IPL 2022 _DC vs MI – ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ.. ಉಭಯ ತಂಡಗಳ 11ರ ಬಳಗ ಹೀಗಿದೆ..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂಬೈನ ಬ್ರಬೊರ್ನ್ ಅಂಗಣದಲ್ಲಿ ಹೋರಾಟ ನಡೆಸಲಿವೆ.
ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೂರ್ಯ ಕುಮಾರ್ ಯಾದವ್ 11 ರ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಇದು ತಂಡಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಲಿದೆ. ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆನ್ರಿಚ್ ನೊರ್ಟೆಜೆ ಕೂಡ ಆಡುತ್ತಿಲ್ಲ. ಡೇವಿಡ್ ವಾರ್ನರ್ ಕೂಡ 11ರ ಬಳಗದಲ್ಲಿಲ್ಲ.
ಈ ಹಿಂದಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಸವಾಲನ್ನು ಬೆನ್ನಟ್ಟಿ 9 ಪಂದ್ಯಗಳನ್ನು ಗೆದ್ದಿದೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿದ್ದ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. IPL 2022 _DC vs MI – Delhi Capitals have won the toss and have opted to field
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆಎನ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶಾನ್, ತಿಲಕ್ ವರ್ಮಾ, ಆನ್ ಮೋಲ್ ಪ್ರಿತ್ ಸಿಂಗ್, ಕಿರಾನ್ ಪೊಲಾರ್ಡ್, ಟಿಮ್ ಡೇವಿಡ್, ಡಾನಿಯಲ್ ಸ್ಯಾಮ್ಸ್, ಮುರುಗನ್ ಆಶ್ವಿನ್, ಟೈಮಲ್ ಮಿಲ್ಸ್, ಜಸ್ಪ್ರಿತ್ ಬೂಮ್ರಾ, ಬಾಸಿಲ್ ಥಂಪಿ
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಪೃಥ್ವಿ ಶಾ, ಟಿಮ್ ಸೆಫೆರ್ಟ್, ಮನ್ ದೀಪ್ ಸಿಂಗ್, ರಿಷಬ್ ಪಂತ್ (ನಾಯಕ), ರೊವ್ಮನ್ ಪಾವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್, ಖಲೀಲ್ ಅಹಮ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರ್ಕೋಟಿ