ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಭಾನುವಾರ ಇಲ್ಲಿನ ವಿಡಿಸಿಎ ಮೈದಾನದಲ್ಲಿ ನಡೆಯಲಿರುವ ಎರಡನೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸರಣಿ ಗೆಲ್ಲಲು ಹೋರಾಡಲಿದೆ. ತಂಡಕ್ಕೆ ನಾಯಕ ರೊಹೀತ್ ಶರ್ಮಾ ಮರಳಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ ಹಾಗು ರವೀಂದ್ರ ಜಡೇಜಾ ಮತ್ತೊಮ್ಮೆ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.
ಇಂದಿನ ಪಂದ್ಯವನ್ನು ಗೆದ್ದು 2-0 ಮುನ್ನಡೆ ಪಡೆಯಲು ಭಾರತ ಸಜ್ಜಾಗಿದ್ದು ಬ್ಯಾಟಿಂಗ್‍ನಲ್ಲಿ ಸಾಕಷ್ಟು ಸುಧಾರಿಸಬೇಕಿದೆ. ಮೊದಲ ಪಂದ್ಯದಲ್ಲಿ ರಾಹುಲ್ ಹಾಗೂ ಜಡೇಜಾ ಕ್ರೀಸ್‍ಗೆ ಬರುವ ಮುನ್ನ 39ಕ್ಕೆ 4 ವಿಕೆಟ್ ಕಳೆÀದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿರುವುದರಿಂದ ಅಗ್ರ ಕ್ರಮಾಂಕಕ್ಕೆ ಬಲ ಬಂದಿದ್ದು ಮಿಚೆಲ್ ಸ್ಟಾರ್ಕ್ ದಾಳಿಯನ್ನು ಎದುರಿಸಬೇಕಿದೆ.
ಸ್ಟಾರ್ಕ್ ದಾಳಿಗೆ ವಿರಾಟ್ ಕೊಹ್ಲಿಘಿ(4), ಸೂರ್ಯ ಕುಮಾರ್(0) ಹಾಗೂ ಶುಭ್ಮನ್ ಗಿಲ್ (20) ಬೇಗನೆ ಪೆವಿಲಿಯನ್ ಸೇರಿದರು. ಇಶಾನ್ ಕಿಶನ್ (3ರನ್) ಮಾರ್ಕಸ್ ಸ್ಟೋಯ್ನಿಸ್‍ಗೆ ವಿಕೆಟ್ ಒಪ್ಪಿಸಿದರು.
ಗುಣಮಟ್ಟದ ಎಡಗೈ ವೇಗಿಗಳ ಮುಂದೆ ಟೀಮ್ ಇಂಡಿಯಾ ಬ್ಯಾಟರ್‍ಗಳು ನಿರಾಸೆ ಮೂಡಿಸಿದರು. ಇನ್ನೆರಡು ಪಂದ್ಯಗಳು ಮುಂಬರುವ ವಿಶ್ವಕಪ್‍ಗೆ ಒಳ್ಳೆಯ ಅಭ್ಯಾಸಸ ಸಿಗಲಿದೆ.
ಮಿಂಚಿದ ಶಮಿ, ಸಿರಾಜ್
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊನ್ನೆ ವಾಂಖೆಡೆ ಅಂಗಳದಲ್ಲಿ ಮೊಹ್ಮದ್ ಶಮಿ ಹಾಗೂ ಮೊಹ್ಮದ್ ಸಿರಾಜ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ವೇಗಿಗಳಿಗೆ ಪಿಚ್ ನೆರವಾಗಿದ್ದರಿಂದ ಸ್ಪಿನ್ನರ್ ಕುಲ್ದೀಪ್ ಯಾದವ್ ಪರದಾಡಿದರು.
ಪಂದ್ಯಕ್ಕೆ ಮಳೆ ಭೀತಿ ಇದ್ದು ಮೊದಲಾರ್ಧ ಮಳೆಗೆ ಆಹುತಿಯಾಗುವ ಸಾಧ್ಯತೆ ಇದೆ. ವೇಗಿಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯಯತೆ ಇದೆ.
ಪ್ರಯೋಗ ಮಾಡಲು ಆಸಿಸ್ ಸಿದ್ಧತೆ
ಸರಣಿ ಉಳಿಸಿಕೊಳ್ಳಲುಪಣ ತೊಟ್ಟಿರುವ ಆಸ್ಟ್ರೇಲಿಯಾ ತಂಡ ಪ್ರಯೋಗಳನ್ನು ಮಾಡಲು ನಿರ್ಧರಿಸಿದೆ. ಮಿಚೆಲ್ ಮಾರ್ಷ್, ಕ್ಯಾಮರೊನ್ ಗ್ರೀನ್, ಮಾರ್ಕಸ್ ಸ್ಟೋಯ್ನಿಸ್ ಮತ್ತು ಗ್ಲೇನ್ ಮ್ಯಾಕ್ಸ್‍ವೆಲ್ ಪರಿಣಾಮಕಾರಿಯಾಗಿ ಆಡಿಲ್ಲ.
ಆಸ್ಟ್ರೇಲಿಯಾ ತಂಡದ ಬೌಲಿಂಗ್ ಪ್ರಬಲವಾಗಿದ್ದು ಮಿಚೆಲ್ ಸ್ಟಾರ್ಕ್, ಸೀಯಾನ್ ಅಬೋಟ್, ಕ್ಯಾಮರೊನ್ ಗ್ರೀನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಮಿಂಚು ಹರಿಸುವ ತಾಕತ್ತು ಹೊಂದಿದ್ದಾರೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭ್ಮಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್, ಕೆ.ಎಲ್.ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯಜ್ವಿಂದರ್ ಚಾಹಲ್,ಮೊಹ್ಮದ್ ಶಮಿ, ಮೊಹ್ಮದ್ ಸಿರಾಜ್, ಉಮ್ರಾನ್ ಮಲ್ಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನಾದ್ಕತ್.
ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೋಯ್ನಿಸ್, ಆ್ಯಲೆಕ್ಸ್ ಕ್ಯಾರಿ, ಗ್ಲೇನ್ ಮ್ಯಾಕ್ಸ್‍ವೆಲ್, ಕ್ಯಾಮರೊನ್ ಗ್ರೀನ್, ಜೋಶ್ ಇಂಗ್ಲಿಸ್, ಸೀಯಾನ್ ಅಬೋಟ್, ಆಶ್ಟನ್ ಅಗಾರ್, ಮಿಚೆಲ್ ಸ್ಟಾರ್ಕ್, ನಾಥೇನ್ ಎಲ್ಲಿಸ್, ಆ್ಯಡಮ್ ಜಂಪಾ.