INDvsPAk ಬದ್ದ ವೈರಿ ಪಾಕಿಸ್ತಾನ ವಿರುದ್ಧದ ಬ್ಲಾಕ್ ಬಸ್ಟರ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದ ಕುರಿತು ರೋಹಿತ್, ಫೇವರಿಟ್, ಅಂಡರ್ ಡಾಗ್ಸ್ ಶಬ್ದಗಳನ್ನು ನಂಬುವುದಿಲ್ಲ. ಒಳ್ಳೆಯ ಮನಸ್ಥಿತಿಯಿಂದ ನೀವು ಮೈದಾನಕ್ಕಿಳಿಯದಿದ್ದರೆ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪಾಕ್ ವಿರುದ್ಧದ ಕದನ ನಮಗೆ ಒತ್ತಡ ಎಂದು ಭಾವಿಸುವುದಿಲ್ಲ ಆದರೆ ಅದು ಚಾಲೆಂಜಿಂಗ್. ನಾನು ಎಲ್ಲಾ ಬಾರಿಯೂ ಪಾಕ್ ಉತ್ತಮ ಪ್ರದರ್ಶನ ನೀಡಿದೆ.
ಪಾಕಿಸ್ತಾನದ ಬೌಲಿಂಗ್ ಚೆನ್ನಾಗಿದೆ.ನಮ್ಮ ಬ್ಯಾಟರ್ಗಳು ಒಳ್ಳೆಯ ಅನುಭವ ಹೊಂದಿದ್ದಾರೆ. ನಾಳಿನ ಪಂದ್ಯ ಕುತೂಹಲ ಮೂಡಿಸಿದೆ. ನಮಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಮುಖ್ಯ. ಜೊತೆಗೆ ಫಿಲ್ಡಿಂಗ್ ಅನ್ನು ಮರೆಯಬಾರದು ಎಂದರು.
ಚಿಕ್ಕ ಮೈದಾನಗಳ ಕುರಿತು, ಪರ್ತ್ನಲ್ಲಿ ಅಭ್ಯಾಸ ಮಾಡುವಾಗ ದೊಡ್ಡ ಬೌಡರಿಯಿಟ್ಟು ಅಡಿದೆವು. ನಾಳಿನ ಪಂದ್ಯದಲ್ಲಿ ಚಿಕ್ಕ ಮೈದಾನದಲ್ಲಿ ಆಡುತ್ತೇವೆ ಎಂದು ಭಾವಿಸುವುದಿಲ್ಲ.
ಪ್ಲೇಯಿಂಗ್ ಇಲೆವೆನ್ ಕುರಿತು ರೋಹಿತ್ ಶರ್ಮಾ ಎಲ್ಲಾ 15 ಆಟಗಾರರು ಫಿಟ್ ಆಗಿದ್ದಾರೆ, ಎಂದು ಮಾಹಿತಿ ನೀಡಿದ್ದಾರೆ. ಮಳೆ ಭೀತಿ ಕುರಿತು ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ ಎಂದಿದ್ದಾರೆ.