ಮುಂಬರುವ ಅಮಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ನಾಯಕ ಪ್ಯಾಟ್ ಕಮಿನ್ಸ್ ಎರಡನೆ ಟೆಸ್ಟ್ ಮುಗಿದ ತಕ್ಷಣ ತವರಿಗೆ ಮರಳಿದರು. ಕಮಿನ್ಸ್ ಅವರ ತಾಯಿ ಕ್ಯಾನ್ಸರ್ ನಿಂದ ನರಳುತ್ತಿದ್ದು ಕಮಿನ್ಸ್ ಸಿಡ್ನಿಗೆ ಮರಳಿದರು.
ಇಂದೋರ್ ಟೆಸ್ಟ್ನಲ್ಲಿ ಹಂಗಾಮಿ ನಾಯಕನಾಗಿ ಆಯ್ಕೆಯಾದ ಸ್ಟೀವ್ ಸ್ಮಿತ್ ಇದೀಗ ಅಹಮದಾಬಾದ್ ಟೆಸ್ಟ್ ಗೂ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮೂರನೆ ಟೆಸ್ಟ್ ಮುಗಿದ ನಂತರ ನಾಯಕನಾಗಿ ಕಾರ್ಯನಿರ್ವಹಿಸುವ ಅವಧಿ ಮುಗಿದಿದೆ. ನಾಯಕನಾಗಿ ಮುಂದುವರೆಯಲು ನನಗೆ ಆಸಕ್ತಿ ಇಲ್ಲ ಎಂದಿದ್ದ
ರು. ಉಪಖಂಡದಲ್ಲಿ ನಾಯಕನಾಗಿ ಕಾರ್ಯನಿರ್ವಹಣೆಯನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ ಎಂದಿದ್ದರು. ಪ್ರತಿ ಎಸೆತವೂ ವಿಭಿನ್ನವಾಗಿದ್ದು ಬೇರೆ ಜಗತ್ತಿಗಿಂತ ತುಂಬ ವ್ಯತ್ಯಾಸವಿದ ಎಂದಿದ್ದರು.