IPL 2022- DC – David Warner ಅಲ್ಲು ಅರ್ಜುನ್ ಪುಷ್ಪ ಚಿತ್ರದ ಸ್ಟೈಲ್ ನಲ್ಲೇ ಗೆಲುವನ್ನು ಸಂಭ್ರಮಿಸಿದ್ದ ಡೇವಿಡ್ ವಾರ್ನರ್..!
ಡೇವಿಡ್ ವಾರ್ನರ್. 15ನೇ ಆವೃತ್ತಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ಮೆಷಿನ್ ಆಗಿದ್ದಾರೆ. ಹಾಗಂತ ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ಇದೇನೂ ಹೊಸತಲ್ಲ. 9 ವರ್ಷಗಳ ಹಿಂದೆ ಡೇವಿಡ್ ವಾರ್ನರ್ ಡೆಲ್ಲಿ ತಂಡದ ಪರ ಆಡಿದ್ದರು. ಇದೀಗ ಎರಡನೇ ಬಾರಿ ಆಡುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 60 ರನ್ ಸಿಡಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ರು.
ಈ ವೇಳೆ ತಮ್ಮ ಮಕ್ಕಳ ಬಗ್ಗೆ ಡೇವಿಡ್ ವಾರ್ನರ್ ಮಾತನಾಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಡೇವಿಡ್ ವಾರ್ನರ್ ಮಕ್ಕಳಾದ ಇಂಡಿ ರೇ ವಾರ್ನರ್ ಮತ್ತು ಐವಿ ಮೇ ವಾರ್ನರ್ ಗ್ಯಾಲರಿಯಲ್ಲಿ ಕುಳಿತುಕೊಂಡು ಅಪ್ಪನ ಬ್ಯಾಟಿಂಗ್ ವೈಖರಿಯನ್ನು ನೋಡಿಕೊಂಡು ಎಂಜಾಯ್ ಮಾಡುತ್ತಿದ್ದರು.
ಪಂದ್ಯದ ನಂತರ ಮಾತನಾಡಿದ ಡೇವಿಡ್ ವಾರ್ನರ್ ಅವರು, ತಮ್ಮ ಮಕ್ಕಳು ಏನು ಕೇಳುತ್ತಿದ್ದಾರೆ ಮತ್ತು ಕ್ರಿಕೆಟ್ ಅನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ನಾನು ಶತಕ ಯಾಕೆ ದಾಖಲಿಸುವುದಿಲ್ಲ ಎಂದು ನನ್ನನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ಜೋಸ್ ಬಟ್ಲರ್ ನಂತರ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಯಾಕೆ ಹೊಡೆಯುತ್ತಿಲ್ಲ ಎಂದು ಕೇಳುತ್ತಾರೆ. ಅವರು ಜೋಸ್ ಬಟ್ಲರ್ ನ ಆಟವನ್ನು ನೋಡಿದ್ದಾರೆ. ಅವರಿಗೆ 60 ರನ್ ಸಾಕಾಗುವುದಿಲ್ಲ ಎಂದು ನಗುತ್ತಲೇ ಹೇಳಿದ್ರು ಡೇವಿಡ್ ವಾರ್ನರ್.
ಎಲ್ಲವೂ ದೇವರ ಆಶೀರ್ವಾದ. ಅವರಿಗೆ ಕ್ರಿಕೆಟ್ ಆಟ ಈಗ ಅರ್ಥವಾಗುತ್ತಿದೆ. ನಾವು ಏನು ಮಾಡುತ್ತಿದ್ದೇವೆ ಎಂಬುದು ಮಕ್ಕಳಿಗೆ ತಿಳಿಯುತ್ತಿದೆ. ಇದು ನನ್ನ ಅದೃಷ್ಟ. ಅಷ್ಟೇ ಅಲ್ಲ, ನೀವು ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ಕೂಡ ಅವರಿಗೆ ಅರ್ಥವಾಗುತ್ತಿದೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ನಂತರ ನಾವು ಹಂಡ್ರೆಡ್ ಪರ್ಸೆಂಟ್ ಬದ್ಧತೆಯನ್ನು ನೀಡುತ್ತೇವೆ. ಕ್ರಿಕೆಟ್, ಫ್ಯಾಷನ್, ಐಪಿಎಲ್ ಎಂದು ಡೇವಿಡ್ ವಾರ್ನರ್ ತನ್ನ ಸಾಮಾಜಿಕ ಜಾಲ ತಾಣದಲ್ಲೂ ಬರೆದುಕೊಂಡಿದ್ದಾರೆ. David Warner celebrated the thumping victory against the Punjab Kings in typical style, imitating the signature step from Allu Arjun’s blockbuster Pushpa.
ಇನ್ನು ಡೇವಿಡ್ ವಾರ್ನರ್ ಅವರಿಗೆ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಮೇಲೆ ಹೆಚ್ಚಿನ ಬಾಂಧವ್ಯ ಇತ್ತು. ತಂಡದ ನಾಯಕನಾಗಿಯೂ ಇದ್ರು.. ಹೀಗಾಗಿ ಹೈದ್ರಬಾದ್ ಸಂಸ್ಕøತಿಯನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗು ಚಿತ್ರ ರಂಗವನ್ನು ತುಂಬಾನೇ ಇಷ್ಟಪಡುತ್ತಿದ್ದರು. ತೆಲುಗು ಚಿತ್ರಗಳ ಹಾಡಿಗೆ ತನ್ನ ಮಕ್ಕಳ ಜೊತೆ ಡ್ಯಾನ್ಸ್ ಮಾಡಿಕೊಂಡು ಸಾಮಾಜಿಕ ಜಾಣದಲ್ಲೂ ಶೇರ್ ಮಾಡಿಕೊಂಡಿದ್ದರು. ಅದರಲ್ಲೂ ಅಲ್ಲು ಅರ್ಜುನ್ ಅವರನ್ನು ತುಂಬಾನೇ ಇಷ್ಟಪಡುತ್ತಿದ್ದರು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ವಿರುದ್ಧ ಗೆದ್ದ ನಂತರ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಸಿಗ್ನೇಚರ್ ಸ್ಟೈಲ್ ನಲ್ಲೇ ಗೆಲುವನ್ನು ಆಚರಿಸಿಕೊಂಡಿದ್ದರು. ಡೇವಿಡ್ ವಾರ್ನರ್ ಅವರ ಈ ಸ್ಟೈಲ್ ಗೆ ನಾಯಕ ರಿಷಬ್ ಪಂತ್ ಕೂಡ ಸಾಥ್ ನೀಡಿದ್ರು.