IPL 2022 – ಸೂರತ್ ನಲ್ಲಿ ಸಿಎಸ್ ಕೆ ತಂಡ – ಮಾರ್ಚ್ 2ರಿಂದ ಅಭ್ಯಾಸ ಶುರು..!

2022ರ ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಶುರುವಾಗಲಿದೆ. ಈಗಾಗಲೇ ಫ್ರಾಂಚೈಸಿಗಳು ಭರದ ಸಿದ್ಧತೆ ನಡೆಸುತ್ತಿವೆ.
ಮೆಗಾ ಹರಾಜಿನಲ್ಲಿ ಆಟಗಾರರನ್ನು ಖರೀದಿ ಮಾಡಿರುವ ಫ್ರಾಂಚೈಸಿಗಳು ಈಗ ತಂಡದ ಕಾಂಬಿನೇಷನ್ ಹೇಗಿರಬೇಕು ಎಂಬುದರ ಬಗ್ಗೆ ಯೋಜನೆ ಹಾಕಿಕೊಳ್ಳುತ್ತಿವೆ.
ಸದ್ಯ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ದದ ಟಿ-20 ಸರಣಿ ಆಡುತ್ತಿದೆ. ಬಳಿಕ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ ಟೀಮ್ ಇಂಡಿಯಾ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ. ಹಾಗೇ ವಿದೇಶಿ ಆಟಗಾರರು ಕೆಲವರು ತಂಡವನ್ನು ಸೇರಿಕೊಂಡಿದ್ರೆ, ಮತ್ತೆ ಕೆಲವರು ಐಪಿಎಲ್ ಟೂರ್ನಿ ಶುರುವಾಗುವ ಒಂದು ವಾರಗಳ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾರ್ಚ್ 2ರಿಂದ ಸೂರತ್ ನಲ್ಲಿ ಅಭ್ಯಾಸವನ್ನು ಶುರು ಮಾಡಲಿದೆ.
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಸಿಎಸ್ ಕೆ ತಂಡ ಸೂರತ್ ಅನ್ನು ತರಬೇತಿಗಾಗಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಮುಂಬೈ ಅಂಗಣಗಳನ್ನು ಸಿದ್ಧಪಡಿಸಿದ್ಧ ಹಾಗೇ ಸೂರತ್ ನಲ್ಲಿ ಸಿಎಸ್ ಕೆ ತಂಡ ಪ್ರತ್ಯೇಕವಾಗಿ ಪಿಚ್ ಅನ್ನು ಸಿದ್ಧಪಡಿಸಿದೆ.

13ನೇ ಬಾರಿ ಸಿಎಸ್ ಕೆ ತಂಡವನ್ನು ಮುನ್ನಡೆಸುತ್ತಿರುವ ಎಮ್. ಎಸ್. ಧೋನಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ತನ್ನ ವೃತ್ತಿ ಬದುಕಿನ ಇಳಿ ವಯಸ್ಸಿನಲ್ಲಿರುವ ಧೋನಿ ಐದನೇ ಬಾರಿ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದ್ದಾರೆ. ಆ ನಿಟ್ಟಿನಲ್ಲಿ ಸಿಎಸ್ ಕೆ ತಂಡವನ್ನು ಸಿದ್ಧಪಡಿಸಲಿದ್ದಾರೆ. ಈ ನಡುವೆ, ಸುರೇಶ್ ರೈನಾ ಅವರ ಆಪ್ತ ಸ್ನೇಹಿತ ಸುರೇಶ್ ರೈನಾ ಈ ಬಾರಿ ತಂಡದಲ್ಲಿಲ್ಲ. ಸುರೇಶ್ ರೈನಾ ಅವರನ್ನು ಸಿಎಸ್ ಕೆ ಆಯ್ಕೆ ಮಾಡಿಕೊಳ್ಳದಿರುವ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ರೆ, ಸಿಎಸ್ ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಈ ಬಾರಿಯ ಐಪಿಎಲ್ ನಿಯಮದಲ್ಲಿ ಬದಲಾವಣೆಯಾಗಿದೆ. ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. IPL 2022: Chennai Super Kings To Start Preparations From March 2 In Surat
ಬಿ ಬಣದಲ್ಲಿರುವ ಸಿಎಸ್ ಕೆ, ಆರ್ ಸಿಬಿ, ಎಸ್ ಆರ್ ಎಚ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಎದುರಿಸಬೇಕಾಗುತ್ತದೆ.
ಇನ್ನು ತರಬೇತಿ ಶಿಬಿರದಲ್ಲಿ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಮತ್ತು ಡ್ವೆನ್ ಬ್ರೇವೋ ಕೂಡ ಭಾಗಿಯಾಗಲಿದ್ದಾರೆ. ಸಿಎಸ್ ಕೆ ತಂಡ ಸೂರತ್ ನಲ್ಲಿ ಅಭ್ಯಾಸ ನಡೆಸುವುದನ್ನು ಸೂರತ್ ಜಿಲ್ಲಾ ಕ್ರಿಕೆಟ್ ಸಂಸ್ಥೆ ಸ್ಪಷ್ಟಪಡಿಸಿದೆ.