ipl 2022 – ಸಸ್ಪೆನ್ಸ್.. ಬಿಲ್ಡಪ್ ನೋಡಿದ್ರೆ ವಿರಾಟ್ ಕೊಹ್ಲಿಯೇ ಆರ್ ಸಿಬಿ ಕ್ಯಾಪ್ಟನ್..?

ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಅನ್ನೋ ಪ್ರಶ್ನೆಗೆ ಎರಡು ವರ್ಷ ಕಾಯಬೇಕಾಯ್ತು..! 2015ರಿಂದ 2017ರವರೆಗೆ ಬಾಹುಬಲಿ – ಕಟ್ಟಪ್ಪ ಟ್ರೆಂಡಿಂಗ್ ಸುದ್ದಿಯಾಗಿತ್ತು.
ಇದೀಗ ಆರ್ ಸಿಬಿಯ ನೂತನ ನಾಯಕ ಯಾರು ಅನ್ನೋ ಪ್ರಶ್ನೆಗೆ ಮಾರ್ಚ್ 12 ಸಂಜೆ ನಾಲ್ಕು ಗಂಟೆಗೆ ಗೊತ್ತಾಗಲಿದೆ. ಆದ್ರೆ ಆರ್ ಸಿಬಿ ನಾಯಕತ್ವದ ವಿಚಾರವನ್ನು ಆರ್ ಸಿಬಿ ಹೈಕಮಾಂಡ್ ಬಾಹುಬಲಿ ಚಿತ್ರದಷ್ಟೇ ಕುತೂಹಲವನ್ನು ಮೂಡಿಸುವಂತೆ ಮಾಡಿದೆ.
ದಿನಕ್ಕೊಂದು ಪ್ರೋಮೋ.. ಟೀಸರ್ ಬಿಟ್ಟುಕೊಂಡು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ. ಆರ್ ಸಿಬಿ ತನ್ನ ಬ್ರ್ಯಾಂಡ್ ಗೆ ತಕ್ಕಂತೆ ಆರ್ ಸಿಬಿ ನಾಯಕನ ಘೋಷಣೆಯನ್ನು ಬಿಂಬಿಸುತ್ತಿದೆ.
ಇನ್ನೊಂದೆಡೆ ಆರ್ ಸಿಬಿ ನಾಯಕತ್ವದ ರೇಸ್ ನಲ್ಲಿ ಫಾಪ್ ಡುಪ್ಲೇಸಸ್, ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. IPl 2022 – Could Virat Kohli return as Royal Challengers Bangalore
ಈ ನಡುವೆ, ಆರ್ ಸಿಬಿ ಇದೀಗ ಹೊಸ ಟೀಸರ್ ಅನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಆರ್ ಸಿಬಿಯ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಿದ್ದಾರೆ. ಹಾಗೇ ಇನ್ನೊಂದು ಟೀಸರ್ ನಲ್ಲಿ ನಾಯಕತ್ವ ವಹಿಸುವ ಆಟಗಾರರ ಕೈ ಬೆರಳು, ಜೆರ್ಸಿ ಮತ್ತು ಹೆಲ್ಮೆಟ್ ಅನ್ನು ತೋರಿಸುತ್ತಿರುವ ಆಟಗಾರನ ಚಿತ್ರವಿದೆ. ಆದ್ರೆ ಆಟಗಾರನ ಮುಖವನ್ನು ಮಾತ್ರ ತೋರಿಸದೇ ಸಸ್ಪೆನ್ಸ್ ನಲ್ಲಿಟ್ಟಿದೆ. ಮಾರ್ಚ್ 12 ಸಂಜೆ ನಾಲ್ಕು ಗಂಟೆಗೆ ಆರ್ ಸಿಬಿಯ ನೂತನ ನಾಯಕನ ಘೋಷಣೆಯಾಗಲಿದೆ.

ಇನ್ನೊಂದೆಡೆ ಆರ್ ಸಿಬಿ ತನ್ನ ಹೊಸ ನಾಯಕನ ಆಯ್ಕೆಯ ಬಗ್ಗೆ ಸಾಕಷ್ಟು ಬಿಲ್ಡಪ್ ಕೊಡುತ್ತಿದೆ. ಇದನ್ನು ನೋಡಿದಾಗ ವಿರಾಟ್ ಕೊಹ್ಲಿಯೇ ಆರ್ ಸಿಬಿಯ ನಾಯಕ ಅನ್ನೋದರಲ್ಲಿ ಸಂದೇಹವೇ ಇಲ್ಲ ಅನ್ಸುತ್ತೆ. ಅದು ಅಲ್ಲದೆ ಆರ್ ಸಿಬಿ ಶೇರ್ ಮಾಡಿಕೊಂಡಿರುವ ವಿಡಿಯೋ ಫೋಟೋವನ್ನು ನೋಡಿದಾಗ ಕೂಡ ವಿರಾಟ್ ಕೊಹ್ಲಿಯವರನ್ನೇ ಹೋಲುವಂತಿದೆ.
ಇನ್ನು ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕ ಯಾಕೆ ಆಗಬೇಕು ಅನ್ನೋ ಪ್ರಶ್ನೆಗೂ ಉತ್ತರವಿದೆ. ಈ ಹಿಂದೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕ ಕೂಡ ಆಗಿದ್ದರು. ಆರ್ ಸಿಬಿ ನಾಯಕತ್ವ ತ್ಯಜಿಸಿದ್ದ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದರು.
ಹೀಗಾಗಿ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾದಲ್ಲಿ ಆಗಿರುವ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಹಠವಿದೆ. ಅದಕ್ಕಾಗಿಯೇ ಆರ್ ಸಿಬಿಯನ್ನು ಅಸ್ತ್ರವಾಗಿ ಪ್ರಯೋಗ ಮಾಡಲಿದ್ದಾರೆ.
ಹೇಳಿ ಕೇಳಿ ಆರ್ ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಹೃದಯದಲ್ಲಿಟ್ಟುಕೊಂಡಿದ್ದಾರೆ. ಅಲ್ಲದೆ ಆರ್ ಸಿಬಿ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಬೇಸರವೂ ಇದೆ. ಹೀಗಾಗಿ ಮತ್ತೆ ನಾಯಕತ್ವ ವಹಿಸಿಕೊಂಡು ಕಪ್ ಗೆದ್ದು ಬಿಸಿಸಿಐ ವಿರುದ್ದ ಸೇಡು ತೀರಿಸಿಕೊಳ್ಳಬೇಕು. ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಅನ್ನೋ ಕಾರಣಕ್ಕೆ ವಿರಾಟ್ ಕೊಹ್ಲಿ ಮತ್ತೆ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡಿರಬಹುದು.
ಒಟ್ಟಿನಲ್ಲಿ ಆರ್ ಸಿಬಿಯ ಬಿಲ್ಡಪ್..ನಾಯಕತ್ವವನ್ನು ಈ ಮಟ್ಟದಲ್ಲಿ ವೈಭವೀಕರಿಸಲು ಮುಂದಾಗಿರುವುದನ್ನು ನೋಡಿದ್ರೆ ವಿರಾಟ್ ಕೊಹ್ಲಿಯೇ ಆರ್ ಸಿಬಿಯ ನಾಯಕ ಅನ್ನೋದು ಪಕ್ಕಾ ಸುದ್ದಿ..!