IPL 2022- csk – ಸೂರತ್ ನಲ್ಲಿ ಸಿಂಗಂ.. ಅಭ್ಯಾಸ ಶಿಬಿರದಲ್ಲಿ ಧೋನಿ & ಟೀಮ್..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಮಾರ್ಚ್ 26ರಿಂದ ಆರಂಭವಾಗಲಿರುವ 2022ರ ಸಾಲಿನ ಐಪಿಎಲ್ ಟೂರ್ನಿಗೆ ಸಿಎಸ್ ಕೆ ತಂಡ ಸೂರತ್ ನಲ್ಲಿ ತರಬೇತಿ ಶಿಬಿರವನ್ನು ಆಯೋಜನೆ ಮಾಡಿದೆ.
ಮಾಚ 4ರಿಂದ ತರಬೇತಿ ಶುರು ಮಾಡಲಿದೆ. ಈ ಹಿನ್ನೆಲೆಯಲ್ಲಿ ಸಿಎಸ್ ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸೂರತ್ ಗೆ ಆಗಮಿಸಿದ್ದಾರೆ.
ಎರಡು ವಾರಗಳ ಕಾಲ ನಡೆಯಲಿರುವ ತರಬೇತಿ ಶಿಬಿರಕ್ಕೆ ಧೋನಿ, ಅಂಬಟಿ ರಾಯುಡು, ತುಷಾರ್ ದೇಶಪಾಂಡೆ , ಕೆ.ಎಮ್. ಅಸೀಫ್ ಸೇರಿದಂತೆ ಕೆಲವು ಆಟಗಾರರು ಆಗಮಿಸಿದ್ದಾರೆ.
ತರಬೇತಿ ಶಿಬಿರದಲ್ಲಿ ಡ್ವೆನ್ ಬ್ರೇವೋ, ರವೀಂದ್ರ ಜಡೇಜಾ ಕೂಡ ಭಾಗಿಯಾಗಿದ್ದಾರೆ. ಟೆಸ್ಟ್ ಸರಣಿ ಮುಗಿದ ತಕ್ಷಣ ಜಡೇಜಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹಾಗೇ ಮೊದಲ ಹಂತದ ರಣಜಿ ಪಂದ್ಯ ಮುಗಿದ ಬಳಿಕ ಸಿಎಸ್ ಕೆ ತಂಡದ ದೇಸಿ ಆಟಗಾರರು ಕೂಡ ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. IPL 2022- Chennai Super Kings players arrive in Surat to kick off preparations
ಈ ನಡುವೆ, ಸಿಎಸ್ ಕೆ ತಂಡಕ್ಕೆ ದೀಪಕ್ ಚಾಹರ್ ಅವರ ಗಾಯದ ಸಮಸ್ಯೆ ಆಘಾತವನ್ನುಂಟು ಮಾಡಿದೆ. ಬಹುತೇಕ ದೀಪಕ್ ಚಾಹರ್ ಅವರು ಈ ಬಾರಿಯ ಐಪಿಎಲ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ದೀಪಕ್ ಚಾಹರ್ ಗಾಯಗೊಂಡಿದ್ದರು. ಗಾಯದಿಂದ ಚೇತರಿಸಿಕೊಳ್ಳಲು ಚಾಹರ್ ಗೆ ಎಂಟು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಬದಲಿ ಆಟಗಾರನ ಮೊರೆ ಹೋಗಬೇಕಾಗಿದೆ ಚೆನ್ನೈ ಸೂಪರ್ ಕಿಂಗ್ಸ್. ಐಪಿಎಲ್ ಮೆಗಾ ಹರಾಜಿನಲ್ಲಿ ದೀಪಕ್ ಚಾಹರ್ ಅವರನ್ನು 14 ಕೋಟಿ ರೂಪಾಯಿ ನೀಡಿ ಸಿಎಸ್ ಕೆ ಖರೀದಿ ಮಾಡಿತ್ತು.