IPL 2022- ಆರಂಭದ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯ..?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾದ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಸಿಸಿಐ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಜೊತೆ ಮಾತನಾಡುವ ಅನಿವಾರ್ಯತೆ ಇದೆ.
ಏಪ್ರಿಲ್ 15ರವರೆಗೆ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ಪ್ರವಾಸವನ್ನು ಮಾಡಲಿದೆ. ಬಾಂಗ್ಲಾ ದೇಶದ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿ ಮಾರ್ಚ್ 18ರಿಂದ ಏಪ್ರಿಲ್ 12ವರೆಗೆ ನಡೆಯಲಿದೆ.
ಐಪಿಎಲ್ ನಲ್ಲಿ ಕ್ವಿಂಟನ್ ಡಿಕಾಕ್ ಅವರು ಲಕ್ನೋ

ಸೂಪರ್ ಜೈಂಟ್ಸ್, ಕಾಗಿಸೊ ರಬಾಡ ಪಂಜಾಬ್ ಕಿಂಗ್ಸ್, ಆನ್ರಿಚ್ ನೊರ್ಟೆಜೆ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕೊ ಜಾನ್ಸನ್ ಸನ್ ರೈಸರ್ಸ್ ಹೈದ್ರಬಾದ್ ಮತ್ತು ಲುಂಗಿ ಎನ್ ಗಿಡಿ ಅವರು ಆಡಲಿದ್ದಾರೆ. ಆದ್ರೆ ಇವರೆಲ್ಲಾ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಿಗೆ ಲಭ್ಯರಾಗುತ್ತಾರೋ ಇಲ್ಲವೊ ಅನ್ನೋದು ಇನ್ನು ತಿಳಿದುಬಂದಿಲ್ಲ. IPL 2022- Anrich Nortje doubtful due to injury, BCCI to contact CSA over player availability
ಇನ್ನುಳಿದಂತೆ ರಸೆಯ್ ಡೆರ್ ಡುಸಾನ್, ಆಡೇನ್ ಮಕ್ರ್ರಾಮ್, ಡೇವಿಡ್ ಮಿಲ್ಲರ್, ಫಾಫ್ ಡು ಪ್ಲೇಸಸ್ ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ.
ಇನ್ನೊಂದೆಡೆ ಆನ್ರಿಚ್ ಫಿಟ್ ನೆಸ್ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ವೈದ್ಯಕಿ ಯ ವಿಭಾಗದಿಂದ ಸ್ಪಷ್ಟನೆ ಬಂದಿಲ್ಲ. ಆನ್ರಿಚ್ ಅವರು ಗಾಯದಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರು ದಕ್ಷಿಣ ಆಫ್ರಿಕಾ ತಂಡಕ್ಕೂ ಆಯ್ಕೆಯಾಗಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆತಂಕದಲ್ಲಿದೆ. ಅದು ಅಲ್ಲದೆ ಎನ್‍ಗಿಡಿ ಅವರು ಬಾಂಗ್ಲಾ ದೇಶ ವಿರುದ್ಧದ ಏಕದಿನ ಸರಣಿಯ ತಂಡದಲ್ಲಿದ್ದಾರೆ.
ಈ ನಡುವೆ ಬಿಸಿಸಿಐ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆ ಕೂಡ ನಡೆಸಲಿದೆ.