IPL 2022- CSK Vs MI- ಸಿಎಸ್ ಕೆ ವಿರುದ್ಧ ಗೆಲ್ಲುತ್ತಾ ಮುಂಬೈ ಇಂಡಿಯನ್ಸ್ ? Mumbai Indians predicted playing XI
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಹೋರಾಟ ನಡೆಸಲಿವೆ.
ಮುಂಬೈ ನ ಡಿ.ವೈ. ಪಾಟೀಲ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಮಾಜಿ ಚಾಂಪಿಯನ್ ತಂಡಗಳ ನಡುವಿನ ಕಾದಾಟವಾಗಲಿದೆ.
ಹಾಲಿ ಹಾಗೂ ಮಾಜಿ ಚಾಂಪಿಯನ್ ತಂಡಗಳಾದ ಸಿಎಸ್ ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿಯ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದೆ.
ಉಭಯ ತಂಡಗಳು ಈಗಾಗಲೇ ಆರು ಪಂದ್ಯಗಳನ್ನು ಆಡಿವೆ. ಇದರಲ್ಲಿ ಸಿಎಸ್ ಕೆ ತಂಡ ಒಂದು ಪಂದ್ಯ ಮಾತ್ರ ಗೆದ್ದಿದೆ. ಇನ್ನುಳಿದ ಐದು ಪಂದ್ಯಗಳನ್ನು ಸೋತಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಆಡಿರುವ ಆರು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡ ಈ ರೀತಿಯ ಪ್ರದರ್ಶನವನ್ನು ಐಪಿಎಲ್ ನಲ್ಲಿ ನೀಡಿಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶ ಕನಸಿ ಮಾತಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಲೀಗ್ ನ ಇನ್ನುಳಿದ ಪಂದ್ಯಗಳಲ್ಲಿ ಪ್ರಯೋಗಕ್ಕೆ ಮುಂದಾಗಬಹುದು. ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶವನ್ನು ನೀಡುವ ಸಾಧ್ಯತೆಯೂ ಇದೆ. ಅದರಲ್ಲೂ ಇಂದಿನ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. IPL 2022- CSK Vs MI-Mumbai Indians predicted playing XI
ಇನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ ಭಾರವಾಗುತ್ತಿದ್ದಾರೆ. ಇವರಿಬ್ಬರಿಂದ ನಿರೀಕ್ಷಿತ ಆಟವೇ ಬಂದಿಲ್ಲ. ಆದ್ರೆ ಬ್ರೇವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕಿರಾನ್ ಪೊಲಾರ್ಡ್ ಅದ್ಭುತ ಫಾರ್ಮ್ ನಲ್ಲಿದ್ರೂ ತಂಡಕ್ಕೆ ಜಯ ತಂದುಕೊಡುವಲ್ಲಿ ವಿಫಲರಾಗುತ್ತಿದ್ದಾರೆ.
ಮತ್ತೊಂದೆಡೆ ಬೌಲಿಂಗ್ ವಿಭಾಗ ತುಂಬಾನೇ ದುರ್ಬಲವಾಗಿದೆ. ಜಸ್ಪ್ರಿತ್ ಬೂಮ್ರಾ, ಟೈಮಲ್ ಮಿಲ್ಸ್, ಜಯದೇವ್ ಉನಾದ್ಕಟ್ ಹಾಗೂ ಎಮ್. ಅಶ್ವಿನ್ ಹೆಚ್ಚು ಪರಿಣಾಮಕಾರಿಯಾಗುತ್ತಿಲ್ಲ. ಇದು ಮುಂಬೈ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಇನ್ನೊಂದೆಡೆ ಅರ್ಜುನ್ ತೆಂಡುಲ್ಕರ್ 11ರ ಬಳಗದಲ್ಲಿ ಕಾಣಿಸಿಕೊಂಡ್ರೆ ಯಾರು ಹೊರಗುಳಿಯುತ್ತಾರೆ ಅನ್ನೋದು ಕೂಡ ಮುಖ್ಯವಾಗಿರುತ್ತದೆ.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಖಾತೆ ತೆರೆಯಲು ಜಿದ್ದಾಜಿದ್ದಿನ ಹೋರಾಟವನ್ನು ನಡೆಸಲೇಬೇಕು. ಮುಖ್ಯವಾಗಿ ಮುಂಬೈ ಇಂಡಿಯನ್ಸ್ ತಂಡ ಸಂಘಟಿತವಾದ ಆಟವನ್ನು ಆಡಲೇಬೇಕು. ಇಲ್ಲದೆ ಇದ್ರೆ ಮತ್ತೊಂದು ಸೋಲು ಖಚಿತ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ಇಶಾನ್ ಕಿಶಾನ್ (ವಿಕೆಟ್ ಕೀಪರ್)
ರೋಹಿತ್ ಶರ್ಮಾ (ನಾಯಕ)
ಡೆವಾಲ್ಡ್ ಬ್ರೇವಿಸ್
ತಿಲಕ್ ವರ್ಮಾ
ಸೂರ್ಯ ಕುಮಾರ್ ಯಾದವ್
ಕಿರಾನ್ ಪೊಲಾರ್ಡ್
ಫಾಬಿಯನ್ ಆಲೆನ್
ಮುರುಗನ್ ಅಶ್ವಿನ್ / ಅರ್ಜುನ್ ತೆಂಡುಲ್ಕರ್
ಜಯದೇವ್ ಉನಾದ್ಕಟ್
ಜಸ್ಪ್ರಿತ್ ಬೂಮ್ರಾ
ಟೈಮಲ್ ಮಿಲ್ಸ್