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಸದ್ಯ ಎಂಟನೇ ಸ್ಥಾನದಲ್ಲಿದೆ.
ಹೀಗಾಗಿ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯವಾಗಿದೆ.
ಆರಂಭಿಕರಾಗಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಕ್ರೀಸ್ ನಲ್ಲಿದ್ದಷ್ಟು ಸಮಯ ಎದುರಾಳಿ ತಂಡಕ್ಕೆ ಅಪಾಯ ತಪ್ಪಿದ್ದಲ್ಲ.
ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡದಿರುವುದು ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ನಾಯಕ ರಿಷಬ್ ಪಂತ್ ಒತ್ತಡದಲ್ಲೇ ಆಡಬೇಕಾದ ಪರಿಸ್ಥಿತಿ ಇದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮೆನ್ ಯಶ್ ಧೂಲ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅದೇ ರೀತಿ ಕಳಪೆ ಪ್ರದರ್ಶನ ನೀಡುತ್ತಿರುವ ರೊವ್ಮನ್ ಪಾವೆಲ್ ಬದಲು ಟಿಮ್ ಸಫೆರ್ಟ್ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಅದೇ ರೀತಿ ವೇಗಿ ಮುಷ್ತಾಫಿಝುರ್ ರಹಮಾನ್ ಜಾಗದಲ್ಲಿ ಲುಂಗಿ ಎನ್ ಗಿಡಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಖಲೀಲ್ ಅಹಮ್ಮದ್ ಸ್ಥಾನವೂ ಗ್ಯಾರಂಟಿ ಇಲ್ಲ. ಖಲೀಲ್ ಸ್ಥಾನದಲ್ಲಿ ಚೇತನ್ ಸಕಾರಿಯಾ ಆಡಿದ್ರೂ ಅಚ್ಚರಿ ಏನಿಲ್ಲ. IPL 2022- DC Vs PBKS – Delhi Capitals Probable Playing XI
ಇನ್ನು ಆಲ್ ರೌಂಡರ್ ವಿಭಾಗದಲ್ಲಿ ಲಲಿತ್ ಯಾದವ್, ಶಾರ್ದೂಲ್ ಥಾಕೂರ್ ಮತ್ತು ಅಕ್ಷರ್ ಪಟೇಲ್ ಇನ್ನೂ ಜವಾಬ್ದಾರಿಯುತವಾಗಿ ಆಡಬೇಕಿದೆ. ಕುಲದೀಪ್ ಯಾದವ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.
ಈ ನಡುವೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋವಿಡ್ ಸೋಂಕಿನ ಆತಂಕವೂ ಇದೆ. ಆಲ್ ರೌಂಡರ್ ಮಿಟ್ಚೆಲ್ ಮಾರ್ಶ್ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನೊಂಡೆ ಆನ್ರಿಕ್ ನೊಕಿಯಾ ಕೂಡ ಉತ್ತಮ ಫಾರ್ಮ್ ನಲ್ಲಿಲ್ಲ.
ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಕ್ಕಚಾರ ಈ ಬಾರಿ ಬುಡಮೇಲಾಗಿದೆ. ಆದ್ರೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಾವುದೇ ಹಂತದಲ್ಲೂ ತಿರುಗೇಟು ನೀಡುವಂತಹ ಆಟಗಾರರು ಇದ್ದಾರೆ ಎಂಬುದನ್ನು ಮರೆಯುವ ಹಾಗಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೇವಿಡ್ ವಾರ್ನರ್
ಪೃಥ್ವಿ ಶಾ
ಯಶ್ ಧೂಳ್
ರಿಷಬ್ ಪಂತ್
ಟಿಮ್ ಸೆಫರ್ಟ್
ಲಲಿತ್ ಯಾದವ್
ಅಕ್ಷರ್ ಪಟೇಲ್
ಶಾರ್ದೂಲ್ ಥಾಕೂರ್
ಕುಲದೀಪ್ ಯಾದವ್
ಖಲೀಲ್ ಅಹಮ್ಮದ್ /ಚೇತನ್ ಸಕಾರಿಯಾ
ಲುಂಗಿ ಎನ್ ಗಿಡಿ