ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ನೀಡಿದೆ.
ಇವರ ಸ್ಥಾನವನ್ನು ತುಂಬಿದ ಘಾತಕ ವೇಗಿ ಮೊಹ್ಮದ್ ಶಮಿ ಅಭ್ಯಾಸ ಪಂದ್ಯ ಹಾಗೂ ನೆಟ್ಸ್ ನಲ್ಲಿ ಬೊಂಬಾಟ್ ಸ್ಪೆಲ್ ಮಾಡಿ ನಾಯಕ ರೋಹಿತ್ ಶರ್ಮಾ ಅವರ ಮನ ಗೆದ್ದಿದ್ದಾರೆ.
ಶನಿವಾರ ಪಾಕಿಸ್ತಾನ ವಿರುದ್ಧದ ಬ್ಲಾಕ್ ಬಸ್ಟರ್ ಎನ್ಕೌಂಟರ್ಗೆ ಸಜ್ಜಾಗುತ್ತಿರುವ ಬೆನ್ನಲ್ಲೆ ಮೊಹ್ಮದ್ ಶಮಿ ನೆಟ್ಸ್ ಅದ್ಭುತ ಎಸೆತಗಳನ್ನು ಹಾಕಿ ನಾಯಕನನ್ನು ಇಂಪ್ರೆಸ್ ಮಾಡಿದರು.
ಐಸಿಸಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಶಮಿ ಎಸೆತ ಎದುರಿಸಿದ ನಂತರ ರೋಹಿತ್ ಶರ್ಮಾ, ಶಮಿ ತುಂಬ ಡೇಜರಸ್ ಬೌಲರ್ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಟಿ20 ವಿಶ್ವಕಪ್ಗೂ ಮುನ್ನ ಶಮಿ ಅವರನ್ನು ಮೀಸಲು ಆಟಗಾರನಾಗಿ ನೇಮಿಸಿತ್ತು. ಆ ಸಂದರ್ಭದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ನಂತರ ಎನ್ ಸಿಎ ಅಕಾಡೆಮಿಯಲ್ಲಿ ಫಿಟ್ನೆಸ್ ಸಾಬೀತುಪಡಿಸಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟರು.

ಮೊನ್ನೆ ಆಸ್ಟ್ರೆಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ಕೊನೆಯ ಓವರ್ ಹಾಕಿದ ಶಮಿ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.
ಶಮಿ ಪಾಕ್ ವಿರುದ್ಧದ ಪಂದ್ಯದಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.