IPL 2022- DC vs MI – ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇಬ್ಬರು ಮಾತ್ರ ವಿದೇಶಿ ಆಟಗಾರರು.. ಕಾರಣ ಏನು ?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿದೇಶಿ ಆಟಗಾರರ ಕೊರತೆ ಕಾಡಿತ್ತು.
ಹೌದು, ಸಾಮಾನ್ಯವಾಗಿ ಐಪಿಎಲ್ ನಲ್ಲಿ ನಾಲ್ಕಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಆಡುವಂತಿಲ್ಲ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಇಟ್ಟುಕೊಂಡು ಕಣಕ್ಕಿಳಿಯಿತ್ತು.
ನ್ಯೂಜಿಲೆಂಡ್ ನ ಟಿಮ್ ಸೆಫರ್ಟ್ ಮತ್ತು ವೆಸ್ಟ್ ಇಂಡೀಸ್ ನ ರೊವ್ಮ,ನ್ ಪಾವೆಲ್ ಅವರು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದರು.
ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್, ಮಿಟ್ಚೆಲ್ ಮಾರ್ಶ್, ಮುಸ್ತಾಫಿಝುರ್ ರಹಮಾನ್, ಲುಂಗಿ ಎನ್ ಗಿಡಿ ಅವರು ಇನ್ನೂ ಕೂಡ ತಂಡವನ್ನು ಸೇರಿಕೊಂಡಿಲ್ಲ. ಇನ್ನೊಂದೆಡೆ ತಂಡದ ಪ್ರಮುಖ ಬೌಲರ್ ಆನ್ರಿಚ್ ನೊರ್ಟೆಜೆ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ.

ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯಕ್ಕೆ ಕೇವಲ ಇಬ್ಬರು ವಿದೇಶಿ ಆಟಗಾರರು ಮಾತ್ರ ಇದ್ದಾರೆ. 9 ಮಂದಿ ಭಾರತೀಯ ಆಟಗಾರರು ಆಡುತ್ತಿದ್ದಾರೆ.
ಹಾಗಂತ ಐಪಿಎಲ್ ಇತಿಹಾಸದಲ್ಲಿ ಈ ರೀತಿಯಾಗಿರುವುದು ಇದೇನೂ ಹೊಸತಲ್ಲ. ಈ ಹಿಂದೆಯೂ ಒಂದು ಬಾರಿ ಆಗಿದೆ. 2011ರ ಐಪಿಎಲ್ ನಲ್ಲಿ ಸಿಎಸ್ ಕೆ ವಿರುದ್ಧ ಕೆಕೆಆರ್ ತಂಡಕ್ಕೂ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಮುಖ ವಿದೇಶಿ ಆಟಗಾರರು ವಿವಿಧ ಕಾರಣಗಳಿಂದ ಒಂದು ಪಂದ್ಯಕ್ಕೆ ಮಿಸ್ ಆಗಿದ್ದರು. ಆಗ ಕೆಕೆಆರ್ ತಂಡದಲ್ಲಿ ಜಾಕ್ ಕಾಲಿಸ್ ಮತ್ತು ಇಯಾನ್ ಮೊರ್ಗಾನ್ ಮಾತ್ರ ಆಡಿದ್ದರು. IPL 2022- DC vs MI – Delhi Capitals just 2 overseas players in playing XI
ಈಗಾಗಲೇ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆ 177 ರನ್ ಗಳಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ಇಶಾನ್ ಕಿಶಾನ್ ಅಜೇಯ 81 ರನ್ ಗಳಿಸಿದ್ರೆ, ರೋಹಿತ್ ಶರ್ಮಾ 41 ರನ್ ದಾಖಲಿಸಿದ್ರು. ತಿಲಕ್ ವರ್ಮಾ 22 ರನ್ ಗಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿದೆ. ತಂಡದ ಪ್ರಮುಖ ಆಟಗಾರರು ಈಗಾಗಲೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅಲ್ಲದೆ ಸೋಲಿನ ಭೀತಿಯಲ್ಲೂ ಇದೆ.