ಪಾಕಿಸ್ತಾನ ಬ್ಯಾಟರ್ ಶಾನ್ ಮಸೂದ್ಗೆ ಮೈದಾನದಲ್ಲಿದ್ದ ಸ್ಪೈಡರ್ಕ್ಯಾಮ್ ಔಟ್ ಆಗದಂತೆ ಬಚಾವ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ಐತಿಹಾಸಿಕ ಮೆಲ್ಬೋರ್ನ್ ಮೈದಾನದಲ್ಲಿ ಭಾರತ – ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ಬ್ಯಾಟರ್ ಶಾನ್ ಮಸೂದ್ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು.
ವಿರಾಟ್ ಕೊಹ್ಲಿ ಎಸೆದ ಚೆಂಡಿನಿಂದ ಶಾನ್ ಮಸೂದ್ ರನೌಟ್ನಿಂದ ಪಾರಾಗಿದ್ದರು.ನಂತರ ಅಶ್ವಿನ್ ಬೌಂಡರಿ ಲೈನ್ನಲ್ಲಿ ಹಿಡಿದಿದ್ದ ಕ್ಯಾಚ್ ನೆಲಕ್ಕೆ ಬಿದ್ದಿದ್ದು ಸ್ಪಷ್ಟವಾಗಿದ್ದರಿಂದ ಜೀವದಾನ ಪಡೆದಿದ್ದರು.
ನಂತರ ಸ್ಪಿನ್ನರ್ ಆರ್.ಅಶ್ವಿನ್ ಎಸೆದ ಓವರ್ನಲ್ಲಿ ಶಾನ್ ಮಸೂದ್ ಹೊಡೆದ ಚೆಂಡು ನೇರವಾಗಿ ವಿರಾಟ್ ಕೊಹ್ಲಿ ಸೇರಬೇಕಿತ್ತು. ಚೆಂಡು ಆಕಾಶದಲ್ಲಿ ಸ್ಪೈಡರ್ಕ್ಯಾಮ್ನ ಕೇಬಲ್ಗೆ ಬಡಿದಿದ್ದರಿಂದ ಚೆಂಡು ಬೇರೆ ದಿಕ್ಕಿನತ್ತ ಸಾಗಿತು. ಚೆಂಡು ದಿಕ್ಕು ಬದಲಿಸದಿದ್ದರೆ ನೇರವಾಗಿ ಕೊಹ್ಲಿ ಕೈ ಸೇರುತ್ತಿತ್ತು.
ಪ್ರತಿಷ್ಠಿತ ಟೂರ್ನಿಗಳಲ್ಲಿ ಕಳೆದ 10 ವರ್ಷದಿಂದ ಸ್ಪೈಡರ್ಕ್ಯಾಮ್ ಬಳಸಿಕೊಳ್ಳಲಾಗುತ್ತಿದೆ. 2010ರ ಐಪಿಎಲ್ಗೂ ಮುನ್ನ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ನಲ್ಲೂ ಬಳಸಲಾಗಿತ್ತು.
ಈ ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಸ್ಪೈಡರ್ಕ್ಯಾಮ್ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಾ ಬಂದಿವೆ.
2014-15ರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೇಳೆ ಚೆಂಡು ಕ್ಯಾಮರಾ ಕೇಬಲ್ಗೆ ಬಡಿದಿದ್ದರಿಂದ ಸ್ಟೀವ್ ಸ್ಮಿತ್ ಕ್ಯಾಚ್ ಹಿಡಿಯುವ ಅವಕಾಶದಿಂದ ವಂಚಿತರಾಗಿದ್ದರು.